ಹೈದರಾಬಾದ್: ಐಪಿಎಲ್-2021 ಅನ್ನು ಕೋವಿಡ್ ಕಾರಣದಿಂದ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಹೀಗಾಗಿ ಈ ಸಮಯವನ್ನು ಸದುಪಯೊಗ ಮಾಡಿಕೊಳ್ತಿರುವ ಭಾರತದ ಮಾಜಿ ನಾಯಕ ಹಾಗೂ ಸಿಎಸ್ಕೆ ತಂಡದ ಕ್ಯಾಪ್ಟನ್ ಎಂ.ಎಸ್. ಧೋನಿ ಸದ್ಯ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.
-
👨👧 Kannane
— Chennai Super Kings - Mask P😷du Whistle P🥳du! (@ChennaiIPL) June 21, 2021 " class="align-text-top noRightClick twitterSection" data="
Kanney 💛#WhistlePodu #Yellove 🦁 pic.twitter.com/aQJPtuZnJg
">👨👧 Kannane
— Chennai Super Kings - Mask P😷du Whistle P🥳du! (@ChennaiIPL) June 21, 2021
Kanney 💛#WhistlePodu #Yellove 🦁 pic.twitter.com/aQJPtuZnJg👨👧 Kannane
— Chennai Super Kings - Mask P😷du Whistle P🥳du! (@ChennaiIPL) June 21, 2021
Kanney 💛#WhistlePodu #Yellove 🦁 pic.twitter.com/aQJPtuZnJg
ಇತ್ತೀಚೆಗೆ ಧೋನಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆಗಾಗ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ಹಂಚುತ್ತಿದ್ದಾರೆ. ತಾವು ಖರೀದಿ ಮಾಡಿದ ಹೊಸ ಕುದುರೆ ಜೊತೆ ಓಡುವ ವಿಡಿಯೋವನ್ನು ಅವರು ಇತ್ತೀಚೆಗೆ ಹಂಚಿಕೊಂಡಿದ್ದರು.
ಈಗ ಅಂಥದ್ದೇ ಒಂದು ಫೋಟೋ ಧೋನಿ ಅಭಿಮಾನಿಗಳನ್ನು ಸಂತೋಷಗೊಳಿಸಿದೆ. ಧೋನಿ ತಮ್ಮ ಮಗಳು ಜೀವಾ ಜೊತೆ ಇರುವ ಫೋಟೋವೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಮಾಹಿ ಮೀಸೆ ಬಿಟ್ಟಿದ್ದಾರೆ.
ಕೆಲವರು ಈ ಫೋಟೋ ನೋಡಿ ಸಿಂಗಂ ಎಂದು ಕರೆದರೆ, ಇನ್ನು ಕೆಲವರು "ಸುಂದರ ತಂದೆ ಮಗಳು" ಎಂದು ಬರೆದಿದ್ದಾರೆ.