ETV Bharat / sports

ICC ODI Ranking : ಬೌಲಿಂಗ್​ನಲ್ಲಿ ಸಿರಾಜ್​ಗೆ ಅಗ್ರಸ್ಥಾನ, ಬ್ಯಾಟಿಂಗ್​ನಲ್ಲಿ ವಿರಾಟ್​ ಹಿಂದಿಕ್ಕಿದ ಗಿಲ್​​ - ETV Bharath Kannada news

ಏಕದಿನ ಬೌಲಿಂಗ್​ ರ‍್ಯಾಂಕಿಂಗ್‌ನಲ್ಲಿ ಸಿರಾಜ್​ ನಂಬರ್​ 1 - ಬುಮ್ರಾ ನಂತರ ಅಗ್ರ ಪಟ್ಟಕ್ಕೇರಿದ ಭಾರತೀಯ ಬೌಲರ್​ - ವಿರಾಟ್​ ಕೊಹ್ಲಿ ಹಿಂದಿಕ್ಕಿದ ದ್ವಿಶತಕ ವೀರ ಶುಭಮನ್​ ಗಿಲ್​.

mohammed siraj
ಮೊಹಮ್ಮದ್ ಸಿರಾಜ್
author img

By

Published : Jan 25, 2023, 5:03 PM IST

ದುಬೈ: ವರ್ಷದ ಮೊದಲ ಮತ್ತು ಎರಡನೇ ಸರಣಿಯಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶಿಸಿದ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರ ಶ್ರೇಯಾಂಕವನ್ನು ಗಳಿಸಿದ್ದಾರೆ. ಸಿರಾಜ್ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಒಂಬತ್ತು ಮತ್ತು ಕಿವೀಸ್ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ ನಂತರ ಐಸಿಸಿ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಏಕದಿನದಲ್ಲಿ ಅಗ್ರಸ್ಥಾನ ಪಡೆದ ಬೌಲರ್ ಸಿರಾಜ್ ಆಗಿದ್ದಾರೆ. ಬುಮ್ರಾ ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಆಕರ್ಷಕ ಆಟದಿಂದ ಮೊದಲ ಸ್ಥಾನಕ್ಕೆ ತಲುಪಿದ್ದರು. ನಂತರ ನಿರಂತರ ಗಾಯದ ಸಮಸ್ಯೆಯಿಂದ ತಂಡದಿಂದ ಅವರು ಹೊರಗುಳಿದಿದ್ದರು.

ಬೌಲರ್‌ಗಳ ಶ್ರೇಯಾಂಕದಲ್ಲಿ ಸಿರಾಜ್ 729 ರೇಟಿಂಗ್ ಪಾಯಿಂಟ್‌ನಿಂದ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್‌ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿದ್ದ ನ್ಯೂಜೆಲೆಂಡ್​ ಆಟಗಾರ ಟ್ರೆಂಟ್​ ಬೋಲ್ಟ್​ ಮೂರನೇ ಶ್ರೇಯಾಂಕದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಜಸ್ಪಿತ್​ ಬುಮ್ರಾ 24ನೇ ಸ್ಥಾನದಲ್ಲಿದ್ದಾರೆ. ಶಮಿ 11 ಸ್ಥಾನಗಳ ಏರಿಕೆ ಕಂಡು 32 ಸ್ಥಾನದಲ್ಲಿದ್ದಾರೆ.

  • 🚨 There's a new World No.1 in town 🚨

    India's pace sensation has climbed the summit of the @MRFWorldwide ICC Men's ODI Bowler Rankings 🔥

    More 👇

    — ICC (@ICC) January 25, 2023 " class="align-text-top noRightClick twitterSection" data=" ">

