ETV Bharat / sports

ವಿಲ್ಲೋ ಬದಲು ಬಿದಿರಿನಿಂದ ಬ್ಯಾಟ್​ ತಯಾರಿಸುವ ಯೋಜನೆ ಎಂಸಿಸಿಯಿಂದ ತಿರಸ್ಕೃತ

ಎರಡು ದಿನಗಳ ಹಿಂದೆ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಸಂಶೋಧಕರಾದ ಡ್ಯಾರ್ಶಿಲ್ ಶಾ ಮತ್ತು ಬೆನ್ ಟಿಂಕ್ಲರ್-ಡೇವಿಸ್ ಬಿದಿರಿನಿಂದ ಕ್ರಿಕೆಟ್​ ಬ್ಯಾಟ್ ತಯಾರಿಸುವುದು ತುಂಬಾ ಕಡಿಮೆ ಖರ್ಚು ಮತ್ತು ಹೆಚ್ಚು ಬಲಿಷ್ಠವಾಗಿರಲಿದೆ. ಮರಗಳು ಸಹಾ ತುಂಬಾ ಹೇರಳವಾಗಿ ಸಿಗಲಿವೆ ಎಂದು ಲೇಖನವೊಂದರಲ್ಲಿ ಉಲ್ಲೇಖಿಸಿದ್ದರು. ಇದೀಗ ಅವರ ಆಲೋಚನೆಯನ್ನು ಎಂಸಿಸಿ ಆರಂಭದಲ್ಲೇ ಮೊಟಕುಗೊಳಿಸಿದೆ.

ಮೇರಿಲೆಬೋನ್ ಕ್ರಿಕೆಟ್ ಕ್ಲಬ್
ಮೇರಿಲೆಬೋನ್ ಕ್ರಿಕೆಟ್ ಕ್ಲಬ್
author img

By

Published : May 11, 2021, 6:28 PM IST

ಲಂಡನ್: ವಿಲ್ಲೋ ಮರದ ಬದಲಾಗಿ ಬಿದಿರಿನಿಂದ ಬ್ಯಾಟ್ ತಯಾರಿಸುವ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಸಂಶೋಧಕರ ಆಲೋಚನೆಯನ್ನು ಎಂಸಿಸಿ(ಮೇರಿಲೆಬೋನ್ ಕ್ರಿಕೆಟ್ ಕ್ಲಬ್) ತಿರಸ್ಕರಿಸಿದೆ. ಪ್ರಸ್ತುತ ಗವರ್ನಿಂಗ್ ಕೌನ್ಸಿಲ್​ನ ನಿಯಮಗಳ ಪ್ರಕಾರ ಬಿದಿರಿನಿಂದ ಬ್ಯಾಟ್ ತಯಾರಿಸುವುದು ಕಾನೂನು ಬಾಹಿರ ಎಂದು ತಿಳಿಸಿದೆ.

ಎರಡು ದಿನಗಳ ಹಿಂದೆ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಸಂಶೋಧಕರಾದ ಡ್ಯಾರ್ಶಿಲ್ ಶಾ ಮತ್ತು ಬೆನ್ ಟಿಂಕ್ಲರ್-ಡೇವಿಸ್ ಬಿದಿರಿನಿಂದ ಕ್ರಿಕೆಟ್​ ಬ್ಯಾಟ್ ತಯಾರಿಸುವುದು ತುಂಬಾ ಕಡಿಮೆ ಖರ್ಚು ಮತ್ತು ಹೆಚ್ಚು ಬಲಿಷ್ಠವಾಗಿರಲಿದೆ. ಮರಗಳು ಸಹಾ ತುಂಬಾ ಹೇರಳವಾಗಿ ಸಿಗಲಿವೆ ಎಂದು ಲೇಖನವೊಂದರಲ್ಲಿ ಉಲ್ಲೇಖಿಸಿದ್ದರು. ಇದೀಗ ಅವರ ಆಲೋಚನೆಯನ್ನು ಎಂಸಿಸಿ ಆರಂಭದಲ್ಲೇ ಮೊಟಕುಗೊಳಿಸಿದೆ.

"ಪ್ರಸ್ತುತ ಕ್ರಿಕೆಟ್​ ಕಾನೂನಿನ 5.3.2ರ ಪ್ರಕಾರ ಬ್ಯಾಟ್‌ನ ಬ್ಲೇಡ್ ಮರದಿಂದ ತಯಾರಾಗಿರಬೇಕು. ಆದ್ದರಿಂದ ಬಿದಿರನ್ನು (ಹುಲ್ಲಿನ ಜಾತಿಗೆ ಸೇರಿರುವ) ವಿಲ್ಲೋಗೆ ವಾಸ್ತವಿಕ ಪರ್ಯಾಯವೆಂದು ಪರಿಗಣಿಸಲು ಕಾನೂನಿನ ಬದಲಾವಣೆಯ ಅಗತ್ಯವಿರುತ್ತದೆ" ಎಂದು ಎಂಸಿಸಿ ತಿಳಿಸಿದೆ.

ಬಿದಿರಿನ ಬ್ಯಾಟ್‌ಗಳನ್ನು ತಯಾರಿಸುವುದನ್ನು ತಿರಸ್ಕರಿಸಿರುವ ಎಂಸಿಸಿ, ಕ್ರಿಕೆಟ್‌ ಕಾನೂನುಗಳ ರಕ್ಷಕರ ಉಪ ಸಭೆಯಲ್ಲಿ ಈ ವಿಚಾರವನ್ನು ಗಮನಕ್ಕೆ ತಂದು ಚರ್ಚಿಸುವುದಾಗಿ ಎಂಸಿಸಿ ಹೇಳಿದೆ.

ಇದನ್ನು ಓದಿ:ವಿಲ್ಲೋ ಮರದ ಬದಲು ಬಿದಿರಿನಲ್ಲಿ ಕ್ರಿಕೆಟ್​ ಬ್ಯಾಟ್ ತಯಾರಿಸುವುದು ತುಂಬಾ ಅಗ್ಗ: ಯುಕೆ ಸಂಶೋಧಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.