ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಪ್ರಿಯಾ ಪೂನಿಯಾ ತಾಯಿ ಕೋವಿಡ್ನಿಂದ ಮಂಗಳವಾರ ನಿಧನರಾಗಿದ್ದು, ವಿವಿಧ ದೇಶಗಳ ಮಹಿಳಾ ಆಟಗಾರ್ತಿಯರು ಸಂತಾಪ ಸೂಚಿಸಿದ್ದಾರೆ.
ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸದ ಭಾಗವಾಗಿರುವ ಪ್ರಿಯಾ ಪೂನಿಯಾ ತಾಯಿಯನ್ನು ಕಳೆದುಕೊಂಡಿದ್ದು, ಅವರಿಗೆ ಬೇರೆ ತಂಡಗಳ ಆಟಗಾರ್ತಿಯರು ಸೇರಿ ಭಾರತೀಯ ಕ್ರಿಕೆಟಿಗರು ಧೈರ್ಯ ತುಂಬಿದ್ದಾರೆ.
"ಈ ದುಃಖದ ಸಮಯದಲ್ಲಿ ನಾನು ಮತ್ತು ಭಾರತ ತಂಡ ನಿನ್ನ ಪಕ್ಕದಲ್ಲಿ ನಿಲ್ಲುತ್ತದೆ. ದೈರ್ಯವಾಗಿರು ಮಗು" ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
"ನನ್ನ ಹೃತ್ಪೂರಕ ಸಂತಾಪ ಸ್ವೀಕರಿಸು, ನೀನು(ಅಮ್ಮನನ್ನು) ಕಳೆದುಕೊಂಡಿರುವುದರ ಬಗ್ಗೆ ಕೇಳುತ್ತಿರುವುದಕ್ಕೆ ದಯವಿಟ್ಟು ಕ್ಷಮಿಸು. ಈ ಕಷ್ಟದ ಸಮಯದಲ್ಲಿ ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಮತ್ತು ನಮ್ಮ ಪ್ರಾರ್ಥನೆಯಲ್ಲಿ ಇರುತ್ತಾರೆ" ಎಂದು ತಂಡದ ಸಹ ಆಟಗಾರ್ತಿ ಪೂನಮ್ ರಾವುತ್ ಟ್ವೀಟ್ ಮಾಡಿದ್ದಾರೆ.
-
In this hour of grief , we ( and I speak on behalf of the team ) stand right beside you. We have your back . Be strong kid . @PriyaPunia6 https://t.co/fhvQewYx5B
— Mithali Raj (@M_Raj03) May 19, 2021 " class="align-text-top noRightClick twitterSection" data="
">In this hour of grief , we ( and I speak on behalf of the team ) stand right beside you. We have your back . Be strong kid . @PriyaPunia6 https://t.co/fhvQewYx5B
— Mithali Raj (@M_Raj03) May 19, 2021In this hour of grief , we ( and I speak on behalf of the team ) stand right beside you. We have your back . Be strong kid . @PriyaPunia6 https://t.co/fhvQewYx5B
— Mithali Raj (@M_Raj03) May 19, 2021
"ಆಸ್ಟ್ರೇಲಿಯಾ ತಂಡದ ಮಾಜಿ ನಾಯಕಿ ಲಿಸಾ ಸ್ಥಾಲೇಕರ್, ಈ ದುರಂತದಲ್ಲಿ ನಿಮಗಾಗಿರುವ ನಷ್ಟದ ಬಗ್ಗೆ ಕೇಳುತ್ತಿರುವುದಕ್ಕೆ ಕ್ಷಮೆಯಿರಲಿ, ಓಂ ಶಾಂತಿ" ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
-
Please accept my heartfelt condolences @PriyaPunia6
— Punam Raut (@raut_punam) May 18, 2021 " class="align-text-top noRightClick twitterSection" data="
I'm really sorry to hear about your loss. Please stay strong in these difficult times. She will always be in our hearts and our prayers.
">Please accept my heartfelt condolences @PriyaPunia6
— Punam Raut (@raut_punam) May 18, 2021
I'm really sorry to hear about your loss. Please stay strong in these difficult times. She will always be in our hearts and our prayers.Please accept my heartfelt condolences @PriyaPunia6
— Punam Raut (@raut_punam) May 18, 2021
I'm really sorry to hear about your loss. Please stay strong in these difficult times. She will always be in our hearts and our prayers.
ಇತ್ತೀಚೆಗಷ್ಟೇ ಭಾರತ ತಂಡದಲ್ಲಿ ಆಡುವ ಕರ್ನಾಟಕದ ವೇದಾ ಕೃಷ್ಣಮೂರ್ತಿ ತಾಯಿ ಹಾಗೂ ಸಹೋದರಿ ಕೂಡ ಮಾರಕ ಕೊರೊನಾಗೆ ಬಲಿಯಾಗಿದ್ದರು. ಪುರುಷ ತಂಡದ ಆಟಗಾರರಾದ ಪಿಯೂಷ್ ಚಾವ್ಲಾ ತಂದೆ, ಐಪಿಎಲ್ ಉದಯೋನ್ಮುಖ ತಾರೆ ಚೇತನ್ ಸಕಾರಿಯಾ ತಂದೆ ಹಾಗೂ ಮಾಜಿ ವೇಗದ ಬೌಲರ್ ಆರ್.ಪಿ.ಸಿಂಗ್ ತಂದೆ ಕೂಡ ಕೋವಿಡ್ಗೆ ಬಲಿಯಾಗಿದ್ದಾರೆ.
ಇದನ್ನು ಓದಿ:ಮೇ 29 ರಂದು ಬಿಸಿಸಿಐ ವಿಶೇಷ ಸಭೆ: ಟಿ20 ವಿಶ್ವಕಪ್, ಐಪಿಎಲ್ ಆಯೋಜನೆ ಬಗ್ಗೆ ನಿರ್ಧಾರ ಸಾಧ್ಯತೆ