ETV Bharat / sports

ಮಹಾರಾಜ​ ಟ್ರೋಫಿ: ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಗೆದ್ದು ಟೂರ್ನಿಯಿಂದ ಹೊರಬಿದ್ದ ