ETV Bharat / sports

ನಿವೃತ್ತಿಯಾದ್ರೂ ಕುಗ್ಗದ ಧೋನಿ ಬ್ರ್ಯಾಂಡ್​ ಮೌಲ್ಯ: ಜಾಹೀರಾತು ಒಪ್ಪಂದಗಳಿಂದ್ಲೇ ₹150 ಕೋಟಿ ಆದಾಯ!

author img

By

Published : Apr 13, 2022, 7:59 PM IST

ಎಂ.ಎಸ್‌.ಧೋನಿ 2022ರ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ವಿನ್​ಜೋ(WINZO), ಟರ್ಟೆಲ್​ಮಿಂಟ್​(ಇನ್ಸುರೆನ್ಸ್ ಕಂಪನಿ) ಗಣೇಶ್ ಹೌಸಿಂಗ್, ಒರಿಯೋ ಮತ್ತು ಕಿನ್ಲೆ ಕಂಪನಿಗಳ ಜೊತೆಗೆ ಹೊಸದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.

MS Dhoni  endorsement revenue
ಎಂಎಸ್ ಧೋನಿ ಬ್ರ್ಯಾಂಡ್​ ಮೌಲ್ಯ

ಮುಂಬೈ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ರ್ಯಾಂಡ್​ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿಯಾಗಿದ್ದರೂ ಸಹ ಧೋನಿ 33 ಕಂಪನಿಗಳೊಂದಿಗೆ ರಾಯಭಾರತ್ವ ಹೊಂದಿದ್ದು, ಇದರಿಂದ ಅವರು ವಾರ್ಷಿಕವಾಗಿ 150 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.

2020 ಆಗಸ್ಟ್ 15ರಂದು ಧೋನಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಸುಮಾರು 20 ತಿಂಗಳು ಕಳೆದಿದ್ದರೂ ಅವರ ಬ್ರ್ಯಾಂಡ್​ ಮೌಲ್ಯ ಕುಸಿಯುವ ಬದಲಾಗಿ ನಿಯಮಿತವಾಗಿ ಏರಿಕೆಯಾಗುತ್ತಿದೆ. 2022ರ ಐಪಿಎಲ್​ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್​ಗೆ 4 ಪ್ರಶಸ್ತಿಯನ್ನು ತಂದುಕೊಟ್ಟಿರುವ ನಾಯಕ ಕೇವಲ 4 ವಾರಗಳ ಅಂತರದಲ್ಲಿ 5 ಹೊಸ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಧೋನಿ 2022ರ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ವಿನ್​ಜೋ(WINZO), ಟರ್ಟೆಲ್​ಮಿಂಟ್​(ಇನ್ಸುರೆನ್ಸ್ ಕಂಪನಿ) ಗಣೇಶ್ ಹೌಸಿಂಗ್, ಒರಿಯೋ ಮತ್ತು ಕಿನ್ಲೆ ಕಂಪನಿಗಳ ಜೊತೆಗೆ ಹೊಸದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ 5 ಕಂಪನಿಗಳು ಸೇರಿದಂತೆ ಧೋನಿ ಬ್ರ್ಯಾಂಡ್​ ಅಂಬಾಸಿಡರ್​ ಆಗಿರುವ ಕಂಪನಿಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. 40 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಬ್ರಾಂಡ್ ಮೌಲ್ಯ $61.2 ಮಿಲಿಯನ್ ಇದ್ದು, 2021ರ ಡಫ್ ಮತ್ತು ಫೆಲ್ಪ್ಸ್ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಫೈನಾನ್ಸಿಯಲ್​ ಎಕ್ಸ್​ಪ್ರೆಸ್​ ವರದಿ ಪ್ರಕಾರ, ಧೋನಿ ವಾರ್ಷಿಕವಾಗಿ ಒಂದು ಬ್ರ್ಯಾಂಡ್​ ರಾಯಭಾರತ್ವಕ್ಕೆ 3.5 ಕೋಟಿಯಿಂದ ಹಿಡಿದು 6 ಕೋಟಿ ರೂ.ವರೆಗೆ ಚಾರ್ಜ್​ ಮಾಡುತ್ತಾರೆ. ಇದು ಭಾರತದ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ ಅವರಿಗಿಂತ ಕಡಿಮೆ. ವಿರಾಟ್​ 7ರಿಂದ 8 ಕೋಟಿ ರೂ.ಗಳನ್ನು ಚಾರ್ಜ್​ ಮಾಡಲಿದ್ದಾರೆ.

ಸಿಎಸ್​ಕೆ ಲೆಜೆಂಡ್​​ 2021ರಲ್ಲಿ ಸುಮಾರು 54 ಬ್ರ್ಯಾಂಡ್​ಗಳ ಟಿವಿ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ವರ್ಷದಲ್ಲಿ ಟಿವಿ ಜಾಹಿರಾತಿನಲ್ಲಿ ಹೆಚ್ಚು ಕಾಣಿಸಿಕೊಂಡ ಸ್ಪೋರ್ಟ್ಸ್​ ಸೆಲೆಬ್ರೆಟಿ ಯಾಗಿದ್ದಾರೆ.

ಇದನ್ನೂ ಓದಿ:2018ರಲ್ಲಿ 105 ಕೆಜಿ, 2021ರಲ್ಲಿ 78: U-19 ತಂಡದಿಂದ ಹೊರಬಿದ್ದು ವಿಶ್ವಕಪ್‌, IPL ಸಾಧಕನಾದ ತೀಕ್ಷಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.