2022 ಸಿರಾಜ್​ ಗೋಲ್ಡನ್​ ಇಯರ್​: ಸಿರಾಜ್​ ಮೂರು ವರ್ಷಗಳ ನಂತರ ಫೆಬ್ರವರಿಯಲ್ಲಿ ಏಕದಿನ ತಂಡಕ್ಕೆ ಮರಳಿದ್ದರು. ಅಂದಿನಿಂದ 21 ಪಂದ್ಯಗಳನ್ನು ಆಡಿರುವ ವೇಗಿ ಸಿರಾಜ್​ 37 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ, ಸಿರಾಜ್ ಅವರು ತಮ್ಮ ಕೊನೆಯ 10 ಏಕದಿನ ಪಂದ್ಯದಲ್ಲಿ ಕನಿಷ್ಠ ಒಂದು ವಿಕೆಟ್​ ಆದರೂ ಗಳಿಸಿದ್ದಾರೆ. ಅವರು ಸತತ ಯಶಸ್ವಿ ಬೌಲಿಂಗ್​ ಪ್ರದರ್ಶನ ನೀಡುತ್ತಾಬರುತ್ತಿದ್ದು, ಈ ವರ್ಷದ ಆರಂಭದಲ್ಲಿ ಲಂಕಾ ವಿರುದ್ಧ 9 ವಿಕೆಟ್​ ಹಾಗೂ ಕಿವೀಸ್​​ ವಿರುದ್ಧ ನಾಲ್ಕು ವಿಕೆಟ್​ ಪಡೆದು ಮಿಂಚಿದ್ದಾರೆ.

ಟಾಪ್​ 5 ರ‍್ಯಾಂಕಿಂಗ್‌:
ಮೊಹಮ್ಮದ್ ಸಿರಾಜ್ (ಭಾರತ) - 729
ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ) - 727
ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) - 708
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) - 665
ರಶೀದ್ ಖಾನ್ (ಅಫ್ಘಾನಿಸ್ತಾನ) - 659

ನ್ಯೂಜಿಲೆಂಡ್ ವಿರುದ್ಧ ಭಾರತದ ಸರಣಿ ಗೆಲುವಿನ ನಂತರ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಸಿರಾಜ್ ಅವರ ಅಸಾಧಾರಣ ಪುನರಾಗಮನಕ್ಕಾಗಿ ಶ್ಲಾಘಿಸಿದ್ದಾರೆ. ಸಿರಾಜ್​ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ತಂಡವು ಅವರಿಂದ ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಆರಂಭಿಕ ಓವರ್​ಗಳಲ್ಲಿ ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಆಡುತ್ತಾರೆ. ಸ್ವಿಂಗ್​ನಲ್ಲಿ ಸುಧಾರಿಸಿದ್ದಾರೆ. ಆರಂಭಿಕ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ ಮತ್ತು ಮಧ್ಯಮ ಓವರ್‌ಗಳಲ್ಲಿ ಉತ್ತಮ ಸ್ಪೆಲ್​ ಮಾಡುತ್ತಾರೆ ಎಂದು ನಾಯಕ ಹೇಳಿದ್ದರು.

ಬ್ಯಾಟಿಂಗ್​ ಶ್ರೇಯಾಂಕ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 360 ರನ್​ ಗಳಿಸಿದ ಶುಭಮನ್ ಗಿಲ್ ಅವರು ರ‍್ಯಾಂಕಿಂಗ್‌ನಲ್ಲಿ ವಿರಾಟ್​ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಮೊದಲ ಪಂದ್ಯದಲ್ಲಿ ದ್ವಿಶತಕ, ಎರಡನೇ ಲೋ ಸ್ಕೋರ್​ ಮ್ಯಾಚ್​ನಲ್ಲಿ 41 ಮತ್ತು ಕೊನೆಯ ಏಕದಿನದಲ್ಲಿ 112 ರನ್​ಗಳಿಸಿದ ಗಿಲ್​ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು. ಅವರು ಆಡಿದ ಪಂದ್ಯಗಳಿಂದ 734 ಅಂಕಗಳಿಂದ ಆರನೇ ರ‍್ಯಾಂಕಿಂಗ್‌ ಪಡೆದಿದ್ದಾರೆ. ವಿರಾಟ್​ ಕೊಹ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ವೈಯುಕ್ತಿಕ 30ನೇ ಶತಕ ಸಿಡಿಸಿದ ರೋಹಿತ್ ಶರ್ಮಾ ಅವರು 9ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IND vs NZ 3rd ODI: ಕಿವೀಸ್​ ಕ್ಲೀನ್​ಸ್ವೀಪ್​, ಏಕದಿನ ಶ್ರೇಯಾಂಕದಲ್ಲಿ ಭಾರತದ ಅಧಿಪತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.