ETV Bharat / sports

ಶೀಘ್ರದಲ್ಲಿ ತಂಡಕ್ಕಾಗಿ ರನ್ ​ಗಳಿಸುತ್ತೇನೆಂಬ ವಿಶ್ವಾಸವಿದೆ: ಕೆಕೆಆರ್​ ನಾಯಕ ಇಯಾನ್ ಮಾರ್ಗನ್​

ಕೆಕೆಆರ್​ ಪ್ರಸ್ತುತ 13 ಪಂದ್ಯಗಳಲ್ಲಿ 12 ಅಂಕಗಳ ಜೊತೆಗೆ ಪಾಸಿಟಿವ್​ ರನ್​ರೇಟ್​ ಹೊಂದಿದ್ದು, 4ನೇ ಸ್ಥಾನ ಪಡೆದುಕೊಂಡಿದೆ. ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೆ ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಆರ್​ಸಿಬಿಯೊಂದಿಗೆ ಪ್ಲೇ ಆಫ್​ ಪ್ರವೇಶಿಸಲಿದೆ.

Eoin Morgan
ಇಯಾನ್ ಮಾರ್ಗನ್​
author img

By

Published : Oct 4, 2021, 6:01 PM IST

ದುಬೈ: ಐಪಿಎಲ್​ ಆವೃತ್ತಿಯಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ತೋರಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ಆದರೆ ಆದಷ್ಟು ಬೇಗ ಟೂರ್ನಮೆಂಟ್​ ಮುಗಿಯುವುದರೊಳಗೆ ಫಾರ್ಮ್​ಗೆ ಮರಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಕೆಆರ್​ ಪ್ರಸ್ತುತ 13 ಪಂದ್ಯಗಳಲ್ಲಿ 12 ಅಂಕಗಳ ಜೊತೆಗೆ ಪಾಸಿಟಿವ್​ ರನ್​ರೇಟ್​ ಹೊಂದಿದ್ದು, 4ನೇ ಸ್ಥಾನ ಪಡೆದುಕೊಂಡಿದೆ. ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೆ ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಆರ್​ಸಿಬಿಯೊಂದಿಗೆ ಪ್ಲೇ ಆಫ್​ ಪ್ರವೇಶಿಸಲಿದೆ.

" ಹೌದು, ನಾನು ಟೂರ್ನಮೆಂಟ್​ನ ಉದ್ದಕ್ಕೂ ರನ್​ಗಳ ಬರ ಎದುರಿಸಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಇಂತಹ ಪರಿಸ್ಥಿತಿಯಲ್ಲಿದ್ದರೂ ತಂಡ ಉತ್ತಮ ಹಂತ ತಲುಪಿರುವುದಕ್ಕೆ ನಾನು ತುಂಬಾ ಅದೃಷ್ಟಶಾಲಿ. ನೀವು ಗಮನಾರ್ಹ ಸ್ಕೋರ್​ ಕೊಡುಗೆ ನೀಡದೆ ಮುಂದೆ ಹೋದಂತೆ, ನಿಮ್ಮಲ್ಲಿ ತಂಡಕ್ಕಾಗಿ ಹೆಚ್ಚಿನ ಕೊಡುಗೆ ನೀಡಬೇಕೆಂಬ ಹಂಬಲ ನಿಮ್ಮಲ್ಲಿ ಹೆಚ್ಚಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇಂತಹ ಭಾವನೆಗಳು ಅನುಭವದಿಂದ ಬರುತ್ತವೆ " ಎಂದು ಸನ್​ರೈಸರ್ಸ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದ ನಂತರ ಮಾರ್ಗನ್​ ಹೇಳಿದ್ದಾರೆ.

ಮಾರ್ಗನ್​ 12 ಇನ್ನಿಂಗ್ಸ್​ಗಳಲ್ಲಿ ಒಂದು ಅರ್ಧಶತಕವಿಲ್ಲದೆ ಕೇವಲ 111 ರನ್​ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್​ 47 ರನ್​. ಕೆಕೆಆರ್​ ಪ್ಲೇ ಆಫ್​ ತಲುಪಲು ಉಳಿದಿರುವ ಒಂದು ಪಂದ್ಯವನ್ನು ಗೆಲ್ಲಬೇಕಾಗಿದೆ. ಒಂದು ವೇಳೆ ಕೆಕೆಆರ್ ಆ ಪಂದ್ಯವನ್ನು ಸೋತರೆ ಮುಂಬೈ ಮತ್ತು ರಾಜಸ್ಥಾನ್​ ತಂಡಕ್ಕೆ ಪ್ಲೇ ಆಫ್​ ತಂಡಕ್ಕೆ ಅವಕಾಶ ಸಿಗಲಿದೆ.

ಇನ್ನು ಭಾನುವಾರ ನಡೆದ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ವಿಲಿಯಮ್ಸನ್ ಬಳಗ ನೀಡಿದ್ದ 116 ರನ್​ಗಳ ಗುರಿಯನ್ನು 4 ವಿಕೆಟ್ ಕಳೆದುಕೊಂಡು ತಲುಪಿ ಪ್ಲೇ ಆಫ್​ಗೆ ಮತ್ತಷ್ಟು ಹತ್ತಿರವಾಗಿದೆ.

ಇದನ್ನು ಓದಿ:ಸಿಎಸ್​ಕೆ vs ಡೆಲ್ಲಿ: ಅಗ್ರಸ್ಥಾನಕ್ಕಾಗಿ ಪೈಪೋಟಿ, ಗೆದ್ದವರಿಗೆ ಫೈನಲ್​ ಪ್ರವೇಶಿಸಲು 2 ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.