ETV Bharat / sports

ಮಯಾಂಕ್-ರಾಹುಲ್ ಅಬ್ಬರ: ಡೆಲ್ಲಿ ಕ್ಯಾಪಿಟಲ್ಸ್​ಗೆ 196 ರನ್​ಗಳ ಟಾರ್ಗೆಟ್ ನೀಡಿದ ಪಂಜಾಬ್ - ಕೆಎಲ್ ರಾಹುಲ್ . KL Rahul

ರಾಹುಲ್ 61 ಮತ್ತು ಮಯಾಂಕ್​ ಅಗರ್​ವಾಲ್​ 69 ರನ್​ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್​ಗಳಿಸಿದೆ.

ದೆಹಲಿ ಕ್ಯಾಪಿಟಲ್ vs ಪಂಜಾಬ್ ಕಿಂಗ್ಸ್
ದೆಹಲಿ ಕ್ಯಾಪಿಟಲ್ vs ಪಂಜಾಬ್ ಕಿಂಗ್ಸ್
author img

By

Published : Apr 18, 2021, 9:28 PM IST

ಮುಂಬೈ: ಮಯಾಂಕ್ ಅಗರ್ವಾಲ್ ಮತ್ತು ನಾಯಕ ಕೆಎಲ್ ರಾಹುಲ್​ರ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ ರನ್​ಗಳಿಸಿದ್ದು, ಡೆಲ್ಲಿ ತಂಡಕ್ಕೆ ರನ್​ಗಳ ಟಾರ್ಗೆಟ್ ನೀಡಿದೆ.

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್​ ತಂಡಕ್ಕೆ ರಾಹುಲ್ ಮತ್ತು ಮಯಾಂಕ್ ಮೊದಲ ವಿಕೆಟ್​ಗೆ 122 ರನ್​ಗಳ ಜೊತೆಯಾಟ ನೀಡಿದರು. ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಮಯಾಂಕ್ ಅಗರ್​ವಾಲ್ 36 ಎಸೆತಗಳಲ್ಲಿ 4 ಸಿಕ್ಸರ್​ ಮತ್ತು 7 ಬೌಂಡರಿ ಸಹಿತ 69 ರನ್​ಗಳಿಸಿ ಮೆರಿವಾಲಗೆ ವಿಕೆಟ್​ ಒಪ್ಪಿಸಿದರು.

ಇವರ ಬೆನ್ನಲ್ಲೇ ರಾಹುಲ್​ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 61 ರನ್​ಗಳಿಸಿ ರಬಾಡಗೆ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ಅಬ್ಬರಿಸಿದ ದೀಪಕ್ ಹೂಡ 22, ಶಾರುಖ್​ ಖಾನ್​ 15 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕ್ರಿಸ್​ ಗೇಲ್ 11 ಮತ್ತು ಪೂರನ್ 9 ರನ್​ಗಳಿಗೆ ವಿಕೆಟ್​ ಒಪ್ಪಿಸಿ ಇಂದೂ ಕೂಡ ವಿಫಲರಾದರು.

ಕ್ಯಾಪಿಟಲ್ಸ್ ಪರ ಕ್ರಿಸ್ ವೋಕ್ಸ್​, ರಬಾಡ, ಆವೇಶ್ ಖಾನ್​ ಹಾಗೂ ಮೆರಿವಾಲ ತಲಾ ಒಂದು ವಿಕೆಟ್​ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.