ETV Bharat / sports

2027ರ ವಿಶ್ವಕಪ್​ ನಂತರ ದ್ವಿಪಕ್ಷೀಯ ಏಕದಿನ ಕ್ರಿಕೆಟ್‌ ಸರಣಿ ಕಡಿಮೆ ಮಾಡಿ: ಎಂಸಿಸಿ ಸಲಹೆ

author img

By

Published : Jul 12, 2023, 12:58 PM IST

ಕ್ರಿಕೆಟ್​ ಗುಣಮಟ್ಟ ಕಾಪಾಡಿಕೊಳ್ಳುವ ಸಲುವಾಗಿ ಟೆಸ್ಟ್​ ಕ್ರಿಕೆಟ್​ಗೆ ಹೆಚ್ಚು ಮಹತ್ವ ನೀಡಬೇಕು ಎಂದು ಸಲಹೆ ನೀಡಿರುವ ಎಂಸಿಸಿ, ಟಿ20 ಲೀಗ್​ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಸಲಹೆ ನೀಡಿದೆ.

2027ರ ವಿಶ್ವಕಪ್​ ನಂತರ ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಕಡಿಮೆ ಮಾಡಿ- ಎಂಸಿಸಿ ಸಲಹೆ

ಲಂಡನ್: ಕ್ರಿಕೆಟ್ ಲೀಗ್​ಗಳು ಮತ್ತು ಏಕದಿನ ಸರಣಿಗಳು ಟೆಸ್ಟ್​​ ಪಂದ್ಯವನ್ನು ಮರೆಮಾಚುವಂತೆ ಮಾಡಿವೆ ಎಂದರೆ ತಪ್ಪಾಗದು. ಈಗ ಕ್ರಿಕೆಟ್​ ತಂಡವೊಂದು ಅಂತಾರಾಷ್ಟ್ರೀಯ ​ಪ್ರವಾಸ ಮಾಡುವಾಗ ಒಂದು ಅಥವಾ ಎರಡು ಟೆಸ್ಟ್​ಗಳನ್ನು ಮಾತ್ರ ದ್ವಿಪಕ್ಷೀಯ ಸರಣಿಯಲ್ಲಿ ಆಡುತ್ತದೆ. ಆದರೆ ಏಕದಿನ ಮತ್ತು ಟಿ20 ಪಂದ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲಾಗುತ್ತದೆ. ಇದರಿಂದ ಟೆಸ್ಟ್​ ಕ್ವಾಲಿಟಿ ಕಳೆದುಕೊಳ್ಳುತ್ತಿದೆ ಎಂಬ ವಾದ ಕೇಳಿ ಬಂದು ಕೆಲವು ವರ್ಷಗಳೇ ಆಯಿತು.

ಮಾಜಿ ಆಟಗಾರರು ಈ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಈಗ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ -MCC) ಈ ಬಗ್ಗೆ ಧ್ವನಿ ಎತ್ತಿದ್ದು, 2027ರ ಐಸಿಸಿ ಕ್ರಿಕೆಟ್ ವಿಶ್ವಕಪ್ ನಂತರ ಪುರುಷರ ದ್ವಿಪಕ್ಷೀಯ ಏಕದಿನ ಕ್ರಿಕೆಟ್ ಸರಣಿಯನ್ನು ಸೀಮಿತಗೊಳಿಸಲು ಸಲಹೆ ನೀಡಿದೆ. ಅಲ್ಲದೇ ಈಗಾಗಲೇ 2027ರ ವರೆಗಿನ ಕ್ರಿಕೆಟ್​ ಕ್ಯಾಲೆಂಡರ್​​ ಭರ್ತಿ ಆಗಿರುವ ಬಗ್ಗೆಯೂ ಚಿಂತಿಸಿದೆ.

ಎಂಸಿಸಿಯ ವಿಶ್ವ ಕ್ರಿಕೆಟ್ ಸಮಿತಿಯು ಲಾರ್ಡ್ಸ್‌ನಲ್ಲಿ ಎರಡನೇ ಆಶಸ್ ಟೆಸ್ಟ್‌ನ ಸಮಯದಲ್ಲಿ ನಡೆಸಿದ ಸಭೆಯಲ್ಲಿ ಪ್ರಪಂಚಾದ್ಯಂತ ಹೆಚ್ಚುತ್ತಿರುವ ಫ್ರಾಂಚೈಸಿ ಮಟ್ಟದ ಟಿ20 ಕ್ರಿಕೆಟ್ ವೇಗವಾಗಿ ಬೆಳೆಯುತ್ತಿರುವ ಬಗ್ಗೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿದೆ.

