ETV Bharat / sports

ಮೊಹಮ್ಮದ್ ಅಜರುದ್ದೀನ್​ಗೆ ಬಿಸಿಸಿಐ ಕಾರ್ಯಕಾರಿಣಿ ಸಮಿತಿಯಲ್ಲಿ ಸ್ಥಾನ - ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್​

ಕೊರೊನಾ ಕಾರಣದಿಂದ ಕಡಿತಗೊಳಿಸಿರುವ ದೇಶಿ ಕ್ರಿಕೆಟಿಗರ ಪರಿಹಾರ ಪ್ಯಾಕೇಜ್ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಮೇಲ್ವಿಚಾರಣೆ ನಡೆಸಲಿದೆ.

ಮೊಹಮ್ಮದ್ ಅಜರುದ್ದೀನ್
ಮೊಹಮ್ಮದ್ ಅಜರುದ್ದೀನ್
author img

By

Published : Jul 11, 2021, 6:59 PM IST

ಹೈದರಾಬಾದ್: ಭಾರತ ಕ್ರಿಕೆಟ್​​ ತಂಡದ ಮಾಜಿ ನಾಯಕ ಹಾಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಅವರನ್ನು ಬಿಸಿಸಿಐ ಕಾರ್ಯಕಾರಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಭ್ರಷ್ಟಾಚಾರ ಆರೋಪದಡಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡು ಮತ್ತೆ ಮರುನೇಮಕಗೊಂಡಿದ್ದ ಅಜರುದ್ದೀನ್‌ಗೆ ಈ ಹುದ್ದೆ ನೀಡಲಾಗಿದೆ. ಒಟ್ಟು 7 ಸದಸ್ಯರು ಬಿಸಿಸಿಐ ಕಾರ್ಯಕಾರಣಿ ಸಮಿತಿಯಲ್ಲಿದ್ದಾರೆ. ಜಯದೇವ್ ಷಾ, ರೋಹನ್ ಜೇಟ್ಲಿ, ಯುಧ್ವೀರ್ ಸಿಂಗ್, ದೇವಾಜಿತ್ ಸೈಕಿಯಾ, ಅವಿಶೇಕ್ ದಾಲ್ಮಿಯಾ ಮತ್ತು ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಸಂತೋಷ್ ಮೆನನ್ ಹಾಗೂ ಮೊಹಮ್ಮದ್ ಅಜರುದ್ದೀನ್ ಈ ಸಮಿತಿಯಲ್ಲಿದ್ದಾರೆ.

ಬಿಸಿಸಿಐ ಕಾರ್ಯಕಾರಣಿ ಸಮಿತಿ ಸೇರಿಕೊಂಡಿರುವ ಮೊಹಮ್ಮದ್ ಅಜರುದ್ದೀನ್, 2021-22ರ ದೇಶಿ ಟೂರ್ನಿಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಕೊರೊನಾ ಕಾರಣದಿಂದ ಕಡಿತಗೊಳಿಸಿರುವ ದೇಶಿ ಕ್ರಿಕೆಟಿಗರ ಪರಿಹಾರ ಪ್ಯಾಕೇಜ್ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಈ ಸಮಿತಿ ನಿರ್ಧಾರ ಕೈಗೊಳ್ಳಲಿದೆ.

ಇದನ್ನೂ ಓದಿ: HCAನಿಂದ ತಮ್ಮನ್ನು ವಜಾಗೊಳಿಸಿದ್ದು ಕಾನೂನು ಬಾಹಿರ: ಅಜರುದ್ದೀನ್ ಸಿಡಿಮಿಡಿ

ಕಳೆದ ವರ್ಷ ದೇಶಿ ಟೂರ್ನಿ ಆಯೋಜನೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಕ್ರಿಕೆಟಿಗ ಒಪ್ಪಂದದ ಗಳಿಕೆ, ಪರಿಹಾರ ಪ್ಯಾಕೇಜ್ ಸೇರಿದಂತೆ ಕ್ರಿಕೆಟಿಗರ ಹಾಗೂ ದೇಶಿ ಟೂರ್ನಿ ಕುರಿತು ಈ ಸದಸ್ಯರ ತಂಡ ಮೇಲ್ವಿಚಾರಣೆ ಮಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.