ನವದೆಹಲಿ: ಐಪಿಎಲ್ನಲ್ಲಿ ಸಿಡಿಸಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳುವ ಬಗ್ಗೆ ಒಲವು ತೋರಿದ್ದ ಎಬಿ ಡಿ ವಿಲಿಯರ್ಸ್ , ದಕ್ಷಿಣ ಆಫ್ರಿಕಾ ತಂಡದ ಪರ ಮತ್ತೆಂದು ಕಣಕ್ಕಿಳಿಯುವುದಿಲ್ಲ ಎನ್ನುವುದು ಈಗಾಗಲೇ ಬೋರ್ಡ್ ತಿಳಿಸಿದೆ. ಆದರೆ ಇದಕ್ಕೆ ಕಾರಣವೇನೆಂದು ಮುಖ್ಯ ಕೋಚ್ ಮಾರ್ಕ್ ಬೌಚರ್ ತಿಳಿಸಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಎಬಿ ಡಿ ವಿಲಿಯರ್ಸ್ ತಮ್ಮ ನಿವೃತ್ತಿ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿ, ವಿಂಡೀಸ್ ತಂಡಕ್ಕೆ ತಂಡವನ್ನು ಪ್ರಕಟಿಸಿತು.
ಎಬಿ ಡಿ ವಿಲಿಯರ್ಸ್ ಮರಳುವಿಕೆಯ ಬಗೆಗಿನ ಚರ್ಚೆ ಮುಗಿದಿದ್ದು, ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಅಂತಿಮ ಎಂದು ತಿಳಿಸಿದ್ದಾರೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿತ್ತು. ಇದೀಗ ಕೋಚ್ ಬೌಚರ್ ಪ್ರಕಾರ ವಿಲಿಯರ್ಸ್ ತಾವಾಗಿಯೇ ಮರಳುವಿಕೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದ್ದಾರೆ.
ಎಬಿ ಮರಳದಿರಲು ಕಾರಣಗಳಿವೆ, ಅದನ್ನು ನಾನು ಗೌರವಿಸುತ್ತೇನೆ. ದುರಾದೃಷ್ಟವಶಾತ್ ಅವರು ತುಂಬಾ ದೂರ ತಂಡದಲ್ಲಿ ಸಾಗಲು ಸಾಧ್ಯವಿಲ್ಲ, ಅವರು ಈಗಲೂ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ, ಒಂದು ವೇಳೆ ಅತ್ಯುತ್ತಮರಲ್ಲ(ಎಲ್ಲಾ ಮಾದರಿಯಲ್ಲಿ) ಎಂದು ಭಾವಿಸಿದರೂ, ಖಂಡಿತ ಟಿ20 ಕ್ರಿಕೆಟ್ನಲ್ಲಿ ಅವರು ಈಗಲೂ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ.
ಆದರೆ ಅವರು ವ್ಯವಸ್ಥೆಯಲ್ಲಿರುವ ಬೇರೆ ಆಟಗಾರರಿಗಿಂತ ತಮ್ಮನ್ನು ಪರಿಗಣಿಸುವುದರ ಬಗ್ಗೆ ಕಾಳಜಿವಹಿಸಿದ್ದಾರೆ. ಈ ಕಾರಣ ಅವರಿಗೆ ಸರಿ ಹೊಂದುತ್ತದೆ ಎಂದು ನಾನು ಭಾವಿಸುವುದಿಲ್ಲ, ಎಂದು ಬೌಚರ್ ತಿಳಿಸಿದ್ದಾರೆ.
ಇನ್ನು ಎಬಿ ಡಿ ವಿಲಿಯರ್ಸ್ ಮರಳುವ ಹಿಂಗಿತ ವ್ಯಕ್ತಪಡಿಸಿದ್ದು ಇದೇ ಮೊದಲೇನಲ್ಲ, ಅವರು 2019ರ ವಿಶ್ವಕಪ್ ವೇಳೆಯೂ ತಂಡದಲ್ಲಿ ಅವಕಾಶ ಸಿಕ್ಕರೆ ಆಡುವುದಾಗಿ ತಿಳಿಸಿದ್ದರು, ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅವರ ಆಶಯವನ್ನು ತಿರಸ್ಕರಿಸಿತ್ತು. ಇದೀಗ ಅವರೇ 2ನೇ ಅವಕಾಶದಲ್ಲಿ ತಂಡದ ಇತರೆ ಆಟಗಾರರ ಹಿತದೃಷ್ಟಿಯಿಂದ ಹಿಂದೆ ಸರಿದಿದ್ದಾರೆ.
ಇದನ್ನು ಓದಿ:ದ್ರಾವಿಡ್-ಗಂಗೂಲಿಯ ಆ ಜತೆಯಾಟವೇ ಜೋಸ್ ಬಟ್ಲರ್‌ಗೆ ಸ್ಫೂರ್ತಿ.. ಆಂಗ್ಲನೊಬ್ಬ ಅದ್ಭುತ ಕ್ರಿಕೆಟಿಗನಾದ ಕಥೆ..