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಗ್ಯಾಟಿಂಗ್ ನೇತೃತ್ವದ 13 ಸದಸ್ಯರ ಸಮಿತಿ, "ಏಕದಿನ ಕ್ರಿಕೆಟ್​ನ ಗುಣಮಟ್ಟವನ್ನು ಹೆಚ್ಚಿಸಲು ಪ್ರತಿ ವಿಶ್ವಕಪ್‌ಗೆ ಹಿಂದಿನ ಒಂದು ವರ್ಷವನ್ನು ಹೊರತುಪಡಿಸಿ, ದ್ವಿಪಕ್ಷೀಯ ಏಕದಿನ ಸರಣಿಗಳನ್ನು ತೆಗೆದುಹಾಕಬೇಕು. ಜಾಗತಿಕ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಹೆಚ್ಚು ಐಸಿಸಿ ಪಂದ್ಯಗಳಿಗೆ ಅವಕಾಶ ಸಿಗಲಿದೆ. ಹಾಗೆಯೇ ಟೆಸ್ಟ್​ಗೆ ಒತ್ತು ಕೊಡಲಾಗುತ್ತದೆ" ಎಂದು ಹೇಳಿದೆ.

ಐಸಿಸಿ ಮತ್ತು ಅನೇಕ ರಾಷ್ಟ್ರಗಳನ್ನು ಟಿ20 ಲೀಗ್​ಗಳು ಬಾಧಿಸುತ್ತಿದೆ. ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್ ಅವರು ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್​ಸಿ-MLC) ನಲ್ಲಿ ಆಡಲು ಅಂತರಾಷ್ಟ್ರೀಯ ತಂಡದ ಒಂದು ಭಾಗದ ಒಪ್ಪಂದವನ್ನೇ ಬಿಟ್ಟಿದ್ದಾರೆ. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಕಳೆದ ವರ್ಷ ತಮ್ಮ ಕೇಂದ್ರ ಒಪ್ಪಂದವನ್ನು ತ್ಯಜಿಸಿ ವಿಶ್ವಾದ್ಯಂತ ಫ್ರಾಂಚೈಸ್ ಕ್ರಿಕೆಟ್ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ವೆಸ್ಟ್​ ಇಂಡೀಸ್​ ಕ್ರಿಕೆಟ್​ ಸಂಸ್ಥೆ ಈ ಸಮಸ್ಯೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಸ್ಟಾರ್​​ ಆಟಗಾರರ ಕೊರತೆ ಎದುರಿಸುತ್ತದೆ.

ಇಂಡಿಯನ್​ ಪ್ರೀಮಿಯರ್​ ​ಲೀಗ್​ನಲ್ಲಿ ಈಗ 10 ತಂಡಗಳಾಗಿದ್ದು ವರ್ಷದ ಎರಡು ತಿಂಗಳು ಈ ಲೀಗ್ ಒಂದರಲ್ಲೇ ವಿಶ್ವ ಕ್ರಿಕೆಟ್ ಕೇಂದ್ರೀಕೃತವಾಗಿರುತ್ತದೆ. ಅಲ್ಲದೇ ಪ್ರಾಂಚೈಸಿಗಳು ಇತರ ದೇಶದ ಲೀಗ್​ಗಳಲ್ಲೂ ತಂಡವನ್ನು ಖರೀದಿಸಿದ್ದು ಆಟಗಾರರಿಗೆ ವರ್ಷವಿಡೀ ಒಂದೇ ತಂಡದಲ್ಲಿ ಬೇರೆ ಬೇರೆ ಲೀಗ್​ಗಳನ್ನು ಆಡುವ ಪರಿಸ್ಥಿತಿ ಇದೆ. ಉದಾಹರಣೆಗೆ, ಮುಂಬೈ ಇಂಡಿಯನ್ಸ್ ದಕ್ಷಿಣ ಆಫ್ರಿಕಾದಲ್ಲಿ SA20 ಲೀಗ್‌ನಲ್ಲಿ MI ಕೇಪ್ ಟೌನ್ ಅನ್ನು ಖರೀದಿಸಿದೆ ಮತ್ತು MLC ನಲ್ಲಿ MI ನ್ಯೂಯಾರ್ಕ್ ಸಹ ಹೊಂದಿದೆ.

