ETV Bharat / sports

WTC Final: ಶಮಿ ಮಾರಕ ಬೌಲಿಂಗ್ ದಾಳಿಗೆ ಕಿವೀಸ್ ತತ್ತರ: 249 ಕ್ಕೆ ಆಲೌಟ್, 32 ರನ್​ಗಳ ಮುನ್ನಡೆ

author img

By

Published : Jun 22, 2021, 9:18 PM IST

ನ್ಯೂಜಿಲ್ಯಾಂಡ್ ತಂಡ ಡಿವೋನ್​ ಕಾನ್ವೆ 54 ಕೇನ್ ವಿಲಿಯಮ್ಸನ್​ 49 ಮತ್ತು ಟೀಮ್ ಸೌತಿ ಅವರ 30 ರನ್​ಗಳ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 249 ರನ್​ಗಳಿಸಿದೆ.

WTC Final
WTC Final

ಸೌತಾಂಪ್ಟನ್: ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 249 ರನ್​ಗಳಿಗೆ ಆಲೌಟ್ ಆಗಿದೆ. ಆದರೂ ಟಿಮ್ ಸೌಥಿ ಅವರ ಸಾಹಸದಿಂದ 32 ರನ್​ಗಳ ಅಲ್ಪ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದೆ.

101 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡಿದ್ದ ಕಿವೀಸ್​ ಇಂದು ಬ್ಯಾಟಿಂಗ್ ಮುಂದುವರಿಸಿತು. ಖಾತೆ ತೆರೆಯದೇ ನೈಟ್​ ವಾಚ್​ಮನ್ ಆಗಿದ್ದ ರಾಸ್​ ಟೇಲರ್​ 11 ರನ್​ಗಳಿಸಿ ಶಮಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹೆನ್ರಿ ನಿಕೋಲ್ಸ್​ 7, ಬಿಜೆ ವಾಟ್ಲಿಂಗ್ 1 ಗ್ರ್ಯಾಂಡ್​ಹೋಮ್​ 13 ರನ್​ಗಳಿಸಿ ಔಟಾದರು.

162ಕ್ಕೆ 6 ವಿಕೆಟ್​ ಕಳೆದುಕೊಂಡು 200 ಗಡಿ ದಾಟುವುದು ಅನುಮಾನ ಎನ್ನುವ ಸಂದರ್ಭದಲ್ಲಿ ನಾಯಕ ವಿಲಿಯಮ್ಸನ್​ ಜೊತೆಗೂಡಿದ ಜೆಮೀಸನ್(21)​ 30 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇದರ ಬೆನ್ನಲ್ಲೇ 177 ಎಸೆತಗಳಲ್ಲಿ 6 ಬೌಂಡರಿ ಸಹಿತ 49 ರನ್​ಗಳಿಸಿದ್ದ ಕೇನ್​ ವಿಲಿಯಮ್ಸನ್​ ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಆದರೆ ಕೊನೆಯಲ್ಲಿ ಅಬ್ಬರಿಸಿದ ಟಿಮ್ ಸೌಥಿ 46 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 30 ರನ್​ಗಳಿಸಿ 32 ರನ್​ಗಳ ಮುನ್ನಡೆಗೆ ನೆರವಾದರು. ಭಾರತದ ಪರ ಇಶಾಂತ್ ಶರ್ಮಾ 48ಕ್ಕೆ3 , ಮೊಹಮ್ಮದ್ ಶಮಿ 76ಕ್ಕೆ4, ಅಶ್ವಿನ್​ 28ಕ್ಕೆ 2 ಮತ್ತು ಜಡೇಜಾ 20ಕ್ಕೆ 1 ವಿಕೆಟ್​ ಪಡೆದು ಮಿಂಚಿದರು.

ಇದನ್ನು ಓದಿ:WTC Final : ಶಮಿ ಈ ಸಾಧನೆ ಮಾಡಿದ ಭಾರತದ ಪರ ಮೊದಲ ಬೌಲರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.