ಕೊಲೊಂಬೋ : ಶ್ರೀಲಂಕಾ ವಿರುದ್ಧದ ಎರಡನೇ ಟಿ 20 ಯಲ್ಲಿ ಪಂದ್ಯದ ಫೀಲ್ಡಿಂಗ್ ವೇಳೆ ಭುಜಕ್ಕೆ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ನವದೀಪ್ ಸೈನಿ ಅವರ ಆರೋಗ್ಯದ ಬಗ್ಗೆ ಬಿಸಿಸಿಐಯ ವೈದ್ಯಕೀಯ ತಂಡ ಕಾಳಜಿ ವಹಿಸಿದೆ ಎಂದು ಭಾರತದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಒಂದು ಓವರ್ ಕೂಡ ಬೌಲಿಂಗ್ ಮಾಡದೇ ಸೈನಿ ಮೈದಾನದಿಂದ ಹೊರನಡೆದಿದ್ದರು. ಎಕ್ಸ್ಟ್ರಾ ಕವರ್ನಲ್ಲಿ ಫೀಲ್ಟಿಂಗ್ ಮಾಡುವಾಗ ಅವರ ಭುಜಕ್ಕೆ ಗಾಯವಾಗಿತ್ತು.
ಓದಿ : ಧನಂ'ಜಯ' ಆಟ: ರೋಚಕ ಹೋರಾಟದಲ್ಲಿ ಲಂಕಾಗೆ ಮಣಿದ ಭಾರತ
ಆಲ್ - ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಕೋವಿಡ್ ಪಾಟಿಸಿವ್ ದೃಢಪಟ್ಟಿರುವುದರಿಂದ ಟೀಂ ಇಂಡಿಯಾದ ಎಂಟು ಮಂದಿ ಆಟಗಾರರು ಐಸೋಲೇಷನ್ನಲ್ಲಿ ಇದ್ದಾರೆ. ಹಾಗಾಗಿ, ಬುಧವಾರ ನಡೆದ ಎರಡನೇ ಟಿ -20 ಪಂದ್ಯದಲ್ಲಿ ಭಾರತ ತಂಡವು ನಾಲ್ಕು ವಿಕೆಟ್ಗಳ ಸೋಲು ಅನುಭವಿಸಿತು.