ಕ್ರಿಕೆಟ್ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಮೇ ತಿಂಗಳಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಅದರಲ್ಲಿ, ಕಾಲಕ್ಕೆ ತಕ್ಕಂತೆ "ಅಂತಾರಾಷ್ಟ್ರೀಯ ಕ್ರಿಕೆಟ್ ಟಿ20 ಫ್ರಾಂಚೈಸಿ ಕ್ರಿಕೆಟ್‌ನೊಂದಿಗೆ ಸಹಬಾಳ್ವೆ ನಡೆಸಲು ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ" ಎಂದಿದ್ದರು.

ಟಿ20 ಮಾದರಿಯ ಕ್ರಿಕೆಟ್​ ಲಾಭದಾಯಕವಾಗಿರುವ ಹಿನ್ನೆಲೆಯಲ್ಲಿ ನಷ್ಟಕ್ಕೆ ಕಾರಣವಾಗುವ ಟೆಸ್ಟ್ ಆಡಿಸಲು ದೇಶಗಳು ಹಿಂಜರಿಯುತ್ತವೆ. 2017ರಲ್ಲಿ ಜಿಂಬಾಬ್ವೆ ಹಣಕಾಸಿಕ ಕೊರತೆಯ ಕಾರಣಕ್ಕೆ ಟೆಸ್ಟ್​ ಪ್ರವಾಸಕ್ಕೆ ಒಪ್ಪಿಕೊಂಡಿತೇ ಹೊರತು ದೇಶದಲ್ಲಿ ಆಯೋಜಿಸುವುದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದಕ್ಕಾಗಿ ಈ ಮೊದಲೇ ಎಂಸಿಸಿ "ಟೆಸ್ಟ್​ ಫಂಡ್​" ಮಾಡಬೇಕು ಎಂದು ಐಸಿಸಿಗೆ ಸಲಹೆ ನೀಡಿತ್ತು. 2014ರಲ್ಲಿ ಈ ಸಲಹೆಯಂತೆ ಬಿಗ್​ ತ್ರಿ ಮಂಡಳಿಗಳಾದ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಕ್ರೀಡೆಯ ಆಡಳಿತಾತ್ಮಕ ನಿಯಂತ್ರಣವನ್ನು ತೆಗೆದುಕೊಂಡಾಗ ಐಸಿಸಿ ಟೆಸ್ಟ್ ನಿಧಿಯನ್ನು ಸ್ಥಾಪಿಸಿತು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ.

ಗ್ಯಾಟಿಂಗ್ ಅವರು, "ಹಲವು ರೀತಿಯಲ್ಲಿ ಕ್ರಿಕೆಟ್ ಬೆಳೆಯುತ್ತಿದೆ. ಮೇಲ್ನೋಟಕ್ಕೆ ಆರ್ಥಿಕವಾಗಿ ಪ್ರಬಲವಾಗಿದೆ ಎಂದು ತೋರುತ್ತದೆ. ಆದರೆ ಜಾಗತಿಕ ಆಟವನ್ನು ಮರುಹೊಂದಿಸಲು ಇದು ಸಮಯವಾಗಿದೆ. ಆಗಾಗ್ಗೆ, ಸದಸ್ಯ ರಾಷ್ಟ್ರಗಳು ಟೆಸ್ಟ್​ ಕ್ರಿಕೆಟ್​ಗೆ ಹೆಚ್ಚಿನ ಮಹತ್ವವನ್ನು ನೀಡಬೇಕು" ಎಂದಿದ್ದಾರೆ. ಇದೇ ವೇಳೆ ಸಮಿತಿ ವಿಶ್ವ ಕ್ರಿಕೆಟ್ ಸಮಿತಿಯು ಮಹಿಳಾ ಕ್ರಿಕೆಟ್‌ಗಾಗಿ ಗಣನೀಯ ಮತ್ತು ರಿಂಗ್‌ಫೆನ್ಸ್ಡ್ ಫಂಡ್​​ ಸ್ಥಾಪಿಸಲು ಸಲಹೆ ನೀಡಿದೆ.

ಇದನ್ನೂ ಓದಿ: Wimbledon 2023: ವಿಶ್ವ ನಂಬರ್​ 1 ಆಟಗಾರ್ತಿ ಇಗಾ ಸ್ವಿಯಾಟೆಕ್ ಮಣಿಸಿದ ಎಲಿನಾ ಸ್ವಿಟೋಲಿನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.