ಅಡಿಲೇಡ್: ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಾಬುಶೇನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಅಡಿಲೇಡ್ ಓವಲ್ನಲ್ಲಿ ನಡೆಯುತ್ತಿರುವ ಡೇ ಅಂಡ್ ನೈಟ್ ಆ್ಯಶಸ್ ಟೆಸ್ಟ್ನಲ್ಲಿ ಮೊದಲ ದಿನ 2 ವಿಕೆಟ್ ಕಳೆದುಕೊಂಡು 221 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಹಾರಿಸಿಕೊಂಡಿದ್ದ ಆಸ್ಟ್ರೇಲಿಯಾ ಕೇವಲ 4 ರನ್ಗಳಿಸುವಷ್ಟರಲ್ಲಿ ಆರಂಭಿಕ ಮಾರ್ಕಸ್ ಹ್ಯಾರಿಸ್(4) ವಿಕೆಟ್ ಕಳೆದುಕೊಂಡಿತು. ಮೊದಲ ಟೆಸ್ಟ್ನಲ್ಲಿ ವಿಶ್ರಾಂತಿ ಪಡೆದಿದ್ದ ಬ್ರಾಡ್ ಹ್ಯಾರಿಸ್ ವಿಕೆಟ್ ಪಡೆದರು.
-
That's stumps!
— ICC (@ICC) December 16, 2021 " class="align-text-top noRightClick twitterSection" data="
Tough day for England, with fifties from Warner and Labuschagne putting Australia in a good position 👏
Watch the #Ashes live on https://t.co/CPDKNxoJ9v (in select regions) 📺#AUSvENG | #WTC23 pic.twitter.com/e3f7YsHlZa
">That's stumps!
— ICC (@ICC) December 16, 2021
Tough day for England, with fifties from Warner and Labuschagne putting Australia in a good position 👏
Watch the #Ashes live on https://t.co/CPDKNxoJ9v (in select regions) 📺#AUSvENG | #WTC23 pic.twitter.com/e3f7YsHlZaThat's stumps!
— ICC (@ICC) December 16, 2021
Tough day for England, with fifties from Warner and Labuschagne putting Australia in a good position 👏
Watch the #Ashes live on https://t.co/CPDKNxoJ9v (in select regions) 📺#AUSvENG | #WTC23 pic.twitter.com/e3f7YsHlZa
ಆದರೆ, 2ನೇ ವಿಕೆಟ್ಗೆ ಒಂದಾದ ವಾರ್ನರ್ ಮತ್ತು ಮಾರ್ನಸ್ ಲಾಬುಶೇನ್ 176 ರನ್ಗಳ ಜೊತೆಯಾಟ ನೀಡಿ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದರು. ವಾರ್ನರ್ 167 ಎಸೆತಗಳಲ್ಲಿ 11 ಬೌಂಡರಿ ಸಹಿತ 95 ರನ್ಗಳಿಸಿ ಶತಕದ ಹೊಸ್ತಿಲಲ್ಲಿದ್ದಾಗ ಬೆನ್ ಸ್ಟೋಕ್ ಬೌಲಿಂಗ್ನಲ್ಲಿ ಬ್ರಾಡ್ಗೆ ಕ್ಯಾಚ್ ನೀಡಿ ಔಟಾದರು. ವಾರ್ನರ್ ಮೊದಲ ಪಂದ್ಯದಲ್ಲೂ 94 ರನ್ಗಳಿಸಿ ಔಟಾಗಿದ್ದರು.
ವಾರ್ನರ್ ವಿಕೆಟ್ ಕಳೆದುಕೊಂಡ ನಂತರ ಕ್ರೀಸ್ಗೆ ಆಗಮಿಸಿದ ನಾಯಕ ಸ್ಮಿತ್ ಮುರಿಯದ 3ನೇ ವಿಕೆಟ್ಗೆ 45 ರನ್ಗಳ ಕಾಣಿಕೆ ನೀಡಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡರು. ಲಾಬುಶೇನ್ 275 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 95 ರನ್ಗಳಿಸಿದರೆ, ಸ್ಮಿತ್ ಅಜೇಯ 18 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ 34ಕ್ಕೆ1, ಬೆನ್ ಸ್ಟೋಕ್ಸ್ 50ಕ್ಕೆ 1 ವಿಕೆಟ್ ಪಡೆದರು.
ವೇಗವಾಗಿ 2000 ರನ್
ಮಾರ್ನಸ್ ಲಾಬುಶೇನ್ 41 ರನ್ಗಳಿಸುತ್ತಿದ್ದಂತೆ ಟಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 2000 ರನ್ಗಳಿಸಿದ 4ನೇ ವಿಶ್ವದ 4ನೇ ಬ್ಯಾಟರ್ ಎನಿಸಿಕೊಂಡರು. ಲಾಬುಶೇನ್ 34ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಇವರಿಗಿಂತ ಮೊದಲು, ಡಾನ್ ಬ್ರಾಡ್ಮನ್(22), ಜಾರ್ಜ್ ಹೆಡ್ಲೀ(33) ಮೈಕ್ ಹಸ್ಸಿ(33) ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು.