ETV Bharat / sports

WTC Final : ಶಮಿ ಈ ಸಾಧನೆ ಮಾಡಿದ ಭಾರತದ ಪರ ಮೊದಲ ಬೌಲರ್​ - Mohammed Shami 4 wicket

ಭಾರತದ ಅಶ್ವಿನ್ ಮತ್ತು ಇಂಗ್ಲೆಂಡ್​ನ ಸ್ಟುವರ್ಟ್​ ಬ್ರಾಡ್​ ತಲಾ 9 ಬಾರಿ ಈ ಸಾದನೆ ಮಾಡಿದ್ದಾರೆ. ಕಿವೀಸ್​ನ ಟಿಮ್ ಸೌತಿ, ಆಸ್ಟ್ರೇಲಿಯಾದ ಹೆಜಲ್​ವುಡ್ ಮತ್ತು ಶಮಿ ತಲಾ 8 ಬಾರಿ ಈ ಸಾಧನೆ ಮಾಡಿದ್ದಾರೆ.​.

ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ
author img

By

Published : Jun 22, 2021, 8:59 PM IST

ಸೌತಾಂಪ್ಟನ್ ​: ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ ಐಸಿಸಿ ಟೂರ್ನಮೆಂಟ್ ಫೈನಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು.

ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ಫೈನಲ್​ ಪಂದ್ಯದ ನಾಲ್ಕನೇ ದಿನ ಮಾರಕ ದಾಳಿ ನಡೆಸಿದ ಶಮಿ ಕಿವೀಶ್​ನ ರಾಸ್​ ಟೇಲರ್(11), ಬಿಜೆ ವಾಟ್ಲಿಂಗ್​(7), ಕಾಲಿನ ಡಿ ಗ್ರ್ಯಾಂಡ್​ಹೋಮ್​(13) ಮತ್ತು ಕೈಲ್ ಜೆಮೀಸನ್​(21) ವಿಕೆಟ್​ ಪಡೆದರು.

ಭಾರತ ಈವರೆಗೆ 3 ಏಕದಿನ ವಿಶ್ವಕಪ್, 2 ಟಿ20 ವಿಶ್ವಕಪ್ ಮತ್ತು 4 ಚಾಂಪಿಯನ್ಸ್​ ಟ್ರೋಫಿ ಮತ್ತು ಒಂದು ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ಸ್​ನಲ್ಲಿ ಆಡಿದೆ. ಈವರೆಗೂ ಯಾವೊಬ್ಬ ಬೌಲರ್​ ಕೂಡ 4 ವಿಕೆಟ್​ ಪಡೆದಿರಲಿಲ್ಲ. ಇದೀಗ ಶಮಿ WTC ಫೈನಲ್ಸ್​ನಲ್ಲಿ ಈ ಸಾಧನೆ ಮಾಡಿದ್ದಾರೆ.

ಇದಲ್ಲದೆ ಐಸಿಸಿ ಇವೆಂಟ್​ಗಳಲ್ಲಿ ಹೆಚ್ಚು ಬಾರಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​ ಪಡೆದ ಭಾರತದ 2ನೇ ಮತ್ತು ವಿಶ್ವದ 4ನೇ ಬೌಲರ್​ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​ 12 ಬಾರಿ 4 ವಿಕೆಟ್ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಅಶ್ವಿನ್ ಮತ್ತು ಇಂಗ್ಲೆಂಡ್​ನ ಸ್ಟುವರ್ಟ್​ ಬ್ರಾಡ್​ ತಲಾ 9 ಬಾರಿ ಈ ಸಾದನೆ ಮಾಡಿದ್ದಾರೆ. ಕಿವೀಸ್​ನ ಟಿಮ್ ಸೌತಿ, ಆಸ್ಟ್ರೇಲಿಯಾದ ಹೆಜಲ್​ವುಡ್ ಮತ್ತು ಶಮಿ ತಲಾ 8 ಬಾರಿ ಈ ಸಾಧನೆ ಮಾಡಿದ್ದಾರೆ.​

ಇದನ್ನು ಓದಿ : ಕಾನ್ವೆ ಕ್ರೀಸಿನಲ್ಲಿದ್ದಾಗ ಭಾರತದ ಈ ಆಟಗಾರನಂತೆ ಭಾಸವಾಗುತ್ತದೆ : ವೆಲ್ಲಿಂಗ್ಟನ್ ಕೋಚ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.