ETV Bharat / sports

ಸಿಎಸ್​ಕೆ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಚಾಂಪಿಯನ್ ಮುಂಬೈ - ಮುಂಬೈ ಸ್ಕ್ವಾಡ್

ಎರಡು ಬಲಿಷ್ಠ ತಂಡಗಳು ಐಪಿಎಲ್​ನಲ್ಲಿ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ 18 ಮತ್ತು ಸಿಎಸ್​ಕೆ 12ರಲ್ಲಿ ಜಯ ಸಾಧಿಸಿದೆ. 2018ರಲ್ಲಿ ಸಿಎಸ್​ಕೆ ಮರಳಿದ ನಂತರ ಮುಂಬೈ 6, ಸಿಎಸ್​ಕೆ ಕೇವಲ 2ರಲ್ಲಿ ಜಯ ಸಾಧಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್​​ ಲೈವ್

author img

By

Published : May 1, 2021, 7:05 PM IST

Updated : May 1, 2021, 7:33 PM IST

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಟಾಸ್​ ಗೆದ್ದಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲಿನ ನಂತರ ಅದ್ಭುತವಾಗಿ ಹಿಂತಿರುಗಿದ ಸಿಎಸ್​ಕೆ ಸತತ 5 ಪಂದ್ಯಗಳಲ್ಲಿ ಗೆದ್ದು ಅತ್ಯುತ್ತಮ ರನ್​ರೇಟ್​ನೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ಬಲಿಷ್ಠ ಮುಂಬೈ ವಿರುದ್ಧ ಕಠಿಣ ಸ್ಪರ್ಧೆ ನಿರೀಕ್ಷಿಸಲಾಗುತ್ತಿದೆ. ಚೆನ್ನೈ ಗೆದ್ದರೆ ಪ್ಲೇ ಆಫ್​ ಸ್ಥಾನಕ್ಕೆ ತುಂಬಾ ಹತ್ತಿರವಾಗಲಿದೆ, ಇತ್ತ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲು ಕಂಡಿರುವ ಮುಂಬೈ ಪ್ಲೇ ಆಫ್​ ಹಾದಿಗೆ ಮರಳಲು ಗೆಲುವು ಪ್ರಮುಖ ಪಾತ್ರವಹಿಸಲಿದೆ.

ಮುಂಬೈ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ವೇಗಿ ಕೌಲ್ಟರ್ ನೈಲ್ ಬದಲಿಗೆ ನ್ಯೂಜಿಲ್ಯಾಂಡ್​ನ ಜಿಮ್ಮಿ ನೀಶಮ್ ಪದಾರ್ಪಣೆ ಮಾಡಲಿದ್ದಾರೆ. ಚೆನ್ನೈ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.

ಮುಖಾಮುಖಿ:

ಎರಡು ಬಲಿಷ್ಠ ತಂಡಗಳು ಐಪಿಎಲ್​ನಲ್ಲಿ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ 18 ಮತ್ತು ಸಿಎಸ್​ಕೆ 12ರಲ್ಲಿ ಜಯ ಸಾಧಿಸಿದೆ. 2018ರಲ್ಲಿ ಸಿಎಸ್​ಕೆ ಮರಳಿದ ನಂತರ ಮುಂಬೈ 6, ಸಿಎಸ್​ಕೆ ಕೇವಲ 2ರಲ್ಲಿ ಜಯ ಸಾಧಿಸಿದೆ.

ಚೆನ್ನೈಸೂಪರ್ ಕಿಂಗ್ಸ್ : ಫಾಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ( ನಾಯಕ/ಕೀಪರ್) ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್, ಲುಂಗಿ ಎಂಗಿಡಿ / ಇಮ್ರಾನ್ ತಾಹಿರ್

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ನಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಇದನ್ನು ಓದಿ: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಐಪಿಎಲ್​ ಟೂರ್ನಿ ಬೇಕಾ!? ಟಿಎಂಸಿ ಸಂಸದೆ ಪ್ರಶ್ನೆ

Last Updated : May 1, 2021, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.