ಶಾರ್ಜಾ : ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ರೋಚಕ ಕಾದಾಟದಲ್ಲಿ ಇಂಗ್ಲೆಂಡ್ ತಂಡ ಗೆಲ್ಲುತ್ತಿದ್ದಂತೆ ಇಯಾನ್ ಮಾರ್ಗನ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗರಿಷ್ಠ ಜಯ ಪಡೆದ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಮಾರ್ಗನ್ 68 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ. 43 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಆಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಆಫ್ಘಾನ್ ಅವರನ್ನು ಹಿಂದಿಕ್ಕಿ ಚುಟುಕು ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿ ಎಂಬ ಶ್ರೇಯಕ್ಕೆ ಪಾತ್ರರಾದರು.
ಧೋನಿ 72 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರೆ, ಅಸ್ಗರ್ ಆಫ್ಘಾನ್ 52 ಪಂದ್ಯಗಳಲ್ಲಿ ಮುನ್ನಡೆಸಿ ತಲಾ 42 ಪಂದ್ಯಗಳಲ್ಲಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಇಂಗ್ಲೆಂಡ್ ತಂಡ ಸೋಮವಾರ ಶ್ರೀಲಂಕಾ ವಿರುದ್ಧ 26 ರನ್ಗಳ ಜಯ ಸಾಧಿಸಿತು. ಇನ್ನು ಸೂಪರ್ 12ನಲ್ಲಿ ಆಡಿರುವ 4 ಪಂದ್ಯಗಳಲ್ಲೂ ಜಯ ಸಾಧಿಸಿ, ಇನ್ನೊಂದು ಪಂದ್ಯ ಉಳಿದಿರುವಂತೆ ಟಿ20 ವಿಶ್ವಕಪ್ನಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಇದನ್ನು ಓದಿ: ನಾನು ಕ್ರಿಕೆಟ್ ಲೋಕಕ್ಕೆ ಮತ್ತೆ ಕಮ್ಬ್ಯಾಕ್ ಮಾಡಲಿದ್ದೇನೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಯುವಿ