ಮುಂಬೈ: ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಮಾರ್ಕ್ ಬೌಚರ್ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮುಂಬೈ ಇಂಡಿಯನ್ಸ್ ಟ್ವೀಟ್ ಮಾಡಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಸೋತ ಬೆನ್ನಲ್ಲೇ ತಾವು ಮುಂಬರುವ ಟಿ20 ವಿಶ್ವಕಪ್ ಬಳಿಕ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಯುವುದಾಗಿ ಬೌಚರ್ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.
-
Presenting आपले नवीन Head Coach - 𝐌𝐀𝐑𝐊 𝐁𝐎𝐔𝐂𝐇𝐄𝐑 💙
— Mumbai Indians (@mipaltan) September 16, 2022 " class="align-text-top noRightClick twitterSection" data="
Paltan, drop a 🙌 to welcome the 🇿🇦 legend to our #OneFamily 👏#DilKholKe #MumbaiIndians @markb46 @OfficialCSA pic.twitter.com/S6zarGJmNM
">Presenting आपले नवीन Head Coach - 𝐌𝐀𝐑𝐊 𝐁𝐎𝐔𝐂𝐇𝐄𝐑 💙
— Mumbai Indians (@mipaltan) September 16, 2022
Paltan, drop a 🙌 to welcome the 🇿🇦 legend to our #OneFamily 👏#DilKholKe #MumbaiIndians @markb46 @OfficialCSA pic.twitter.com/S6zarGJmNMPresenting आपले नवीन Head Coach - 𝐌𝐀𝐑𝐊 𝐁𝐎𝐔𝐂𝐇𝐄𝐑 💙
— Mumbai Indians (@mipaltan) September 16, 2022
Paltan, drop a 🙌 to welcome the 🇿🇦 legend to our #OneFamily 👏#DilKholKe #MumbaiIndians @markb46 @OfficialCSA pic.twitter.com/S6zarGJmNM
ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಲಂಕಾದ ಮಹೇಲಾ ಜಯವರ್ಧನೆ ಇದೀಗ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಆಗಿ ಆಯ್ಕೆಗೊಂಡಿದ್ದಾರೆ. ಹೀಗಾಗಿ, ಮುಂಬೈ ತಂಡದ ಕೋಚ್ ಹುದ್ದೆ ಖಾಲಿಯಾಗಿತ್ತು. ಈ ರೇಸ್ನಲ್ಲಿ ತಂಡದ ಬ್ಯಾಟಿಂಗ್ ಕೋಚ್ ರಾಬಿನ್ ಸಿಂಗ್ ಹೆಸರು ಕೇಳಿ ಬಂದಿತ್ತು. ಆದರೆ, ಕೊನೆಯದಾಗಿ ಮಾರ್ಕ್ ಬೌಚರ್‌ಗೆ ಫ್ರಾಂಚೈಸಿ ಮಣೆ ಹಾಕಿದೆ.
ಇದನ್ನೂ ಓದಿ: ಜಯವರ್ಧನೆ, ಜಹೀರ್ ಖಾನ್ಗೆ ಮಹತ್ವದ ಜವಾಬ್ದಾರಿ ನೀಡಿದ ಮುಂಬೈ.. ಕೋಚ್ ಸ್ಥಾನ ಯಾರಿಗೆ?
