ETV Bharat / sports

ICC Women's World Cup : ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಹೊಸ ದಾಖಲೆ - ಮಿಥಾಲಿ ರಾಜ್ ದಾಖಲೆ

ಮಿಥಾಲಿ ರಾಜ್ ಅವರು ಗುರುವಾರ ನ್ಯೂಜಿಲೆಂಡ್ ವಿರುದ್ಧದ ಮ್ಯಾಚ್‌ ಮೂಲಕ ನಾಯಕಿಯಾಗಿ 150 ಏಕದಿನ ಪಂದ್ಯಗಳನ್ನು ಪೂರ್ಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಹೆಚ್ಚು ಏಕದಿನ ಪಂದ್ಯಗಳ ನಾಯಕತ್ವ ವಹಿಸಿದ ಕೀರ್ತಿಗೆ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ..

Mithali Raj breaks record for most matches captained in ICC Women's Cricket World Cup
ICC Women's World Cup: ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಹೊಸ ದಾಖಲೆ
author img

By

Published : Mar 12, 2022, 9:03 AM IST

ಹ್ಯಾಮಿಲ್ಟನ್, ನ್ಯೂಜಿಲೆಂಡ್ : ಭಾರತದ ವನಿತೆಯರ ಕ್ರಿಕೆಟ್​ ತಂಡದ ನಾಯಕಿ ಮಿಥಾಲಿ ರಾಜ್ ಅವರು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳ ನಾಯಕತ್ವ ವಹಿಸಿದ ದಾಖಲೆಯನ್ನು ಶನಿವಾರ ಮುರಿದಿದ್ದಾರೆ.

ನಾಯಕಿಯಾಗಿ ತನ್ನ 24ನೇ ಪಂದ್ಯವನ್ನು ಮಿಥಾಲಿ ರಾಜ್ ಆಡುತ್ತಿದ್ದು, ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳ ನಾಯಕತ್ವವಹಿಸಿದ ಆಸ್ಟ್ರೇಲಿಯಾದ ದಂತಕಥೆ ಬೆಲಿಂಡಾ ಕ್ಲಾರ್ಕ್ ಅವರನ್ನು ಇಂದಿನ ಪಂದ್ಯದ ಮೂಲಕ ಹಿಂದಿಕ್ಕಿದ್ದಾರೆ.

ಮಿಥಾಲಿ ರಾಜ್ ಅವರು ಗುರುವಾರ ನ್ಯೂಜಿಲೆಂಡ್ ವಿರುದ್ಧದ ಮ್ಯಾಚ್‌ ಮೂಲಕ ನಾಯಕಿಯಾಗಿ 150 ಏಕದಿನ ಪಂದ್ಯಗಳನ್ನು ಪೂರ್ಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಹೆಚ್ಚು ಏಕದಿನ ಪಂದ್ಯಗಳ ನಾಯಕತ್ವ ವಹಿಸಿದ ಕೀರ್ತಿಗೆ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲಖನೌ ತಂಡದ ಕ್ಯಾಪ್ಟನ್​ ಕೆ.ಎಲ್‌.ರಾಹುಲ್: ಆರ್​​ಸಿಬಿ ಬಗ್ಗೆ ಹೇಳಿದ್ದೇನು?

ಇಂದು ನ್ಯೂಜಿಲ್ಯಾಂಡ್​ನ ಸೆಡನ್​ ಪಾರ್ಕ್​ನಲ್ಲಿ ಐಸಿಸಿ ಮಹಿಳಾ ವಿಶ್ವಕಪ್​ನ ಪಂದ್ಯ ನಡೆಯುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಮಿಥಾಲಿ ರಾಜ್ ಪಡೆ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಸ್ಮೃತಿ ಮಂಧಾನಾ ಅರ್ಧಶತಕ ಪೂರೈಸಿ, ಶತಕದತ್ತ ಮುನ್ನುಗ್ಗುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.