ನವದೆಹಲಿ: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಚೆಂಡು ತಲೆಗೆ ಬಡಿದು ಗಾಯಗೊಂಡಿದ್ದ ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಂಧಾನ ಭಾರತ ಬ್ಯಾಟಿಂಗ್ನ ಬಲವಾಗಿದ್ದು, ಅವರ ಗಾಯ ನಿಜಕ್ಕೂ ಎಲ್ಲರಿಗೂ ತಲ್ಲಣ ತಂದಿತ್ತು. ಇದೀಗ ಅವರ ಚೇತರಿಕೆಯ ಸುದ್ದಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಸ್ಮೃತಿ ಶೀಘ್ರದಲ್ಲೇ ಮೈದಾನಕ್ಕಿಳಿದು ಬ್ಯಾಟಿಂಗ್ ಅಭ್ಯಾಸ ಮಾಡಲಿದ್ದಾರೆ. ಮತ್ತು ವಿಶ್ವಕಪ್ ಆರಂಭಿಕ ಪಂದ್ಯದಿಂದಲೇ ತಂಡಕ್ಕೆ ಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.
-
🚨 UPDATE 🚨: Smriti Mandhana stable after being struck on the head in #CWC22 warm-up game. #TeamIndia
— BCCI Women (@BCCIWomen) February 28, 2022 " class="align-text-top noRightClick twitterSection" data="
Details 🔽
">🚨 UPDATE 🚨: Smriti Mandhana stable after being struck on the head in #CWC22 warm-up game. #TeamIndia
— BCCI Women (@BCCIWomen) February 28, 2022
Details 🔽🚨 UPDATE 🚨: Smriti Mandhana stable after being struck on the head in #CWC22 warm-up game. #TeamIndia
— BCCI Women (@BCCIWomen) February 28, 2022
Details 🔽
ಅಭ್ಯಾಸ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ವೇಗಿ ಇಸ್ಮಾಯಿಲ್ ಎಸೆದ ಬೌನ್ಸರ್ ಅನ್ನು ಮಂಧಾನ ಫುಲ್ಶಾಟ್ ಆಡುವ ಪ್ರಯತ್ನದಲ್ಲಿ ವಿಫಲರಾದರು. ಚೆಂಡು ಬಲವಾಗಿ ಹೆಲ್ಮೆಟ್ಗೆ ಬಡಿದಿತ್ತು. ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿಲಾಗಿತ್ತು. ಆದರೆ, ತಲೆಗೆ ಗಾಯವಾಗಿದ್ದರಿಂದ ಅವರು ವಿಶ್ವಕಪ್ನಿಂದ ಹೊರಬೀಳಬಹುದೆಂದು ಕ್ರಿಕೆಟ್ ವಲಯದಲ್ಲಿ ಅನುಮಾನ ವ್ಯಕ್ತವಾಗಿತ್ತು. ಆದರೆ, ಈ ಗೊಂದಲದ ವೇಳೆ ಬಿಸಿಸಿಐ ಮಂಧಾನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಗುಡ್ ನ್ಯೂಸ್ ನೀಡಿದೆ.
ಮಹಿಳಾ ಏಕದಿನ ವಿಶ್ವಕಪ್ ಮಾರ್ಚ್ 4ರಿಂದ ಆರಂಭವಾಗಲಿದೆ. ನ್ಯೂಜಿಲ್ಯಾಂಡ್ನಲ್ಲಿ ಈ ಟೂರ್ನಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ವೆಸ್ಟ್ ಇಂಡೀಸ್ ವಿರುದ್ಧ ಕಾದಾಡಲಿದೆ. ಭಾರತ ತಂಡ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಮಾರ್ಚ್ 6ರಂದು ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ:3ನೇ ಕ್ರಮಾಂಕ ನನಗೆ ಉತ್ತಮವಾಗಿ ಹೊಂದುತ್ತದೆ: ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ಅಯ್ಯರ್!