ETV Bharat / sports

ಭಾರತ ತಂಡದ ಮಾರ್ಗದರ್ಶಕರಾಗಿ ಆಯ್ಕೆಯಾದ ಧೋನಿಯದ್ದು ವಿಶೇಷ ಪ್ರಕರಣ: ಕಪಿಲ್ ದೇವ್ ಬಣ್ಣನೆ

ಈ ಬಗ್ಗೆ ನಾನು ಸಾಕಷ್ಟು ಸಾರಿ ಹೇಳಿದ್ದೇನೆ. ಆದರೆ, ಇದು ವಿಶೇಷ ಪ್ರಕರಣ. ಕಾರಣ ವಿಶ್ವಕಪ್‌ ಇದ್ದುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಧೋನಿ ಮೆಂಟರ್​ ಆಗಿ ಆಯ್ಕೆ ಮಾಡಿದ್ದು ಒಳ್ಳೆಯ ನಿರ್ಧಾರ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಕಪಿಲ್ ದೇವ್
ಕಪಿಲ್ ದೇವ್
author img

By

Published : Sep 11, 2021, 8:01 PM IST

ಕೋಲ್ಕತ್ತಾ: ಯುಎಇಯಲ್ಲಿ ನಡೆಯಲಿರುವ ಮುಂಬರುವ ಟಿ-20 ವಿಶ್ವಕಪ್ 2021ಕ್ಕೆ ಭಾರತ ತಂಡದ ಮಾರ್ಗದರ್ಶಕರಾಗಿ ಮಾಜಿ ಆಟಗಾರ ಎಂಎಸ್ ಧೋನಿ ಅವರನ್ನು ನೇಮಿಸಿ ಆದೇಶ ನೀಡಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ದ ನಿರ್ಧಾರವನ್ನು ಟೀಂ ಇಂಡಿಯಾದ ಕ್ರಿಕೆಟ್​ ದಂತಕಥೆ ಕಪಿಲ್ ದೇವ್ ಶ್ಲಾಘಿಸಿದ್ದಾರೆ.

ಟಿ - 20 ವಿಶ್ವಕಪ್​ಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ. ಇನ್ನು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಪಡೆದ ಧೋನಿ ಅವರನ್ನು ಚುಟುಕು ವಿಶ್ವಕಪ್​ನಲ್ಲಿ ತಂಡದ ಮೆಂಟರ್ ಆಗಿ ಘೋಷಣೆ ಮಾಡಲಾಗಿದ್ದು, ಈ ನಿರ್ಧಾರವನ್ನು ಕಪಿಲ್ ದೇವ್ ಸ್ವಾಗತಿಸಿದ್ದಾರೆ.

ತಂಡಕ್ಕೆ ಧೋನಿ ಮತ್ತೆ ಆಗಮಿಸಿದ್ದರ ಬಗ್ಗೆ ಮಾತನಾಡಿರುವ ಕಪಿಲ್, ಕ್ರಿಕೆಟರ್ ಒಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಕನಿಷ್ಠ 3 ಅಥವಾ 4 ವರ್ಷಗಳ ಬಳಿಕ ಸಾಮಾನ್ಯವಾಗಿ ತಂಡಕ್ಕೆ ಮತ್ತೆ ಕೋಚಿಂಗ್ ಅಥವಾ ಬೆಂಬಲ ಸಿಬ್ಬಂದಿಯಾಗಿ ಸೇರಿಕೊಳ್ಳುತ್ತಾರೆ. ಈ ಬಗ್ಗೆ ನಾನು ಸಾಕಷ್ಟು ಸಾರಿ ಹೇಳಿದ್ದೇನೆ. ಆದರೆ, ಇದು ವಿಶೇಷ ಪ್ರಕರಣ. ವಿಶ್ವಕಪ್‌ ಇದ್ದುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಕೋಚ್ ರವಿ ಶಾಸ್ತ್ರಿ ಕೂಡ ಕೋವಿಡ್‌ ಸೋಂಕಿಗೆ ತುತ್ತಾಗಿದ್ದರಿಂದ ಇದೊಂದು ಒಳ್ಳೆಯ ನಿರ್ಧಾರ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.