ETV Bharat / sports

ಬಾಲಿವುಡ್​​ಗೆ ಬರ್ತಾರಾ ಧೋನಿ? ಅಭಿಮಾನಿಗಳ ಪ್ರಶ್ನೆಗೆ ಕ್ಯಾಪ್ಟನ್ ಕೂಲ್​ ಉತ್ತರ - ಕೆಟಿಗ ಹರ್ಭಜನ್ ಸಿಂಗ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಬಳಿಕ ಧೋನಿ ಬಾಲಿವುಡ್‌ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ms-dhoni
ಎಂಎಸ್ ಧೋನಿ
author img

By

Published : Oct 6, 2021, 2:28 PM IST

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಈ ನಡುವೆ ಮುಂದಿನ ವರ್ಷ ಕೊನೆಯ ಪಂದ್ಯವನ್ನು ಚೆನ್ನೈನಲ್ಲೇ ಆಡುವುದಾಗಿಯೂ ತಿಳಿಸಿದ್ದಾರೆ.

ಇಂಡಿಯಾ ಸಿಮೆಂಟ್​​​ನ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಅವರ ಐಪಿಎಲ್ ಕೊನೆಯ ಪಂದ್ಯದ ಕುರಿತಂತೆಯೂ ಹೇಳಿದ್ದಾರೆ.

'ನನಗೆ ಸಿನಿಮಾ ಮಾಡುವ ಆಸಕ್ತಿ ಇಲ್ಲ. ಬಾಲಿವುಡ್​​ನ ನಟನೆ ನಿಜವಾಗಿಯೂ ನನ್ನ ಕ್ಷೇತ್ರವೇ ಅಲ್ಲ. ಜಾಹೀರಾತುಗಳನ್ನು ಮಾಡಲು ನನಗೆ ಹೆಚ್ಚು ಖುಷಿಯಾಗುತ್ತದೆ. ಆದರೆ ಸಿನಿಮಾ ಎಂದಾಗ ನಿಜವಾಗಿಯೂ ನನಗೆ ಕಷ್ಟ, ಇದು ಏನಿದ್ದರೂ ಸಿನಿಮಾ ಸ್ಟಾರ್​ಗಳಿಗೆ ಸರಿಯಷ್ಟೇ. ಏಕೆಂದರೆ ಅವರು ಮಾತ್ರ ಅದಕ್ಕೆ ಅರ್ಹರು. ನಾನು ಕ್ರಿಕೆಟ್​​​ನೊಂದಿಗೆ ಸಂಬಂಧ ಹೊಂದಿದ್ದು, ಜಾಹೀರಾತುಗಳಲ್ಲಿ ಸುಲಭವಾಗಿ ನಟಿಸಬಲ್ಲೆ' ಎಂದರು.

ಇತ್ತೀಚೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ‘ಫ್ರೆಂಡ್​​ಶಿಪ್​’ ಎಂಬ ಚಿತ್ರದ ಮೂಲಕ ಬಾಲಿವುಡ್​​ಗೆ ಎಂಟ್ರಿ ಕೊಟ್ಟಿದ್ದರು. ಈ ಹಿಂದೆ ಅಜಯ್ ಜಡೇಜಾ, ಬ್ರೆಟ್​​ಲೀ ಮತ್ತು ವಿನೋದ್ ಕಾಂಬ್ಲಿ ಹಾಗೂ ಶ್ರೀಶಾಂತ್​ ಸಿನಿಮಾಗಳಲ್ಲಿ ನಟಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.