ETV Bharat / sports

ಫೈನಲ್​ ಟೆಸ್ಟ್​ ಪಂದ್ಯಕ್ಕಿಲ್ಲ ವಿಘ್ನ, ಟೀಂ ಇಂಡಿಯಾ ಪ್ಲೇಯರ್ಸ್​​ RT-PCR ವರದಿ ನೆಗೆಟಿವ್​

author img

By

Published : Sep 9, 2021, 10:57 PM IST

ಟೀಂ ಇಂಡಿಯಾ ಪ್ಲೇಯರ್ಸ್ ಕೊರೊನಾ ವರದಿ ನೆಗೆಟಿವ್​ ಬಂದಿರುವ ಕಾರಣ ಈಗಾಗಲೇ ನಿಗದಿಯಾಗಿರುವಂತೆ ಭಾರತ-ಇಂಗ್ಲೆಂಡ್​ ನಡುವಿನ ಫೈನಲ್​ ಟೆಸ್ಟ್​ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.

Team india
Team india

ಮ್ಯಾಂಚೆಸ್ಟರ್​(ಲಂಡನ್​): ಭಾರತ- ಇಂಗ್ಲೆಂಡ್​ ನಡುವೆ ನಾಳೆ ಆರಂಭಗೊಳ್ಳಬೇಕಾಗಿರುವ ಪಂದ್ಯಕ್ಕೆ ಉಂಟಾಗಿದ್ದ ವಿಘ್ನ ನಿವಾರಣೆಗೊಂಡಿದ್ದು, ನಿಗದಿಯಾಗಿರುವಂತೆ ಮ್ಯಾಂಚೆಸ್ಟರ್​​ ಮೈದಾನದಲ್ಲಿ ಫೈನಲ್​​ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.

ಟೀಂ ಇಂಡಿಯಾದ ಜೂನಿಯರ್ ಫಿಜಿಯೋ ಯೋಗೇಶ್​ ಪರ್ಮಾರ್​ಗೆ ಕೊರೊನಾ ಸೋಂಕು ದೃಢಗೊಂಡಿರುವ ಕಾರಣ, ನಾಳೆಯಿಂದ ಆರಂಭಗೊಳ್ಳಲಿರುವ ಮ್ಯಾಂಚೆಸ್ಟರ್​ ಟೆಸ್ಟ್​​ ಪಂದ್ಯ ಅನುಮಾನ ಮೂಡಿಸಿತ್ತು. ಇದೀಗ ಎಲ್ಲ ಪ್ಲೇಯರ್ಸ್​ಗೆ ನಡೆಸಲಾಗಿರುವ ಆರ್​​ಟಿ-ಪಿಸಿಆರ್​ ವರದಿ ಬಂದಿದ್ದು, ಎಲ್ಲರ ವರದಿ ನೆಗೆಟಿವ್ ಆಗಿರುವ ​ ಕಾರಣ ಪಂದ್ಯ ನಡೆಯಲಿದೆ.

ನಾಲ್ಕನೇ ಟೆಸ್ಟ್​ ಪಂದ್ಯ ವೇಳೆ ತಂಡದ ಕೋಚ್​ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋ ನಿತಿನ್ ಪಟೇಲ್ ಅವರಿಗೆ ಕೊರೊನಾ ದೃಢಗೊಂಡಿದ್ದು, 10 ದಿನಗಳ ಕಾಲ ಐಸೋಲೇಷನ್ ಮಾಡಲಾಗಿದೆ. ಇದರ ಬೆನ್ನಲ್ಲೇ ತಂಡದ ಜೂನಿಯರ್ ಫಿಜಿಯೋ ಯೋಗೇಶ್​​ ಪರ್ಮಾರ್​ಗೆ ಸೋಂಕು ದೃಢಗೊಂಡಿದ್ದ ಕಾರಣ, ಎಲ್ಲ ಪ್ಲೇಯರ್ಸ್​ಗೆ ಹೋಟೆಲ್​ನಲ್ಲಿ ಇರುವಂತೆ ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ಕೊರೊನಾ ಟೆಸ್ಟ್ ನಡೆಸಲಾಗಿತ್ತು.

ಇದೀಗ ಎಲ್ಲರ ವರದಿ ಹೊರಬಿದ್ದಿದ್ದು, ಅದು ನೆಗೆಟಿವ್ ಆಗಿರುವ ಕಾರಣ ನಾಳೆ ಮಧ್ಯಾಹ್ನ 3:30 (ಭಾರತೀಯ ಕಾಲಮಾನ)ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಐದು ಪಂದ್ಯಗಳ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಈಗಾಗಲೇ 2-1 ಅಂತರದ ಮುನ್ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.