ಚೆನ್ನೈ(ತಮಿಳುನಾಡು): ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಖುಷಿ ಸಂಗತಿ ಹೊರಬಿದ್ದಿದೆ. ಧೋನಿ 2024ರ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಖಚಿತಪಡಿಸಿದೆ. ಮುಂದಿನ ಸೀಸನ್‌ಗಾಗಿ ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ನಡೆಯಲಿದೆ.
ನವೆಂಬರ್ 26ರೊಳಗೆ ತಂಡ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಬಿಸಿಸಿಐ ಎಲ್ಲಾ ತಂಡಗಳಿಗೆ ಈ ಹಿಂದೆ ಸೂಚಿಸಿತ್ತು. ಅದರಂತೆ, ಚೆನ್ನೈ ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ನಿರೀಕ್ಷೆಯಂತೆ ಧೋನಿ ಹೆಸರೂ ಇದೆ. ಇದರೊಂದಿಗೆ ಮುಂದಿನ ಸೀಸನ್‌ನಲ್ಲಿ 'ಕ್ಯಾಪ್ಟನ್ ಕೂಲ್' ಭಾಗವಹಿಸುವುದು ಖಾತ್ರಿಯಾಗಿದೆ. ಚೆನ್ನೈಗೆ ಐದನೇ ಐಪಿಎಲ್ ಪ್ರಶಸ್ತಿ ಗೆದ್ದು ಕೊಟ್ಟಿದ್ದ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರನ್ನು ಉಳಿಸಿಕೊಳ್ಳಲು ಸಿಎಸ್‌ಕೆ ಆಡಳಿತ ಮಂಡಳಿ ನಿರ್ಧರಿಸಿದೆ.
ಐಪಿಎಲ್ 2023 ತನ್ನ ವೃತ್ತಿಜೀವನದ ಕೊನೆಯ ಐಪಿಎಲ್ ಎಂದು ಅಂಬಟಿ ರಾಯುಡು ಈಗಾಗಲೇ ಘೋಷಿಸಿದ್ದಾರೆ. ಚೆನ್ನೈ ತಂಡದ ಟ್ರೋಫಿ ಗೆದ್ದ ತಕ್ಷಣ ಅವರು ನಿವೃತ್ತರಾಗಿದ್ದರು. ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೆಲಸದ ಹೊರೆ ನಿರ್ವಹಿಸಲು ಮುಂದಿನ ಸೀಸನ್‌ನಲ್ಲಿ ಭಾಗಿಯಾಗದೇ ಇರಲು ನಿರ್ಧರಿಸಿದ್ದಾರೆ. ಕಳೆದ ವರ್ಷದ ಹರಾಜಿನಲ್ಲಿ ಅವರನ್ನು ಚೆನ್ನೈ ಖರೀದಿಸಿತ್ತು. ಕಳೆದ ಸೀಸನ್‌ನಲ್ಲಿ ಸ್ಟೋಕ್ಸ್ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಹೀಗಾಗಿ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು.
-
Yellove Again for the Summer of 2024! 🦁🔜 pic.twitter.com/x8f3d3vvON
— Chennai Super Kings (@ChennaiIPL) November 26, 2023 " class="align-text-top noRightClick twitterSection" data="
">Yellove Again for the Summer of 2024! 🦁🔜 pic.twitter.com/x8f3d3vvON
— Chennai Super Kings (@ChennaiIPL) November 26, 2023Yellove Again for the Summer of 2024! 🦁🔜 pic.twitter.com/x8f3d3vvON
— Chennai Super Kings (@ChennaiIPL) November 26, 2023
ಚೆನ್ನೈ 6 ಆಟಗಾರರನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಮೂವರು ವಿದೇಶಿ ಆಟಗಾರರಾದ ಡ್ವೇನ್ ಪ್ರಿಟೋರಿಯಸ್, ಕೈಲ್ ಜೇಮ್ಸನ್ ಮತ್ತು ಸಿನ್ಸಂಡಾ ಮಗಲಾ ಇದ್ದಾರೆ. ಇವರಲ್ಲದೆ ಮೂವರು ಭಾರತೀಯ ಅನ್‌ಕ್ಯಾಪ್ಡ್ ಆಟಗಾರರ ಹೆಸರನ್ನೂ ಸಹ ಬಿಡುಗಡೆ ಮಾಡಿದೆ. ಭಗತ್ ವರ್ಮಾ, ಶುಭ್ರಾಂಶು ಸೇನಾಪತಿ ಮತ್ತು ಆಕಾಶ್ ಸಿಂಗ್ ಮುಂದಿನ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುವರು. ದೀಪಕ್ ಚಹಾರ್ ಅನುಪಸ್ಥಿತಿಯಲ್ಲಿ ಆಕಾಶ್ ಸಿಂಗ್ ಹೊಸ ಬಾಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಚೆನ್ನೈ ಅನುಭವಿ ಆಟಗಾರರನ್ನು ನೆಚ್ಚಿಕೊಂಡಿದೆ. ಈ ಬಾರಿಯೂ ಹಿರಿಯ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಮೊಯಿನ್ ಅಲಿ ಅವರಿಂದ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಹೀಗಿದ್ದರೂ ಅವರಲ್ಲಿ ಆತ್ಮವಿಶ್ವಾಸ ಇಡಲಾಗಿದೆ. ಕೋರ್ ತಂಡಕ್ಕೆ ಹೆಚ್ಚು ತೊಂದರೆಯಾಗದಂತೆ ಚೆನ್ನೈ ತನ್ನೆಲ್ಲ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ.
ಚೆನ್ನೈ ಉಳಿಸಿಕೊಂಡಿರುವ ಆಟಗಾರರು: ಎಂ.ಎಸ್.ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಖ್ ರಶೀದ್, ಡೆವೊನ್ ಕಾನ್ವೆ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆ, ದೀಪಕ್ ಚಾಹರ್, ನಿಶಾಂತ್ ಸಿಂಧು, ಅಜಯ್ ಮೊಂಡಾಲ್, ರಾಜವರ್ಧನ್ ಹಂಗರ್ಗೆಕರ್, ಮಹಿಶ್ ಥೇರ್‌ಗೆಡ್ಹಾನ , ಪ್ರಶಾಂತ್ ಸೋಲಂಕಿ, ಸಿಮರ್ಜಿತ್ ಸಿಂಗ್, ತುಷಾರ್ ದೇಶಪಾಂಡೆ, ಮತಿಶ ಪತಿರಾನ.
ಇದನ್ನೂ ಓದಿ: IPL 2024: ಜೋಶ್ ಸೇರಿ 11 ಆಟಗಾರರ ಕೈಬಿಟ್ಟ ಆರ್ಸಿಬಿ; ಹೀಗಿದೆ ಪ್ಲೇಯರ್ಸ್ ಪಟ್ಟಿ