ರಾಜ್ಕೋಟ್: ಮಹಾರಾಷ್ಟ್ರದ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರು 2021ರ ವರ್ಷದಲ್ಲಿ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಐಪಿಎಲ್ನಲ್ಲಿ ಗರಿಷ್ಠ ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದ ಸಿಎಸ್ಕೆ ಬ್ಯಾಟರ್, ಇದೀಗ ತಮ್ಮ ಅಮೋಘ ರನ್ ಬೇಟೆಯನ್ನು ವಿಜಯ ಹಜಾರೆ ಟ್ರೋಫಿಯಲ್ಲೂ ಮುಂದುವರಿಸಿದ್ದಾರೆ.
ಋತುರಾಜ್ ಗಾಯಕ್ವಾಡ್ ಪ್ರಸ್ತುತ ನಡೆಯುತ್ತಿರುವ 50 ಓವರ್ಗಳ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮಧ್ಯ ಪ್ರದೇಶದ ವಿರುದ್ಧ 112 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 136 ರನ್ ಸಿಡಿಸಿ 329 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಲು ನೆರವಾಗಿದ್ದರು.
-
1⃣3⃣6⃣ vs Madhya Pradesh
— BCCI Domestic (@BCCIdomestic) December 9, 2021 " class="align-text-top noRightClick twitterSection" data="
1⃣0⃣0⃣ up & going strong vs Chhattisgarh @Ruutu1331 brings up his second successive ton. 👏 👏 #CHHvMAH #VijayHazareTrophy pic.twitter.com/LUMmgInDi3
">1⃣3⃣6⃣ vs Madhya Pradesh
— BCCI Domestic (@BCCIdomestic) December 9, 2021
1⃣0⃣0⃣ up & going strong vs Chhattisgarh @Ruutu1331 brings up his second successive ton. 👏 👏 #CHHvMAH #VijayHazareTrophy pic.twitter.com/LUMmgInDi31⃣3⃣6⃣ vs Madhya Pradesh
— BCCI Domestic (@BCCIdomestic) December 9, 2021
1⃣0⃣0⃣ up & going strong vs Chhattisgarh @Ruutu1331 brings up his second successive ton. 👏 👏 #CHHvMAH #VijayHazareTrophy pic.twitter.com/LUMmgInDi3
ಇದೀಗ ಗುರುವಾರ ನಡೆದ ಛತ್ತೀಸ್ಗಢ ವಿರುದ್ಧದ ಪಂದ್ಯದಲ್ಲೂ ಅಜೇಯ ಶತಕ ಸಿಡಿಸಿ ಮಹಾರಾಷ್ಟ್ರಕ್ಕೆ 8 ವಿಕೆಟ್ಗಳ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ಗಾಯಕ್ವಾಡ್ 143 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ 154 ರನ್ಗಳಿಸಿದರು. ಛತ್ತೀಸ್ಗಢ ನೀಡಿದ್ದ 276 ರನ್ಗಳನ್ನು ಮಹಾರಾಷ್ಟ್ರ 47 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ಇದಕ್ಕೂ ಕಳೆದ ತಿಂಗಳು ನಡೆದಿದ್ದ ಸಯ್ಯದ್ ಮುಷ್ತಾಕ್ ಅಲಿ ಟಿ-20ಯಲ್ಲಿ 5 ಪಂದ್ಯಗಳಿಂದ 3 ಅರ್ಧಶತಕ ಸಹಿತ 259 ರನ್ ಸಿಡಿಸಿದ್ದರು.
6 ಕೋಟಿ ರೂ.ಗೆ ರಿಟೈನ್ ಆದ ಮಹಾರಾಷ್ಟ್ರ ನಾಯಕ
ನಾಯಕನಾಗಿ ಮಿಂಚುಹರಿಸುತ್ತಿರುವ ಋತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 6 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. 2020ರಲ್ಲಿ ಇವರನ್ನು ಫ್ರಾಂಚೈಸಿ ಕೇವಲ 20 ಲಕ್ಷಕ್ಕೆ ಖರೀದಿಸಿತ್ತು. 2021ರ ಆವೃತ್ತಿಯಲ್ಲಿ 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 635 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದಲ್ಲದೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ:ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ್ದೇಕೆ: ಕೊನೆಗೂ ಬಾಯ್ಬಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