ನವದೆಹಲಿ: ಮಹಿಳಾ ಕ್ರಿಕೆಟ್ನ ಸಚಿನ್ ಎಂದೇ ಖ್ಯಾತರಾದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 22 ವರ್ಷಗಳು ಕಳೆದಿವೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಳಿಕ ಈ ಸಾಧನೆ ಮಾಡಿರುವ ವಿಶ್ವದ ಎರಡನೇ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ.
1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಮಿಥಾಲಿ ರಾಜ್ ಈಗಾಗಲೇ ಏಕದಿನ ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಕೆ ಮಾಡಿದ್ದು, ಇಷ್ಟೊಂದು ರನ್ಗಳಿಕೆ ಮಾಡಿರುವ ಏಕೈಕ ಮಹಿಳಾ ಕ್ರಿಕೆಟರ್ಸ್ ಆಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಸಾವಿರ ರನ್(ಟೆಸ್ಟ್, ಏಕದಿನ ಹಾಗೂ ಟಿ-20) ಗಳಿಕೆ ಮಾಡಿದ್ದಾರೆ.
ಇದನ್ನೂ ಓದಿರಿ: ಕಾರು ಅಪಘಾತದಲ್ಲಿ ತೆಲುಗು ಖ್ಯಾತ ನಟನಿಗೆ ಗಂಭೀರ ಗಾಯ..!
ಜೂನ್ 25 1999 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮಿಥಾಲಿ 214 ಏಕದಿನ, 11 ಟೆಸ್ಟ್ ಹಾಗೂ 89 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 7 ಶತಕ ಹಾಗೂ 55 ಅರ್ಧಶತಕಗಳ ಸಹಿತ 7098 ರನ್ ಗಳಿಸಿದ್ದಾರೆ. 89 ಟಿ-20 ಪಂದ್ಯಗಳಲ್ಲಿ 17 ಅರ್ಧಶತಕ ಸಹಿತ 2364 ರನ್ ಗಳಿಸಿದ್ದಾರೆ. ಆಡಿರುವ 11 ಟೆಸ್ಟ್ ಪಂದ್ಯಗಳಿಂದ 669 ರನ್ಗಳಿಕೆ ಮಾಡಿದ್ದು, ಇದರಲ್ಲಿ 1 ಶತಕ ಹಾಗೂ ಒಂದು ಅರ್ಧಶತಕ ಸೇರಿದೆ.
ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್, ಅತಿ ಹೆಚ್ಚು ಅರ್ಧಶತಕ, ಅತಿ ಹೆಚ್ಚು ಏಕದಿನ ಪಂದ್ಯ ಹಾಗೂ ಅತಿ ಹೆಚ್ಚು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಮೊದಲ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಸಚಿನ್, ಜಯಸೂರ್ಯ, ಮಿಯಾಂದಾದ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 22 ವರ್ಷ ಪೂರೈಸಿದ 4ನೇ ಪ್ಲೇಯರ್ ಎಂಬ ಸಾಧನೆಗೂ ಕೂಡ ಮಿಥಾಲಿ ಪಾತ್ರರಾಗಿದ್ದಾರೆ.