ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನ ಅದ್ಭುತ ಆರಂಭ ಪಡೆದುಕೊಂಡಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಭಾರತೀಯ ಜೋಡಿ 11 ವರ್ಷಗಳ ಬಳಿಕ ಹರಿಣಗಳ ನಾಡಿನಲ್ಲಿ ಮೊದಲ ವಿಕೆಟ್ಗೆ ಶತಕದ ಜೊತೆಯಾಟ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದಿದ್ದ ಕರ್ನಾಟಕ ಜೋಡಿ ಬರೋಬ್ಬರಿ 40.2 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿತು. ಅಲ್ಲದೆ ಈ ಜೋಡಿ ಮೊದಲ ವಿಕೆಟ್ಗೆ 117 ರನ್ಗಳನ್ನು ಸೇರಿಸುವ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕದ ಆರಂಭ ಒದಗಿಸಿದ ಭಾರತದ 3ನೇ ಜೋಡಿ ಎನಿಸಿಕೊಂಡಿತು.
ಈ ಪಂದ್ಯಕ್ಕೂ ಮೊದಲು ಭಾರತೀಯ ಆರಂಭಿಕರು 2 ಬಾರಿ ಶತಕದ ಜೊತೆಯಾಟ ನಡೆಸಿದ್ದರು. 2007ರಲ್ಲಿ ವಾಸಿಮ್ ಜಾಫರ್ ಮತ್ತು ದಿನೇಶ್ ಕಾರ್ತಿಕ್ 153 ರನ್ ಮತ್ತು 2010ರಲ್ಲಿ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ 137 ರನ್ಗಳ ಜೊತೆಯಾಟ ನಡೆಸಿದ್ದರು. ಇದೀಗ ಆ ಪಟ್ಟಿಗೆ ಮಯಾಂಕ್ ಅಗರ್ವಾಲ್ ಮತ್ತು ರಾಹುಲ್ ಕೂಡ ಸೇರಿಕೊಂಡಿದ್ದಾರೆ.
ಮಯಾಂಕ್ ಅಗರ್ವಾಲ್ 60 ರನ್ಗಳಿಸಿ ಔಟಾದರೆ ಕೆಎಲ್ ರಾಹುಲ್ 122 ರನ್ಗಳಿಸಿ ಅಜೇಯರಾಗಿ 2ನೇ ದಿನಕ್ಕೆ ರಹಾನೆ(40) ಜೊತೆಗೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಭಾರತ ತಂಡ ಮೊದಲ ದಿನ 3 ವಿಕೆಟ್ ಕಳೆದುಕೊಂಡು 272 ರನ್ಗಳಿಸಿದೆ.
ಇದನ್ನೂ ಓದಿ:Ind vs SA Test: ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಕನ್ನಡಿಗ ರಾಹುಲ್