ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತದ ಭವಿಷ್ಯದ ಸ್ಟಾರ್ ಬ್ಯಾಟರ್ ಆಗಿ ತಂಡದಲ್ಲಿ ಮಿಂಚುತ್ತಿರುವ ಅವರು, ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆಗಳನ್ನು ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಗಿಲ್ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ಗೆ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ.
ಇದೀಗ ಗಿಲ್‌ಗೆ 25ನೇ ವಯಸ್ಸಿಗೆ ಭಾರತ ಪರ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ದಾಖಲೆ ಮಾಡುವ ಸುವರ್ಣಾವಕಾಶ ಲಭಿಸಲಿದೆ. ಸೆಪ್ಟೆಂಬರ್ 8, 2023 ರಂದು 24 ನೇ ವರ್ಷಕ್ಕೆ ಗಿಲ್ ಕಾಲಿಟ್ಟರು. ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮುರಿಯಲು ಗಿಲ್‌ಗೆ ಇನ್ನೂ ಸುಮಾರು 11 ತಿಂಗಳುಗಳು 13 ದಿನಗಳ ಸಮಯ ಇದೆ.
-
Most ODI centuries for India before turning 25:
— Mufaddal Vohra (@mufaddal_vohra) September 25, 2023 " class="align-text-top noRightClick twitterSection" data="
Virat Kohli - 17.
Sachin Tendulkar - 14.
Yuvraj Singh - 7.
Shubman Gill - 6*. pic.twitter.com/fMUBJlOdKT
">Most ODI centuries for India before turning 25:
— Mufaddal Vohra (@mufaddal_vohra) September 25, 2023
Virat Kohli - 17.
Sachin Tendulkar - 14.
Yuvraj Singh - 7.
Shubman Gill - 6*. pic.twitter.com/fMUBJlOdKTMost ODI centuries for India before turning 25:
— Mufaddal Vohra (@mufaddal_vohra) September 25, 2023
Virat Kohli - 17.
Sachin Tendulkar - 14.
Yuvraj Singh - 7.
Shubman Gill - 6*. pic.twitter.com/fMUBJlOdKT
ಶುಭಮನ್ ಗಿಲ್ ಇದುವರೆಗೆ ಭಾರತ ಪರ ಏಕದಿನ ಮಾದರಿಯಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಗಿಲ್ 24 ವರ್ಷ 17 ದಿನಗಳ ವಯಸ್ಸಿನಲ್ಲಿ ಟೀಂ ಇಂಡಿಯಾ ಪರ 6 ಶತಕಗಳನ್ನು ಬಾರಿಸಿದ್ದಾರೆ. ಅವರಿಗಿಂತ ಮೊದಲು, ಅನುಭವಿ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ 25 ನೇ ವಯಸ್ಸಿನಲ್ಲಿ ಭಾರತಕ್ಕಾಗಿ 7 ಶತಕಗಳನ್ನು ಗಳಿಸಿದ್ದರು. ಇದೀಗ ಗಿಲ್ ಇನ್ನೂ 2 ಶತಕ ಬಾರಿಸುವ ಮೂಲಕ ಯುವರಾಜ್ ಸಿಂಗ್ ಅವರನ್ನು ಮೀರಿಸುವ ಅವಕಾಶ ಇದೆ. ಶುಭಮನ್ ಗಿಲ್ ತಮ್ಮ ಅಮೋಘ ಫಾರ್ಮ್ ಅನ್ನು ಮುಂದುವರಿಸಿದರೆ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಅವರ ಈ ದಾಖಲೆಯನ್ನು ಮುರಿಯಬಹುದು.
ಸಚಿನ್ ಮತ್ತು ವಿರಾಟ್ ದಾಖಲೆಯೂ ಹಿಂದಿಕ್ಕಲಿದ್ದಾರೆ ಗಿಲ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 25 ವರ್ಷ ವಯಸ್ಸಿನವರೆಗೆ ಭಾರತಕ್ಕಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 25 ವರ್ಷಕ್ಕಿಂತ ಮೊದಲು ಟೀಂ ಇಂಡಿಯಾ ಹಿಂದಿಕ್ಕಲು 14 ಶತಕ ಕಲೆಹಾಕ ಬೇಕಿದೆ. ವಿರಾಟ್ ಕೊಹ್ಲಿ 25 ವರ್ಷಕ್ಕಿಂತ ಮೊದಲು ಭಾರತದ ಪರ ಗರಿಷ್ಠ 17 ಶತಕಗಳನ್ನು ಗಳಿಸಿದ್ದಾರೆ. ಗಿಲ್ ಸಚಿನ್ ಅವರನ್ನು ಹಿಂದಿಕ್ಕಲು 9 ಮತ್ತು ಕೊಹ್ಲಿಯನ್ನು ಹಿಂದಿಕ್ಕಲು 12 ಶತಕಗಳನ್ನು ಗಳಿಸಬೇಕಾಗಿದೆ. ಈ ಎಲ್ಲಾ ಬ್ಯಾಟ್ಸ್‌ಮನ್‌ಗಳ ದಾಖಲೆಯನ್ನು ಮುರಿಯಲು ಶುಭಮನ್ ಗಿಲ್‌ಗೆ ಇನ್ನೂ 11 ತಿಂಗಳು 13 ದಿನಗಳಿವೆ. ಈ ಅವಧಿಯಲ್ಲಿ ಅವರು ಅನೇಕ ಏಕದಿನ ಪಂದ್ಯಗಳನ್ನು ಆಡುವ ಅವಕಾಶವನ್ನು ಹೊಂದಿರುತ್ತಾರೆ.
ರಾಜ್ಕೋಟ್ ಪಂದ್ಯಕ್ಕಿಲ್ಲ ಗಿಲ್: ಆಸ್ಟ್ರೇಲಿಯಾದ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಗಿಲ್‌ಗೆ ವಿಶ್ರಾಂತಿ ಕೊಡಲಾಗಿದೆ. ಆಸಿಸ್ ವಿರಿದ್ಧ ಮೊದಲ ಪಂದ್ಯದಲ್ಲಿ ಅರ್ಧಶತಕ ಹಾಗೂ ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿರುವ ಕಾರಣ ಗಿಲ್ ಅವರನ್ನು 27ರಂದು ನಡೆಯುವ ಪಂದ್ಯಕ್ಕೆ ವಿಶ್ರಾಂತಿ ನಿಡಲಾಗಿದೆ.
ಇದನ್ನೂ ಓದಿ: Gautam Gambhir: ಕಪಿಲ್ ದೇವ್ ಕಿಡ್ನಾಪ್..! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಅಸಲಿಯತ್ತೇನು?