ದುಬೈ: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ನ ಸ್ಟಾರ್ ಬ್ಯಾಟರ್ ಆ್ಯಮಿ ಸೆಟರ್ಥ್ವೈಟ್ ಟಾಪ್ 5ಗೆ ಮತ್ತೆ ಮರಳಿದ್ದಾರೆ.
ಮಂಗಳವಾರ ಐಸಿಸಿ ಏಕದಿನ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಮಿಥಾಲಿ 762 ರೇಟಿಂಗ್ ಅಂಕಗಳೊಂದಿಗೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ 7ನೇ ಶ್ರೇಯಾಂಕದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅಜೇಯ 79 ರನ್ ಸಿಡಿಸಿದ್ದ ಸೆಟರ್ಥ್ವೈಟ್ ಮತ್ತೆ ಟಾಪ್ 5ಗೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾದ ಲಿಜೆಲ್ಲೆ ಲೀ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಹೀಲಿ ಮತ್ತು ಇಂಗ್ಲೆಂಡ್ನ ಟಮ್ಮಿ ಬ್ಬ್ಯೂಮಾಂಟ್ 4ನೇ ಸ್ಥಾನದಲ್ಲಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 89 ರನ್ಗಳಿಸಿದ್ದ ಆಂಗ್ಲರ ನಾಯಕಿ ಹೀದರ್ ನೈಟ್(9) ಟಾಪ್ 10ಗೆ ಪ್ರವೇಶಿಸಿದ್ದಾರೆ.
- — ICC (@ICC) September 21, 2021 " class="align-text-top noRightClick twitterSection" data="
— ICC (@ICC) September 21, 2021
">— ICC (@ICC) September 21, 2021
ಬೌಲರ್ಗಳ ಶ್ರೇಯಾಂಕದಲ್ಲಿ ಭಾರತದ ಜೂಲನ್ ಗೋಸ್ವಾಮಿ ಒಂದು ಸ್ಥಾನ ಮೇಲೇರಿ 4ನೇ ಶ್ರೇಯಾಂಕ ಪಡೆದಿದ್ದರೆ, ಪೂನಮ್ ಯಾದವ್ 9ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೆಸ್ ಜೊನಾಸೆನ್ ಮತ್ತು ಮೆಗನ್ ಶೂಟ್ ಮೊದಲೆರಡು ಸ್ಥಾನ ಕಾಯ್ದುಕೊಂಡಿದ್ದಾರೆ.
ಆಲ್ರೌಂಡರ್ ದೀಪ್ತಿ ಶರ್ಮಾ ಒಂದು ಸ್ಥಾನ ಮೇಲೇರಿ 4ರಲ್ಲಿದ್ದರೆ, ಆಸೀಸ್ ಸ್ಟಾರ್ ಎಲಿಸ್ ಪೆರ್ರಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತ - ಆಸ್ಟ್ರೇಲಿಯಾ ಏಕದಿನ ಪಂದ್ಯ: ಕ್ರಿಕೆಟ್ ಜೀವನದಲ್ಲಿ 20 ಸಾವಿರ ರನ್ ಗಳಿಸಿ ದಾಖಲೆ ಬರೆದ ಮಿಥಾಲಿ