ಮುಂಬೈ: ಕಳೆದ ಒಂದು ದಶಕದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಯಶಸ್ವಿಯಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಪ್ರಸ್ತುತ ಆವೃತ್ತಿಯಲ್ಲಿ ಸತತ 8 ಸೋಲುಗಳನ್ನು ಕಂಡು ನಿರಾಶೆಯನುಭವಿಸಿದೆ. ನಾಯಕ ರೋಹಿತ್ ಶರ್ಮಾ ಕೂಡ ಇಡೀ ತಂಡ 15ನೇ ಆವೃತ್ತಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗಿದ ಎಂದು ಒಪ್ಪಿಕೊಂಡಿದ್ದಾರೆ.
ಆದಾಗ್ಯೂ, ಪ್ರಸಿದ್ಧ ತಂಡಗಳು ಇಂತಹ ಕಠಿಣ ಪರಿಸ್ಥಿತಿಯನ್ನು ಅನುಭವಿಸಿ ಮುಂದೆ ಹೋಗಿರುತ್ತವೆ, ಈ ಸಂದರ್ಭದಲ್ಲಿ ಎಲ್ಲರೂ ಒಂದಾಗಿರಬೇಕೆಂದು ತಿಳಿಸಿದ್ದಾರೆ. ನಾವು ಪ್ರಸ್ತುತ ನಡಯುತ್ತಿರುವ ಟೂರ್ನಮೆಂಟ್ನಲ್ಲಿ ನಮ್ಮ ಉತ್ತಮ ಪ್ರದರ್ಶನ ತೋರಿಲ್ಲ. ಆದರೆ, ಈ ರೀತಿ ನಡೆಯುತ್ತಿರುತ್ತವೆ. ಹಲವು ಕ್ರೀಡಾ ದೈತ್ಯರು ಇದೇ ರೀತಿ ಕಠಿಣ ಪರಿಸ್ಥಿತಿಯನ್ನು ಎದುರಿಸಿಯೇ ಹೋಗಿರುತ್ತಾರೆ.
ಆದರೆ, ನಾನು ಈ ತಂಡವನ್ನು ಮತ್ತು ಇಲ್ಲಿ ಪರಿಸರವನ್ನು ತುಂಬಾ ಇಷ್ಟಪಡುತ್ತೇನೆ. ಇಲ್ಲಿಯವರೆಗೂ ನಮ್ಮ ತಂಡದ ಮೇಲೆ ನಂಬಿಕೆ ಮತ್ತು ಅಂತ್ಯವಿಲ್ಲದ ನಿಷ್ಠೆ ತೋರಿಸಿದ ಹಿತೈಷಿಗಳನ್ನು ಪ್ರಶಂಸಿಸಲು ಬಯಸುತ್ತೇನೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಟ್ವೀಟ್ ಮಾಡಿದ್ದಾರೆ.
-
We haven’t put our best foot forward in this tournament but that happens,many sporting giants have gone through this phase but I love this team and it’s environment. Also want to appreciate our well wishers who’ve shown faith and undying loyalty to this team so far 💙@mipaltan
— Rohit Sharma (@ImRo45) April 25, 2022 " class="align-text-top noRightClick twitterSection" data="
">We haven’t put our best foot forward in this tournament but that happens,many sporting giants have gone through this phase but I love this team and it’s environment. Also want to appreciate our well wishers who’ve shown faith and undying loyalty to this team so far 💙@mipaltan
— Rohit Sharma (@ImRo45) April 25, 2022We haven’t put our best foot forward in this tournament but that happens,many sporting giants have gone through this phase but I love this team and it’s environment. Also want to appreciate our well wishers who’ve shown faith and undying loyalty to this team so far 💙@mipaltan
— Rohit Sharma (@ImRo45) April 25, 2022
ಟೂರ್ನಮೆಂಟ್ ಮೊದಲಾರ್ಧ ಮುಗಿದಿದೆ. ಆದರೆ, ಮುಂಬೈ ಇನ್ನೂ ಜಯ ಸಾಧಿಸಲು ಸಾಧ್ಯವಾಗಿಲ್ಲ. ಸ್ವತಃ ರೋಹಿತ್ ಶರ್ಮಾ ಕೂಡ ನಿರೀಕ್ಷಿತ ಪ್ರದರ್ಶನ ತೋರಿಲ್ಲ, ಜೊತೆಗಾರ ಇಶಾನ್ ಕಿಶನ್ ತಾವು ಪಡೆದಿರುವ 15.25 ಕೋಟಿ ರೂಗಳಿಗೆ ತಕ್ಕಂತೆ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಲ್ಲದೇ ಬೌಲಿಂಗ್ ಘಟಕ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.
ಬುಮ್ರಾ ರನ್ಗಳಿಗೆ ಕಡಿವಾಣ ಹಾಕುತ್ತಿದ್ದಾರೆ ಹೊರತು ವಿಕೆಟ್ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಒಟ್ಟಾರೆ ಸಂಪೂರ್ಣ ತಂಡವಾಗಿ ವೈಫಲ್ಯ ಅನುಭವಿಸಿರುವ 5 ಬಾರಿಯ ಚಾಂಪಿಯನ್ಸ್ ಮುಂಬರುವ 6 ಪಂದ್ಯಗಳನ್ನಾದರೂ ಗೆದ್ದು ಅಭಿಮಾನಿಗಳ ಮುಖದಲ್ಲಿ ಸಂಭ್ರಮ ನೋಡುವುದಕ್ಕೆ ಬಯಸುತ್ತಿದೆ.
ಇದನ್ನೂ ಓದಿ:ಐಪಿಎಲ್ನಲ್ಲಿ ಒಂದೇ ತಂಡದೆದರು ಹೆಚ್ಚು ಶತಕ ಸೇರಿದಂತೆ ರಾಹುಲ್ ನಿರ್ಮಿಸಿದ ದಾಖಲೆಗಳು ಇಲ್ಲಿವೆ