ದುಬೈ: ಫುಟ್ಬಾಲ್ ಜಗತ್ತಿನ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಮಾಲೀಕರು ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ನಲ್ಲಿ ತಂಡವನ್ನು ಖರೀದಿಸುವಲ್ಲಿ ವಿಫಲರಾಗಿದ್ದರು. ಆದರೆ, ಯುಎಇ ಟಿ20 ಲೀಗ್ನಲ್ಲಿ ತಂಡವೊಂದನ್ನು ಖರೀದಿಸುವ ಮೂಲಕ ಕ್ರಿಕೆಟ್ ಲೋಕಕ್ಕೂ ಕಾಲಿಟ್ಟಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಸಹ ಅಧ್ಯಕ್ಷನಾಗಿರುವ ಅವ್ರಾಮ್ ಗ್ಲೇಜರ್ ಯುನೈಟೆಡ್ ಅರಬ್ ಎಮಿರೇಟ್ಸ್ನ ಉದ್ಘಾಟನಾ ಲೀಗ್ನಲ್ಲಿ ಒಂದು ಫ್ರಾಂಚೈಸಿ ಖರೀದಿಸಿದ್ದಾರೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಬುಧವಾರ ಖಚಿತಪಡಿಸಿದೆ.
-
📢 BREAKING 📢
— UAE Cricket Official (@EmiratesCricket) December 1, 2021 " class="align-text-top noRightClick twitterSection" data="
"Franchise in UAE T20 League acquired by Lancer Capital"
Read more about this EXCITING, HISTORIC partnership 👉 https://t.co/MUof4xJSI9#UAECricket #Cricket #UAET20League pic.twitter.com/k5qV9R0XaN
">📢 BREAKING 📢
— UAE Cricket Official (@EmiratesCricket) December 1, 2021
"Franchise in UAE T20 League acquired by Lancer Capital"
Read more about this EXCITING, HISTORIC partnership 👉 https://t.co/MUof4xJSI9#UAECricket #Cricket #UAET20League pic.twitter.com/k5qV9R0XaN📢 BREAKING 📢
— UAE Cricket Official (@EmiratesCricket) December 1, 2021
"Franchise in UAE T20 League acquired by Lancer Capital"
Read more about this EXCITING, HISTORIC partnership 👉 https://t.co/MUof4xJSI9#UAECricket #Cricket #UAET20League pic.twitter.com/k5qV9R0XaN
ಗ್ಲೇಜರ್ ಫ್ಯಾಮಿಲಿ ಮ್ಯಾಂಚೆಸ್ಟರ್ ಯುನೈಟೆಡ್ ಹೊರತುಪಡಿಸಿ, ಅಮೆರಿಕದ ಪ್ರಸ್ತಿದ್ಧ ನ್ಯಾಷನಲ್ ಫುಟ್ಬಾಲ್ ಲೀಗ್( NFL ರಗ್ಬಿ)ನಲ್ಲಿ ಟ್ಯಾಂಪಾ ಬೇ ಬುಕಾನಿಯರ್ಸ್ ತಂಡದ ಮಾಲೀಕರಾಗಿದ್ದಾರೆ. ಇದೀಗ ಯುಎಇ ಟಿ20 ಲೀಗ್ನಲ್ಲಿ ತಮ್ಮ ಲ್ಯಾನ್ಸರ್ ಕ್ಯಾಪಿಟಲ್ ಕಂಪನಿ ಮೂಲಕ ಒಂದು ಫ್ರಾಂಚೈಸಿಯನ್ನು ಖರೀದಿಸಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಐಪಿಎಲ್ನಲ್ಲಿ ತಂಡವೊಂದನ್ನು ಖರೀದಿಸಲು ಗ್ಲೇಜರ್ ಗ್ರೂಪ್ ಬಿಡ್ ಸಲ್ಲಿಸಿತ್ತು. ಆದರೆ, ಐಪಿಎಲ್ ತಂಡದ ಬಿಡ್ನಲ್ಲಿ ಪೈಪೋಟಿಯನ್ನು ತಡೆಯಲಾಗದೇ ಹಿಂದೆ ಸರಿದಿತ್ತು. ಆ ಪೈಪೋಟಿಯಲ್ಲಿ ಆರ್ಪಿಎಸ್ಜಿ ಗ್ರೂಪ್ 7090 ಕೋಟಿ ರೂ ಬಿಡ್ ಸಲ್ಲಿಸಿ ಲಖನೌ ಫ್ರಾಂಚೈಸಿಯನ್ನು ಮತ್ತು ಸಿವಿಸಿ ಕ್ಯಾಪಿಟಲ್ಸ್ 5,625 ಕೋಟಿ ರೂಗೆ ಅಹ್ಮದಾಬಾದ್ ಫ್ರಾಂಚೈಸಿಯನ್ನು ಖರೀದಿಸಿದ್ದವು.
ಇದನ್ನೂ ಓದಿ:Pro Kabaddi League : ಬೆಂಗಳೂರಿನಲ್ಲಿ ನಡೆಯಲಿದೆ ಕಬಡ್ಡಿ ಹಂಗಾಮ, ಮೊದಲ ಪಂದ್ಯದಲ್ಲಿ ಬುಲ್ಸ್ಗೆ ಮುಂಬಾ ಎದುರಾಳಿ