ETV Bharat / sports

ಮುಂದಿನ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ​ ಲಭ್ಯರಾಗುತ್ತಾರೆಂಬ ವಿಶ್ವಾಸವಿದೆ : ಜಹೀರ್​ ಖಾನ್ - ಐಪಿಎಲ್ 2021

ನಾವು ಈ ದಿನ ತರಬೇತಿ ಸೆಷನ್​ ಹೊಂದಿದ್ದೇವೆ. ಅದು ಹೇಗೆ ನಡೆಯುತ್ತದೆ ಎಂದು ನಾವು ನೋಡುತ್ತೇವೆ ಮತ್ತು ನಂತರ ನಾವು ಪಾಂಡ್ಯ ಕುರಿತು ಅಂತಿಮ ಕರೆ ತೆಗೆದುಕೊಳ್ಳುತ್ತೇವೆ. ಅವರು ಈಗಾಗಲೇ ಅಭ್ಯಾಸವನ್ನು ಆರಂಭಿಸಿದ್ದಾರೆ ಎನ್ನುವುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು..

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
author img

By

Published : Sep 25, 2021, 8:36 PM IST

ದುಬೈ : ಯುಎಇಯಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಸಣ್ಣ ಗಾಯದಿಂದ ಹೊರಗುಳಿದಿದ್ದ ಹಾರ್ದಿಕ್​ ಪಾಂಡ್ಯ ಭಾನುವಾರ ನಡೆಯಲಿರುವ ಆರ್​ಸಿಬಿ ವಿರುದ್ಧ ತಂಡಕ್ಕೆ ಮರಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಡೈರೆಕ್ಟರ್​ ಆಫ್​ ಕ್ರಿಕೆಟ್​ ಜಹೀರ್​ ಖಾನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಯುಎಇಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲೂ ಮುಖಭಂಗ ಅನುಭವಿಸಿದೆ. ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲು ಕಂಡಿದೆ. ಇದೀಗ ಭಾನುವಾರ ರಾಯಲ್ ಚಾಲೆಂಜರ್ಸ್​ ವಿರುದ್ಧ ತನ್ನ 10ನೇ ಪಂದ್ಯವನ್ನಾಡಲಿದ್ದು, ಗೆಲುವಿನ ಹಳಿಗೆ ಮರಳುವತ್ತ ಗಮನ ಹರಿಸಿದೆ.

ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಚೆನ್ನೈ ಮತ್ತು ಕೋಲ್ಕತ್ತಾ ವಿರುದ್ಧದ ಪಂದ್ಯಗಳಲ್ಲಿ ಆಡದಿರುವುದು ಅವರ ಫಿಟ್​ನೆಸ್​ ಬಗ್ಗೆ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ, ಜಹೀರ್​ ಖಾನ್​ ನಾಳಿನ ಪಂದ್ಯದಲ್ಲಿ ಪಾಂಡ್ಯ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾವು ಈ ದಿನ ತರಬೇತಿ ಸೆಷನ್​ ಹೊಂದಿದ್ದೇವೆ. ಅದು ಹೇಗೆ ನಡೆಯುತ್ತದೆ ಎಂದು ನಾವು ನೋಡುತ್ತೇವೆ ಮತ್ತು ನಂತರ ನಾವು ಪಾಂಡ್ಯ ಕುರಿತು ಅಂತಿಮ ಕರೆ ತೆಗೆದುಕೊಳ್ಳುತ್ತೇವೆ. ಅವರು ಈಗಾಗಲೇ ಅಭ್ಯಾಸವನ್ನು ಆರಂಭಿಸಿದ್ದಾರೆ ಎನ್ನುವುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು.

ಆತ ಫಿಟ್​ ಆಗಿದ್ದಾನೆ ಎಂದು ನಾವು ಭಾವಿಸುತ್ತೇವೆ ಮತ್ತು ನಾಳೆ ನಡೆಯಲಿರುವ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಿರಲಿದ್ದಾರೆ ಎಂಬ ಭರವಸೆಯಿದೆ" ಎಂದು ಜಹೀರ್ ಶನಿವಾರ ನಡೆದ ವರ್ಚುವಲ್​ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನು ಓದಿ:ಈ ವರ್ಷ ರದ್ದಾಗಿರುವ ಭಾರತ - ಇಂಗ್ಲೆಂಡ್​ ನಡುವಣ 5ನೇ ಟೆಸ್ಟ್​ 2022ಕ್ಕೆ ಮರು ಆಯೋಜನೆ: ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.