ETV Bharat / sports

ಮುಂಬೈ ಬೌಲರ್​ಗಳ ದಾಳಿಗೆ ಮುಗ್ಗರಿಸಿದ ಪಂಜಾಬ್... 136ರನ್​ಗಳ ಸಾಧಾರಣ ಗುರಿ

ಪ್ಲೆ ಆಫ್ ದೃಷ್ಟಿಯಿಂದ ಮಹತ್ವದ್ದಾಗಿದ್ದ ಪಂದ್ಯದಲ್ಲಿ ಬುಮ್ರಾ ಮತ್ತು ಪೊಲಾರ್ಡ್ ದಾಳಿಗೆ ಸಿಲುಕಿದ ಪಂಜಾಬ್ ಕಿಂಗ್ಸ್ ತಂಡ ಕೇವಲ 135 ರನ್​ಗಳಿಸಿದೆ.

MI restrict PBKS to a below-par 135-6
ಮುಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್
author img

By

Published : Sep 28, 2021, 9:38 PM IST

ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ಪ್ರಬಲ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ತಂಡ ಐಡೆನ್ ಮಾರ್ಕ್ರಮ್​ ಅವರ ಏಕಾಂಗಿ ಹೋರಾಟದ ಹೊರೆತಾಗಿಯೂ ಕೇವಲ ರೋಹಿತ್​ ಪಡೆಗೆ 136ರನ್​ಗಳ ಸಾಧಾರಣ ಗುರಿ ನೀಡಿದೆ.

ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ ಬೌಲರ್​ಗಳು ಆರಂಭದಿಂದಲೂ ಪಂಜಾಬ್ ಬ್ಯಾಟರ್​ಗಳ ಮೇಲೆ ಒತ್ತಡ ಏರುವ ಮೂಲಕ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಮಯಾಂಕ್​ ಅನುಪಸ್ಥಿತಿಯಲ್ಲಿ ರಾಹುಲ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಮಂದೀಪ್ ಸಿಂಗ್ ಕೇವಲ 15 ರನ್​ಗಳಿಸಿ ಕೃನಾಲ್ ಪಾಂಡ್ಯಗೆ ವಿಕೆಟ್​ ಒಪ್ಪಿಸಿದರು. 6ನೇ ಓವರ್​ನಲ್ಲೇ ಕೀರನ್ ಪೊಲಾರ್ಡ್​ ಕ್ರಿಸ್​ ಗೇಲ್(1) ಮತ್ತು ಎದುರಾಳಿ ನಾಯಕ ರಾಹುಲ್​(21) ರನ್ನು ಒಂದೇ ಓವರ್​ನಲ್ಲಿ ಪೆವಿಲಿಯನ್​ಗಟ್ಟಿದರು.

ಆರಂಭಿಕ 3 ಬ್ಯಾಟರ್​ಗಳು ಪೆವಿಲಿಯನ್​ ಸೇರಿದ ಮೇಲೆ ವಿಂಡೀಸ್ ಸ್ಟಾರ್​ ಪೂರನ್​ ಕೂಡ ಬುಮ್ರಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಕೇವಲ 48 ರನ್​ಗಳಾಗುವಷ್ಟರಲ್ಲಿ ಪಂಜಾಬ್ 4 ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಯಿತು.

ಆದರೆ ಐಡೆನ್ ಮಾರ್ಕ್ರಮ್​ 29 ಎಸೆತಗಳಲ್ಲಿ 42 ರನ್​ ಹಾಗೂ ದೀಪಕ್ ಹೂಡ 26 ಎಸೆತಗಳಲ್ಲಿ 28 ರನ್​ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಹರ್​​ಪ್ರೀತ್ ಬ್ರಾರ್​ 14 ರನ್​ಗಳಿಸಿ ಅಜೇಯರಾಗುಳಿದರು.

ಮುಂಬೈ ಪರ ಬುಮ್ರಾ 24ಕ್ಕೆ 2, ಕೀರನ್ ಪೊಲಾರ್ಡ್​ 8ಕ್ಕೆ2, ಕೃನಾಲ್ ಮತ್ತು ರಾಹುಲ್ ಚಹರ್ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.