ವಾರ್ಸೆಸ್ಟರ್: ಭಾರತ ಏಕದಿನ ತಂಡದ ನಾಯಕ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 15 ರನ್ಗಳಿಸುತ್ತಿದ್ದಂತೆ ಇಂಗ್ಲೆಂಡ್ ತಂಡದ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಅವರನ್ನು ಹಿಂದಿಕ್ಕಿ ಈ ದಾಖಲೆಗೆ ಪಾತ್ರರಾಗಿದ್ದಾರೆ.
ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಸಾವಿರ ಮೈಲುಗಲ್ಲು ತಲುಪಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದ ಮಿಥಾಲಿ, ಇಂದಿನ ಪಂದ್ಯದಲ್ಲಿ ಮಹಿಳಾ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವ ದಾಖಲೆಗೂ ಪಾತ್ರರಾಗಿದ್ದಾರೆ. 38 ವರ್ಷದ ಬ್ಯಾಟರ್ ಮೂರು ಮಾದರಿಯ ಕ್ರಿಕೆಟ್ನಿಂದ 10,277 ರನ್ಗಳಿಸಿದ್ದಾರೆ.
-
The leading run-scorer across formats in women's cricket 🙌
— ICC (@ICC) July 3, 2021 " class="align-text-top noRightClick twitterSection" data="
Take a bow, @M_Raj03! #ENGvIND pic.twitter.com/cykCZCtQwk
">The leading run-scorer across formats in women's cricket 🙌
— ICC (@ICC) July 3, 2021
Take a bow, @M_Raj03! #ENGvIND pic.twitter.com/cykCZCtQwkThe leading run-scorer across formats in women's cricket 🙌
— ICC (@ICC) July 3, 2021
Take a bow, @M_Raj03! #ENGvIND pic.twitter.com/cykCZCtQwk
ಎಡ್ವರ್ಡ್ಸ್ 309 ಪಂದ್ಯಗಳಿಂದ 10, 273 ರನ್ಗಳಿಸಿದ್ದರು. ಅವರು 78 ಅರ್ಧಶತಕ ಮತ್ತು 13 ಶತಕ ಸಿಡಿಸಿದ್ದಾರೆ. ಮಿಥಾಲಿ 317 ಪಂದ್ಯಗಳಿಂದ 10, 277 ರನ್ಗಳಿಸಿದ್ದಾರೆ. 78 ಅರ್ಧಶತಕ ಮತ್ತು 8 ಶತಕ ಸೇರಿವೆ.
ಮಿಥಾಲಿ ರಾಜ್ ಟೆಸ್ಟ್ ಕ್ರಿಕೆಟ್ನಲ್ಲಿ 669 ರನ್, ಏಕದಿನ ಕ್ರಿಕೆಟ್ನಲ್ಲಿ 7244 ರನ್ ಮತ್ತು ಟಿ20 ಕ್ರಿಕೆಟ್ನಲ್ಲಿ 2364 ರನ್ಗಳಿಸಿದ್ದಾರೆ.
ಇದನ್ನು ಓದಿ:ಪ್ರತಿಷ್ಠಿತ 'ರಾಜೀವ್ ಗಾಂಧಿ ಖೇಲ್ ರತ್ನ'ಕ್ಕೆ ಮಿಥಾಲಿ, ಅಶ್ವಿನ್ ಹೆಸರು ಶಿಫಾರಸು