ETV Bharat / sports

ಐಪಿಎಲ್ 2021: ರಾಯಲ್ಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಸಿಎಸ್​ಕೆ

ಐಪಿಎಲ್​ನಲ್ಲಿ ಎರಡು ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್​ಕೆ 14 ಮತ್ತು ರಾಜಸ್ಥಾನ ರಾಯಲ್ಸ್​ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ, 2020ರ ಐಪಿಎಲ್​ನ ಎರಡೂ ಲೀಗ್ ಪಂದ್ಯಗಳಲ್ಲಿ ರಾಜಸ್ಥಾನ​ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿತ್ತು.

ರಾಯಲ್ಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಸಿಎಸ್​ಕೆ

author img

By

Published : Apr 19, 2021, 3:28 PM IST

ಮುಂಬೈ: ಮೊದಲ ಪಂದ್ಯದ ಸೋಲಿನ ನಂತರ ಅದ್ಭುತವಾಗಿ ತಿರುಗಿಬಿದ್ದು ಗೆಲುವು ಕಂಡಿರುವ ಚೆನ್ನೈ ಸೂಪರ್​ ಕಿಂಗ್ಸ್​ ಸೋಮವಾರ ತನ್ನ 3ನೇ ಪಂದ್ಯದಲ್ಲಿ ಯುವ ಬಳಗವಾಗಿರುವ ರಾಜಸ್ಥಾನ್​ ರಾಯಲ್ಸ್ ತಂಡವನ್ನು ಎದುರಿಸಲಿದೆ. ಕಳೆದ ಐಪಿಎಲ್​ನಲ್ಲಿ ಎರಡಕ್ಕೆ ಎರಡು ಪಂದ್ಯಗಳನ್ನು ಸೋತಿದ್ದ ಸಿಎಸ್​ಕೆ, ಸಾಮ್ಸನ್​ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾತುರದಿಂದ ಕಾಯುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್​ ತನ್ನ ಮೊದಲ ಪಂದ್ಯದಲ್ಲಿ 188 ರನ್​ಗಳಿಸಿಯೂ ಡೆಲ್ಲಿ ವಿರುದ್ಧ ಸೋಲು ಕಂಡಿತ್ತು. ಆದರೆ, ನಂತರದ ಪಂದ್ಯದಲ್ಲಿ ಪಂಜಾಬ್ ತಂಡವನ್ನು ವಾಂಖೆಡೆಯಂತಹ ಬ್ಯಾಟಿಂಗ್ ಸಹಕಾರಿ ಮೈದಾನದಲ್ಲಿ ಕೇವಲ 106ರನ್​ಗಳಿಗೆ ಕಟ್ಟಿಹಾಕಿ, ಸುಲಭ ಜಯಸಾಧಿಸಿತ್ತು. ಸಿಎಸ್​ಕೆಗೆ ದೀಪಕ್​ ಚಹರ್​ ಫಾರ್ಮ್​​ಗೆ ಮರಳಿರುವುದು ಬೌಲಿಂಗ್​ ವಿಭಾಗವನ್ನು ಬಲಿಷ್ಠಗೊಳಿಸಿದೆ. ಅವರು ಕಳೆದ ಪಂದ್ಯದಲ್ಲಿ ಕೇವಲ 17 ರನ್​ ನೀಡಿ 4 ವಿಕೆಟ್​ ಪಡೆದು ಮಿಂಚಿದ್ದರು.

ಇನ್ನು ಮೊಯಿನ್ ಅಲಿ ಕಳೆದ ಎರಡು ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ರೈನಾ, ಪ್ಲೆಸಿಸ್​ ಉತ್ತಮ ಟಚ್​ನಲ್ಲಿದ್ದಾರೆ. ಆದರೆ, ಆರಂಭಿಕ ರುತುರಾಜ್ ಗಾಯಕ್ವಾಡ್​ ಮಾತ್ರ ಸತತ 2 ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿರುವುದು ಸಿಎಸ್​ಕೆಗೆ ಹಿನ್ನಡೆಯುನ್ನಂಟು ಮಾಡಿದೆ. ಇಂದಿನ ಪಂದ್ಯದಲ್ಲಿ ಅವರ ಬದಲು ರಾಬಿನ್ ಉತ್ತಪ್ಪ ಕಣಕ್ಕಿಳಿಯುವ ಸಾಧ್ಯತೆ ಕೂಡ ಇದೆ.

ಇನ್ನು ರಾಜಸ್ಥಾನ ರಾಯಲ್ಸ್​ ಮೊದಲ ಪಂದ್ಯದಲ್ಲಿ ಗೆಲ್ಲುವ ಪಂದ್ಯವನ್ನು ಕೂದಲೆಳೆಯಂತರದಿಂದ ತಪ್ಪಿಸಿಕೊಂಡಿತ್ತು. ಆದರೆ, 2ನೇ ಪಂದ್ಯದಲ್ಲಿ ಮೋರಿಸ್ ಮತ್ತು ಮಿಲ್ಲರ್​ ಅವರ ಜವಾಬ್ದಾರಿಯುತ ಪ್ರದರ್ಶನದ ನೆರವಿನಿಂದ ಡೆಲ್ಲಿ ವಿರುದ್ಧ ಸೋಲುವ ಪಂದ್ಯವನ್ನು ಗೆದ್ದು ಖಾತೆ ತೆರೆದಿದೆ. ಇದೀಗ ಸಿಎಸ್​ಕೆ ವಿರುದ್ಧ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ.

ಮುಖಾಮುಖಿ

ಐಪಿಎಲ್​ನಲ್ಲಿ ಎರಡು ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್​ಕೆ 14 ಮತ್ತು ರಾಜಸ್ಥಾನ ರಾಯಲ್ಸ್​ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ, 2020ರ ಐಪಿಎಲ್​ನ ಎರಡೂ ಲೀಗ್ ಪಂದ್ಯಗಳಲ್ಲಿ ರಾಜಸ್ಥಾನ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿತ್ತು.

ಸಿಎಸ್​ಕೆ ಸಂಭವನೀಯ ತಂಡ : ರುತುರಾಜ್ ಗಾಯಕವಾಡ್ / ರಾಬಿನ್ ಉತ್ತಪ್ಪ, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಸ್ಯಾಮ್ ಕರ್ರನ್, ಎಂ.ಎಸ್. ಧೋನಿ(ನಾಯಕ/ವಿಕೀ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್

ರಾಜಸ್ಥಾನ್ ರಾಯಲ್ಸ್​ ಸಂಭವನೀಯ ತಂಡ: ಮನನ್ ವೊಹ್ರಾ / ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕತ್, ಚೇತನ್ ಸಕಾರಿಯಾ, ಮುಸ್ತಾಫಿಜುರ್ ರೆಹಮಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.