ETV Bharat / sports

ಎಂಎಸ್ ಧೋನಿ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರೆ: ದೀಪಕ್ ಚಹರ್ - ಭಾರತ vs ಶ್ರೀಲಂಕಾ ಏಕದಿನ ಸರಣಿ

28 ವರ್ಷದ ಯುವ ಆಟಗಾರ ಚಹರ್​, ತಮ್ಮ ಪ್ರದರ್ಶನದ ಹಿಂದೆ ಭಾರತ ತಂಡದ ಮಾಜಿ ಹಾಗೂ ಸಿಎಸ್​ಕೆ ನಾಯಕ ಧೋನಿ ಪಾತ್ರ ಮಹತ್ವವಾಗಿದೆ ಎಂದು ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

Deepak chahar
ದೀಪಕ್ ಚಹರ್​
author img

By

Published : Jul 22, 2021, 10:57 PM IST

ಕೊಲಂಬೊ: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಜೇಯ 69 ರನ್​ಗಳಿಸಿ ಭಾರತಕ್ಕೆ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟಿದ್ದ ವೇಗಿ ದೀಪಕ್ ಚಹರ್​, ತಮ್ಮ ಪ್ರದರ್ಶನದ ಮೇಲೆ ಧೋನಿ ಪ್ರಭಾವ ದೊಡ್ಡ ಪ್ರಮಾಣದಲ್ಲಿದೆ ಎಂದು ಹೇಳಿದ್ದಾರೆ.

116ಕ್ಕೆ 5 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಆಗಮಿಸಿದ ದೀಪಕ್​ ಮೊದಲು ಕೃನಾಲ್ ಪಾಂಡ್ಯ ಜೊತೆಗೆ 33 ರನ್​ಗಳ ಜೊತೆಯಾಟ ನಡೆಸಿ ಕುಸಿತವನ್ನು ತಡೆದರು. ನಂತರ ಉಪನಾಯಕ ಭುವನೇಶ್ವರ್ ಕುಮಾರ್ ಜೊತೆಗೂಡಿ ಮುರಿಯದ 8ನೇ ವಿಕೆಟ್​ ಜೊತೆಯಾಟದಲ್ಲಿ 84 ರನ್​ ಸೇರಿಸಿ 1-1ರಲ್ಲಿ ಸರಣಿ ಸಮಬಲ ಸಾಧಿಸುವ ಕನಸು ಕಾಣುತ್ತಿದ್ದ ಶ್ರೀಲಂಕಾ ಆಸೆಗೆ ತಣ್ಣೀರೆರಚಿದರು.

28 ವರ್ಷದ ಯುವ ಆಟಗಾರ, ತಮ್ಮ ಪ್ರದರ್ಶನದ ಹಿಂದೆ ಭಾರತ ತಂಡದ ಮಾಜಿ ಹಾಗೂ ಸಿಎಸ್​ಕೆ ನಾಯಕ ಧೋನಿ ಪಾತ್ರ ಮಹತ್ವವಾಗಿದೆ ಎಂದು ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

" ಧೋನಿ ಕೇವಲ ಸಿಎಸ್​ಕೆ ತಂಡಕ್ಕೆ ಮಾತ್ರವಲ್ಲ, ನನ್ನ ಮೇಲೆ ತುಂಬಾ ದೊಡ್ಡ ಪ್ರಭಾವ ಬೀರಿದ್ದಾರೆ. ನಾವೆಲ್ಲಾ ಬೆಳೆಯುತ್ತಿದ್ದಾಗ ಧೋನಿ ಹೇಗೆ ಪಂದ್ಯಗಳನ್ನು ತುಂಬಾ ಆಳಕ್ಕೆ ತೆಗೆದುಕೊಂಡು ಹೋಗುತ್ತಿದ್ದದ್ದನ್ನು ನೋಡಿದ್ದೇವೆ. ಪ್ರತಿಯೊಂದು ಬಾರಿ ನಾವು ಅವರ ಜೊತೆ ಮಾತನಾಡುವಾಗ, ಪಂದ್ಯವನ್ನು ಆಳಕ್ಕೆ ತೆಗೆದುಕೊಳ್ಳುವುದು ನಿನ್ನ ಕೈಯಲ್ಲೇ ಇರುತ್ತದೆ, ನಿನ್ನ ಕೈಯಲ್ಲಿ ಆದರೆ ಅದನ್ನು ಮಾಡು, ನೀವು ಕೆಲವು ಓವರ್​ಗಳನ್ನು ಆಡಿದರೆ ಪಂದ್ಯ ರೋಚಕ ಅಂತಕ್ಕೆ ತರಬಹುವುದು ಎಂದು ಹೇಳುತ್ತಿದ್ದರು" ಎಂದು ದೀಪಕ್ ಹೇಳಿದ್ದಾರೆ.

ಹಾಗಾಗಿ ನಾವು ಪಂದ್ಯವನ್ನು ಕೊನೆಯ ಓವರ್​ವರೆಗೆ ತೆಗೆದುಕೊಂಡು ಹೋಗುವ ಯೋಜನೆ ಮಾಡಿಕೊಂಡಿದ್ದೆವು, ಅದರಲ್ಲಿ ಯಶಸ್ವಿಯಾದೆವು ಎಂದು ಚೆನ್ನೈ ಸೂಪರ್​ ಕಿಂಗ್ಸ್ ಪ್ರಮುಖ ಬೌಲರ್ ಹೇಳಿದ್ದಾರೆ.

ಇದನ್ನು ಓದಿ:'ಇಂದಿರಾನಗರ ಮಾತ್ರವಲ್ಲ, ಅವರು ಇಡೀ ಭಾರತದ ಗೂಂಡಾ': ಕೋಚ್​​ ದ್ರಾವಿಡ್​ ಬಗ್ಗೆ ಚಹರ್ ಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.