ETV Bharat / sports

ವಯಸ್ಸು 40 ದಾಟಿದ ನಂತರ ಟಿ20 ತಂಡ ಮುನ್ನಡೆಸಿದ 3ನೇ ಭಾರತೀಯ ಧೋನಿ.. ಈ ಕನ್ನಡಿಗರಿಬ್ಬರೂ ಹಿಂದೆ ಬಿದ್ದಿಲ್ಲ! - ರಾಹುಲ್ ದ್ರಾವಿಡ್ ದಾಖಲೆ

ಧೋನಿಗೀಗ 40 ವರ್ಷ 298 ದಿನಗಳಾಗಿದ್ದು, ಭಾರತೀಯ ಟಿ20 ಕ್ರಿಕೆಟ್​ನ ಹಿರಿಯ ನಾಯಕರಾಗಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್​ ತಮ್ಮ 40 ವರ್ಷ, 268 ದಿನಗಳಿದ್ದಾಗ ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಕೊನೆಯ ಬಾರಿ ಮುನ್ನಡೆಸಿ ಚುಟುಕು ಕ್ರಿಕೆಟ್​ನ್ ಹಿರಿಯ ನಾಯಕ ಎನಿಸಿಕೊಂಡಿದ್ದರು..

MS Dhoni Surpasses Rahul Dravid's record of the eldest T20 captain In India
ಮಹೇಂದ್ರ ಸಿಂಗ್ ಧೋನಿ
author img

By

Published : May 2, 2022, 6:17 PM IST

ಪುಣೆ : ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಮೂಲಕ ಎಂಎಸ್​ ಧೋನಿ ಟಿ20 ಕ್ರಿಕೆಟ್​ ಇತಿಹಾಸದಲ್ಲಿ 40ರ ಹರೆಯದಲ್ಲೂ ನಾಯಕತ್ವವಹಿಸಿಕೊಂಡ ಭಾರತದ 3ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಅಷ್ಟೇ ಅಲ್ಲ, ಕನ್ನಡಿಗ ರಾಹುಲ್ ದ್ರಾವಿಡ್​ರನ್ನು ಹಿಂದಿಕ್ಕಿ ಅತ್ಯಂತ ಹಿರಿಯ ನಾಯಕ ಎನಿಸಿಕೊಂಡರು.

ಎಂಎಸ್ ಧೋನಿ 2022ರ ಆವೃತ್ತಿಯ ಐಪಿಎಲ್​ಗೆ ಕೆಲವೇ ದಿನಗಳಿರುವಾಗ ಸಿಎಸ್​ಕೆ ನಾಯಕತ್ವದಿಂದ ಕೆಳಗಿಳಿದು, ಆಲ್​ರೌಂಡರ್ ರವೀಂದ್ರ ಜಡೇಜಾ ಅವರಿಗೆ ವಹಿಸಿಕೊಟ್ಟಿದ್ದರು. ಆದರೆ, 8 ಪಂದ್ಯಗಳಲ್ಲಿ ಸಿಎಸ್​ಕೆ ಮುನ್ನಡೆಸಿದ ಜಡೇಜಾ 6 ಸೋಲು ಮತ್ತು 2 ಗೆಲುವಿನೊಂದಿಗೆ ನೀರಸ ಪ್ರದರ್ಶನ ತೋರಿದರು.

ಇದರಿಂದ ತಮ್ಮ ಆಟಕ್ಕೂ ತೊಂದರೆಯಾಗುತ್ತಿದೆ ಎಂದು ಭಾವಿಸಿದ ಜಡ್ಡು ಸಿಎಸ್​ಕೆ ನಾಯಕತ್ವ ತ್ಯಜಿಸಿದರು. ಹೈದರಾಬಾದ್​ ವಿರುದ್ಧ ಮತ್ತೆ ಎಂಎಸ್ ಧೋನಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಭಾರತದ ಅತ್ಯಂತ ಹಿರಿಯ ಟಿ20 ನಾಯಕ ಎನಿಸಿಕೊಂಡರು.

ಧೋನಿಗೀಗ 40 ವರ್ಷ 298 ದಿನಗಳಾಗಿದ್ದು, ಭಾರತೀಯ ಟಿ20 ಕ್ರಿಕೆಟ್​ನ ಹಿರಿಯ ನಾಯಕರಾಗಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್​ ತಮ್ಮ 40 ವರ್ಷ, 268 ದಿನಗಳಿದ್ದಾಗ ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಕೊನೆಯ ಬಾರಿ ಮುನ್ನಡೆಸಿ ಚುಟುಕು ಕ್ರಿಕೆಟ್​ನ್ ಹಿರಿಯ ನಾಯಕ ಎನಿಸಿಕೊಂಡಿದ್ದರು.

3ನೇ ಹಿರಿಯ ನಾಯಕ ಕೂಡ ಕರ್ನಾಟಕದವರೇ ಆಗಿದ್ದಾರೆ. ಪ್ರಸ್ತುತ ಆಯ್ಕೆ ಸಮಿತಿ ಸದಸ್ಯರಾಗಿರುವ ಕನ್ನಡಿಗ ಸುನಿಲ್ ಜೋಶಿ ಅವರು 2010ರಲ್ಲಿ ಸೈಯದ್ ಮುಸ್ತಾಕ್ ಅಲಿ ಟಿ20 ಟೂರ್ನಮೆಂಟ್​ನಲ್ಲಿ ಹೈದರಾಬಾದ್ ವಿರುದ್ಧ ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು. ಆಗ ಅವರ ವಯಸ್ಸು 40 ವರ್ಷ ಮತ್ತು 135 ದಿನಗಳಾಗಿತ್ತು. ಭಾರತದ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಈ ಮೂವರು ಮಾತ್ರ ತಂಡಗಳನ್ನು ಮುನ್ನಡೆಸಿದ್ದು, ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ನಿರೂಪಿಸಿದ್ದಾರೆ.

ಇನ್ನು ನಿನ್ನೆಯ ಪಂದ್ಯದಲ್ಲಿ ಧೋನಿ ನೇತೃತ್ವದ ಸಿಎಸ್​ಕೆ ತಂಡ 2 ವಿಕೆಟ್ ಕಳೆದುಕೊಂಡು 202 ರನ್​ಗಳಿಸಿತ್ತು. ಇದಕ್ಕೆ ಉತ್ತರವಾಗಿ ಹೈದರಾಬಾದ್​ 20 ಓವರ್​ಗಳಲ್ಲಿ ​ 6 ವಿಕೆಟ್ ಕಳೆದುಕೊಂಡು 186 ರನ್​ಗಳಿಸಿ 18 ರನ್​ಗಳ ಸೋಲು ಕಂಡಿತು.

ಇದನ್ನೂ ಓದಿ:ವೃತ್ತಿ ಜೀವನದ ಅಂತ್ಯದವರೆಗೆ ಧೋನಿಗೆ ಸಿಕ್ಕಂತಹ ಬೆಂಬಲ ನಮಗ್ಯಾರಿಗೂ ಸಿಗಲಿಲ್ಲ: ಯುವರಾಜ್ ಸಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.