ETV Bharat / sports

ಭಾರತ ತಂಡಕ್ಕೆ ಮಹೇಂದ್ರ ಸಿಂಗ್​​ ಧೋನಿ ವಾಪಸ್​.. ಬಿಸಿಸಿಐನಿಂದ ಮಾಂತ್ರಿಕನಿಗೆ ದೊಡ್ಡ ಹೊಣೆ - ವಿಶ್ವಕಪ್​ ಸೆಮಿಫೈನಲ್​ ಸೋಲು

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರನ್ನು ಭಾರತ ತಂಡಕ್ಕೆ ಮತ್ತೆ ಸೇರಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ. ಮುಂದಿನ ವಿಶ್ವಕಪ್​ ವೇಳೆಗೆ ಧೋನಿಗೆ ದೊಡ್ಡ ಹೊಣೆ ನೀಡುವ ಸಾಧ್ಯತೆ ಇದೆ.

ms-dhoni-may-return-in-team-india
ಭಾರತ ತಂಡಕ್ಕೆ ಮಹೇಂದ್ರ ಸಿಂಗ್​​ ಧೋನಿ ವಾಪಸ್
author img

By

Published : Nov 15, 2022, 6:28 PM IST

ನವದೆಹಲಿ: 2022 ರ ವಿಶ್ವಕಪ್​ ಸೆಮಿಫೈನಲ್​ ಸೋಲು ಭಾರತ ಕ್ರಿಕೆಟ್​ಗೆ ದೊಡ್ಡ ಹಿನ್ನಡೆಯಾಗಿದೆ. ವಿಶ್ವಕಪ್​ ಗೆಲ್ಲುವ ಬಲಿಷ್ಠ ತಂಡವಾಗಿ ಕಣಕ್ಕಿಳಿದ ಭಾರತ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ನಾಕೌಟ್​ನಲ್ಲಿ ಕಿಕೌಟ್​ ಆಗಿ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಇದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಂಡದಲ್ಲಿ ಬದಲಾವಣೆ ತರಲು ಮುಂದಾಗಿದೆ.

ಧೋನಿಗೆ ಮಹತ್ತರ ಜವಾಬ್ದಾರಿ: ತಂಡದಲ್ಲಿ ಬದಲಾವಣೆಯ ಭಾಗವಾಗಿ ಟಿ20 ತಜ್ಞ, ಭಾರತ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರನ್ನು ಮತ್ತೆ ಭಾರತ ಕ್ರಿಕೆಟ್​ನಲ್ಲಿ ಬಳಸಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. 2023 ರ ಬಳಿಕ ಧೋನಿ ಐಪಿಎಲ್​ಗೆ ನಿವೃತ್ತಿ ಹೇಳಲಿದ್ದು, ಬಳಿಕ ಅವರನ್ನು ಟಿ20 ತಂಡದ ನಿರ್ದೇಶಕರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೋಚ್​ ರಾಹುಲ್​ಗೆ ಹೆಚ್ಚಿದ ಹೊಣೆ: ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿರುವ ರಾಹುಲ್​ ದ್ರಾವಿಡ್​ ಅವರಿಗೆ ಮೂರು ಪ್ರಕಾರದ ಹೊಣೆಗಾರಿಕೆಯಿಂದ ಒತ್ತಡ ಹೆಚ್ಚಿದೆ. ಏಕದಿನ, ಟಿ20 ಮತ್ತು ಟೆಸ್ಟ್​ ತಂಡಗಳನ್ನು ಸಜ್ಜು ಮಾಡುವುದು ಸವಾಲಾಗಿದೆ. ಇದರಿಂದ ಚುಟುಕು ಮಾದರಿಯ ತಂಡವನ್ನು ಧೋನಿ ಹೆಗಲಿಗೆ ಹಾಕಲು ಬಿಸಿಸಿಐ ಚಿಂತಿಸಿದೆ. ಇದರಿಂದ ಕೋಚ್ ದ್ರಾವಿಡ್​ ಮೇಲಿರುವ ಜವಾಬ್ದಾರಿ ಕಡಿಮೆಯಾಗಲಿದೆ ಎಂಬುದು ಇದರ ಉದ್ದೇಶವಾಗಿದೆ.

ಮಾಂತ್ರಿಕನ ತಂತ್ರ ಬಳಕೆ: 2024 ರ ಟಿ 20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಬಿಸಿಸಿಐ ಟಿ 20 ತಜ್ಞ ಎಂಎಸ್ ಧೋನಿಗೆ ನಿರ್ದೇಶಕರ ಪಾತ್ರವನ್ನು ನೀಡುವ ಬಗ್ಗೆ ಚಿಂತನೆ ನಡೆಸಿದೆ. ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಂದಾಜಿನ ಪ್ರಕಾರ ಈ ತಿಂಗಳ ಅಂತ್ಯದ ವೇಳೆಗೆ ನಡೆಯಲಿರುವ ಬಿಸಿಸಿಐ ಸಭೆಯಲ್ಲಿ ಧೋನಿ ಪಾತ್ರದ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಲಾಗಿದೆ. 2021 ರ ಟಿ 20 ವಿಶ್ವಕಪ್​ ವೇಳೆ ಕೋಚ್​ ರವಿಶಾಸ್ತ್ರಿ ಜೊತೆಗೆ ಎಂಎಸ್​​ ಧೋನಿಗೆ ಮೆಂಟರ್​ ಜವಾಬ್ದಾರಿ ನೀಡಲಾಗಿತ್ತು.

ಓದಿ: ಮುಂಬೈ ತಂಡದ ಆಲ್​ರೌಂಡರ್​ ಕಿರಾನ್​ ಪೊಲ್ಲಾರ್ಡ್​ ಐಪಿಎಲ್​ಗೆ ಗುಡ್​ಬೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.