ಭಾರತೀಯ ಕ್ರಿಕೆಟ್ ಕಂಡಿರುವ ಅತಿ ಯಶಸ್ವಿ ನಾಯಕರ ಪೈಕಿ ಮಹೇಂದ್ರ ಸಿಂಗ್ ಧೋನಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. 41ನೇ ವಸಂತಕ್ಕೆ ಕಾಲಿಟ್ಟಿರುವ ಮಹೇಂದ್ರ ಸಿಂಗ್ ಧೋನಿಗೆ ಅನೇಕರು ವಿಶ್ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಜೀವನದಲ್ಲಿ ಸಾಕ್ಷಿ ಬರುವುದಕ್ಕೂ ಮುಂಚೆ ಅನೇಕ ಬಾಲಿವುಡ್ ಬೆಡಗಿಯರೊಂದಿಗೆ ಒಡನಾಟ ಹೊಂದಿದ್ದರು ಎಂಬ ಗಾಸಿಪ್ ಸುದ್ದಿ ಈ ಹಿಂದಿನಿಂದಲೂ ಇದೆ. ಅದರಲ್ಲಿ ಪ್ರಮುಖವಾಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೊಣೆ ಜೊತೆ ಮಹೇಂದ್ರ ಸಿಂಗ್ ಧೋನಿ ಹೆಸರು ತಳುಕು ಹಾಕಿಕೊಂಡಿತ್ತು. ವರದಿಗಳ ಪ್ರಕಾರ, 2007ರಲ್ಲಿ ದೀಪಿಕಾ-ಧೋನಿ ನಡುವೆ ಕ್ರಶ್ ಇತ್ತು ಎನ್ನಲಾಗಿತ್ತು.
ಇನ್ನು ಕಾಮಿಡಿ ನೈಟ್ ವಿತ್ ಕಪಿಲ್ ಮತ್ತು ದಿ ಕಪಿಲ್ ಶರ್ಮಾ ಶೋನ ಡೈರೆಕ್ಟರ್, ಇನ್ನೋವೇಟಿವ್ ನಿರ್ಮಾಪಕಿ ಪ್ರೀತಿ ಸಿಮೋಸ್ ಹಾಗೂ ಧೋನಿ ಸಹ ಉತ್ತಮ ಒಡನಾಟ ಹೊಂದಿದ್ದರು. ಈ ಜೋಡಿ ಸುಮಾರು 15 ವರ್ಷಗಳಿಂದ ಸ್ನೇಹಿತರಾಗಿದ್ದರು.
ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಚಿತ್ರದ ವೇಳೆ ಮಹೇಂದ್ರ ಸಿಂಗ್ ಧೋನಿಯ ಮೊದಲ ಲವ್ ಪ್ರಿಯಾಂಕಾ ಝಾ ಎಂದು ತಿಳಿದು ಬಂದಿದೆ. ಈ ಯುವತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಚಿತ್ರದಲ್ಲಿ ಪ್ರಿಯಾಂಕಾ ಪಾತ್ರವನ್ನ ದಿಶಾ ಪಟಾನಿ ನಿರ್ವಹಿಸಿದ್ದಾರೆ.
ಅನೇಕ ಬಾಲಿವುಡ್ ನಟಿಯರೊಂದಿಗೆ ಧೋನಿ ಡೇಟಿಂಗ್ ನಡೆಸಿದ ಬಳಿಕ ಅಂತಿಮವಾಗಿ ಮಹೇಂದ್ರ ಸಿಂಗ್ ಧೋನಿ ಸಾಕ್ಷಿ ಜೊತೆ ಮದುವೆ ಮಾಡಿಕೊಂಡರು. ಈ ಜೋಡಿಗೆ ಇದೀಗ ಜೀವಾ ಎಂಬ ಮಗಳಿದ್ದಾಳೆ.
ಗಜನಿ ಚಿತ್ರದ ನಟಿ ಆಸಿನ್ ಜೊತೆ ಸಹ ಮಹೇಂದ್ರ ಸಿಂಗ್ ಧೋನಿ ಹೆಸರು ತಳುಕು ಹಾಕಿಕೊಂಡಿತ್ತು. ಮಾಧ್ಯಮಗಳ ವರದಿ ಪ್ರಕಾರ, ಆಸೀನ್ ಮತ್ತು ಧೋನಿ ಡೇಟಿಂಗ್ ಮಾಡ್ತಿದ್ದರು ಎನ್ನಲಾಗ್ತಿತ್ತು. ಈ ಜೋಡಿ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
2008-09ರ ಅವಧಿಯಲ್ಲಿ ಧೋನಿ ನಟಿ ರಾಯ್ ಲಕ್ಷ್ಮಿ ಜೊತೆ ಡೇಟಿಂಗ್ ಮಾಡಿದ್ದರು ಎಂದು ವರದಿಯಾಗಿತ್ತು. ಐಪಿಎಲ್ ನಂತರ ಈ ಜೋಡಿ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಪಾರ್ಟಿ ಮಾಡುತ್ತಿದ್ದರು ಎಂದು ವರದಿಯಾಗಿದೆ.