ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟರ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ಟೆಸ್ಟ್ ತಂಡದ ಖಾಯಂ ಆರಂಭಿಕ ಬ್ಯಾಟರ್ ಅಗಿರುವ ಮಯಾಂಕ್ ಅಗರ್ವಾಲ್ ಮತ್ತು ಯುವ ವೇಗಿ ಅರ್ಶದೀಪ್ ಸಿಂಗ್ ಅವರನ್ನು ಮಾತ್ರಾ ಪಂಜಾಬ್ ಕಿಂಗ್ಸ್ ಮೆಗಾ ಹರಾಜಿಗೂ ಮುನ್ನ ರಿಟೈನ್ ಮಾಡಿಕೊಂಡಿತ್ತು. ಇದೀಗ ಕನ್ನಡಿಗನನ್ನೇ ನಾಯಕನನ್ನಾಗಿ ಮಾಡಲು ಫ್ರಾಂಚೈಸಿ ತೀರ್ಮಾನಿಸಿದೆ. ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎನ್ನಲಾಗಿದೆ.
ಮಯಾಂಕ್ ಅಗರ್ವಾಲ್ ಆ ತಂಡದ( ಪಂಜಾಬ್ ಕಿಂಗ್ಸ್) ನಾಯಕನಾಗುವ ಎಲ್ಲ ಸಾಧ್ಯತೆಯಿದೆ. ಈ ವಾರದ ಅಂತ್ಯದಲ್ಲಿ ಘೋಷಣೆ ಮಾಡಬಹುದು ಎಂದು ಐಪಿಎಲ್ ಮೂಲ ಪಿಟಿಐಗೆ ಮಾಹಿತಿ ನೀಡಿದೆ.
ಹೆಚ್ಚು ಹಣದೊಂದಿಗೆ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದ ಪಂಜಾಬ್ ಅತ್ಯುತ್ತಮ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಲಿಯಾಮ್ ಲಿವಿಂಗ್ಸ್ಟೋನ್, ಕಗಿಸೊ ರಬಾಡ, ಒಡಿಯನ್ ಸ್ಮಿತ್ ಹಾಗೂ ಎಡಗೈ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ಮತ್ತು ತಮಿಳು ನಾಡಿನ ಸ್ಫೋಟಕ ಬ್ಯಾಟರ್ ಶಾರುಖ್ ಖಾನ್ರನ್ನು ತಂಡಕ್ಕೆ ಬರಮಾಡಿಕೊಂಡಿದೆ.
ಇದನ್ನೂ ಓದಿ:Ranji Trophy: ಜಮ್ಮು ಕಾಶ್ಮೀರದ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಕರುಣ್ ನಾಯರ್
ನಾಯಕ ಸ್ಥಾನಕ್ಕೆ ಭಾರತ ತಂಡಕ್ಕೆ ಆಡಿದ ಅನುಭವ ಹೊಂದಿರುವ ಶಿಖರ್ ಧವನ್ ಹೆಸರು ಕೂಡ ಕೇಳಿ ಬಂದಿತ್ತಾದರೂ, ಕೆಎಲ್ ರಾಹುಲ್ ತಂಡವನ್ನು ಬಿಟ್ಟು ಹೊರಹೋದಾಗಿನಿಂದಲೂ ಪಂಜಾಬ್ ತಂಡ ಮಯಾಂಕ್ರ ಮೇಲೆ ಹೆಚ್ಚಿನ ಒಲವನ್ನು ತೋರಿದೆ ಎಂದು ಮೂಲ ತಿಳಿಸಿದೆ.
ಅಗರ್ವಾಲ್ ಮತ್ತು ರಾಹುಲ್ ಕಳೆದ ಎರಡು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಅತ್ಯಂತ ಸಮೃದ್ಧ ಆರಂಭಿಕ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ರಾಹುಲ್ ಗಾಯಗೊಂಡಾಗ ಒಂದೆರಡು ಪಂದ್ಯಗಳಲ್ಲಿ ಮಯಾಂಕ್ ತಂಡವನ್ನು ಮುನ್ನಡೆಸಿದ್ದಾರೆ. 31 ವರ್ಷದ ಕರ್ನಾಟಕ ಬ್ಯಾಟರ್ 2011ರ ಐಪಿಎಲ್ನಿಂದ ಅವರು 100 ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ:11 ವರ್ಷದ ಬಾಲಕನ ಚಿಕಿತ್ಸೆಗೆ 31 ಲಕ್ಷ ರೂ. ದೇಣಿಗೆ ನೀಡಿ ಹೃದಯವಂತಿಕೆ ಮೆರೆದ ಕೆ ಎಲ್ ರಾಹುಲ್