ಇದರ ಬಗ್ಗೆ ಮಾತನಾಡಿರುವ ರಿಲಯನ್ಸ್ ಜಿಯೋ ಇನ್ಫೋಕಾಮನ್ ಅಧ್ಯಕ್ಷ ಆಕಾಶ್ ಅಂಬಾನಿ, ತಂಡದ ಕೋಚ್ ಆಗಿ ಆಯ್ಕೆಯಾಗಿರುವ ಮಾರ್ಕ್ ಬೌಚರ್‌ಗೆ ಸ್ವಾಗತಿಸಲು ಸಂತೋಷವಾಗುತ್ತದೆ. ಮುಂಬೈ ತಂಡವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಲು ಅವರು ಉತ್ತಮ ವ್ಯಕ್ತಿ ಆಗಿದ್ದಾರೆಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಬೌಚರ್, ತಂಡದ ಪರ 147 ಟೆಸ್ಟ್, 295 ಏಕದಿನ ಹಾಗೂ 25 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ವಿಕೆಟ್ ಕೀಪರ್ ಆಗಿ 532 ಕ್ಯಾಚ್ ಹಿಡಿದಿದ್ದು, 555 ಸ್ಟಂಪ್ ಮಾಡಿದ್ದಾರೆ. 2019 ರಿಂದಲೂ ದಕ್ಷಿಣ ಆಫ್ರಿಕಾ ತಂಡದ ಕೋಚ್ ಆಗಿ ಇವರು ಸೇವೆ ಸಲ್ಲಿಸುತ್ತಿದ್ದು, ಇವರ ಕೋಚಿಂಗ್ ಸಾರಥ್ಯದಲ್ಲಿ ತಂಡ 11 ಟೆಸ್ಟ್, 12 ಏಕದಿನ ಹಾಘೂ 23 ಟಿ20 ಪಂದ್ಯಗಳಲ್ಲಿ ಗೆದ್ದಿದೆ. 2023ರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಮಾರ್ಕ್ ಬೌಚರ್ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ.
-
🚨 New Coach Alert 🚨
— Punjab Kings (@PunjabKingsIPL) September 16, 2022 " class="align-text-top noRightClick twitterSection" data="
IPL winner ✅
ODI World Cup winner ✅
CLT20 winner ✅
Here's wishing a very warm welcome to our new Head Coach, Trevor Bayliss. 😍
Here's looking forward to a successful partnership! 🤝#PunjabKings #SaddaPunjab #TrevorBayliss #HeadCoach pic.twitter.com/UKdKi2Lefi
">🚨 New Coach Alert 🚨
— Punjab Kings (@PunjabKingsIPL) September 16, 2022
IPL winner ✅
ODI World Cup winner ✅
CLT20 winner ✅
Here's wishing a very warm welcome to our new Head Coach, Trevor Bayliss. 😍
Here's looking forward to a successful partnership! 🤝#PunjabKings #SaddaPunjab #TrevorBayliss #HeadCoach pic.twitter.com/UKdKi2Lefi🚨 New Coach Alert 🚨
— Punjab Kings (@PunjabKingsIPL) September 16, 2022
IPL winner ✅
ODI World Cup winner ✅
CLT20 winner ✅
Here's wishing a very warm welcome to our new Head Coach, Trevor Bayliss. 😍
Here's looking forward to a successful partnership! 🤝#PunjabKings #SaddaPunjab #TrevorBayliss #HeadCoach pic.twitter.com/UKdKi2Lefi
ಪಂಜಾಬ್ ತಂಡಕ್ಕೆ ಟ್ರೆವರ್ ಬೇಲಿಸ್ ಕೋಚ್: ಇನ್ನೂ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಖ್ಯ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಅವರನ್ನ ಕೈಬಿಟ್ಟಿದ್ದು, ಆ ಸ್ಥಾನಕ್ಕೆ ಇಂಗ್ಲೆಂಡ್ ತಂಡದ ಮಾಜಿ ಕೋಚ್ ಟ್ರೆವರ್ ಬೇಲಿಸ್ ಅವರಿಗೆ ಮಣೆ ಹಾಕಿದೆ.ಈ ಹಿಂದೆ 2020ರಲ್ಲಿ ಹೈದರಾಬಾದ್ ತಂಡ ಹಾಗೂ 2012, 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನೂ ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಚಂದ್ರಕಾಂತ್ ಪಂಡಿತ್ ಹಾಗೂ ಹೈದರಾಬಾದ್ ತಂಡ ಮುಖ್ಯ ಕೋಚ್ ಆಗಿ ಬ್ರಿಯನ್ ಲಾರಾ ಅವರನ್ನ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ.