ಮುಂಬೈ: ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಕಾರ್ಯಕರ್ತರು ಐಪಿಎಲ್ಗಾಗಿ ಮುಂಬೈಗೆ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಐಷಾರಾಮಿ ಬಸ್ಸಿನ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ.
ಪಂಚತಾರಾ ಹೋಟೆಲ್ ಮುಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಸ್ ಅನ್ನು ಪಾರ್ಕ್ ಮಾಡಲಾಗಿತ್ತು. ಮಂಗಳವಾರ ಮಧ್ಯರಾತ್ರಿ ಅಲ್ಲಿಗೆ ಬಂದಂತಹ ಎಂಎನ್ಎಸ್ನ ಸಾರಿಗೆ ವಿಭಾಗದ ಕಾರ್ಯಕರ್ತರು ತಮ್ಮ ಬೇಡಿಕೆಯುಳ್ಳ ಪೋಸ್ಟರ್ಗಳನ್ನು ಬಸ್ ಮುಂದೆ ಅಂಟಿಸಿ ಘೋಷಣೆ ಕೂಗುತ್ತಾ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
-
Delhi Capital IPL team parked bus allegedly attacked#IPL2022pic.twitter.com/hzmdb60yXm
— Himalayan Guy (@RealHimalayaGuy) March 16, 2022 " class="align-text-top noRightClick twitterSection" data="
">Delhi Capital IPL team parked bus allegedly attacked#IPL2022pic.twitter.com/hzmdb60yXm
— Himalayan Guy (@RealHimalayaGuy) March 16, 2022Delhi Capital IPL team parked bus allegedly attacked#IPL2022pic.twitter.com/hzmdb60yXm
— Himalayan Guy (@RealHimalayaGuy) March 16, 2022
ಈ ಬಗ್ಗೆ ಎಂಎನ್ಎಸ್ ಕಾರ್ಯಕರ್ತ ಸಂಜಯ್ ನಾಯಕ್ ಮಾತನಾಡಿ, ಹೊರ ರಾಜ್ಯಗಳ ಬಸ್ಗಳನ್ನು ಬಾಡಿಗೆಗೆ ಪಡೆಯುವುದರಿಂದ ಸ್ಥಳೀಯರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಪ್ರತಿಭಟನೆಯ ಹೊರತಾಗಿಯೂ ಅವರು ಕೆಲವು ಬಸ್ಗಳು ಮತ್ತು ಕೆಲವು ಚಿಕ್ಕ ವಾಹನಗಳನ್ನು ಡೆಲ್ಲಿ ಮತ್ತು ಬೇರೆ ಭಾಗಗಳಿಂದ ಇಲ್ಲಿಗೆ ಕರೆತಂದಿದ್ದಾರೆ. ಅದರಿಂದ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಘಟನೆ ಬಗ್ಗೆ ತಿಳಿಯುತ್ತಿದಂತೆ ಹೆಚ್ಚಿನ ಬಸ್‌ಗಳಿಗೆ ಹಾನಿಯಾಗುವುದನ್ನು ತಡೆಯಲು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.
ನಾಲ್ವರ ಬಂಧನ: ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಬಸ್ಗೆ ಹಾನಿ ಮಾಡಿರುವ ಆರೋಪದ ಮೇಲೆ ಎಂಎನ್‌ಎಸ್ ಸಾರಿಗೆ ವಿಭಾಗದ ಉಪಾಧ್ಯಕ್ಷ ಪ್ರಶಾಂತ್ ಗಾಂಧಿ ಸೇರಿದಂತೆ ನಾಲ್ವರು ಕಾರ್ಯಕರ್ತರನ್ನು ಕೊಲಾಬ ಠಾಣೆಯ ಪೊಲೀಸ್ ಬಂಧಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಮತೆ 5-6 ಮಂದಿ ಅನಾಮಿಕ ವ್ಯಕ್ತಿಗಳ ಮೇಲೂ ಐಪಿಸಿ ಸೆಕ್ಷನ್ 143, 147, 159, 427 ಅಡಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.
ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ತಂಡಕ್ಕೆ 2 ಬಾರಿಯ ಐಪಿಎಲ್ ಚಾಂಪಿಯನ್ ಎಂಟ್ರಿ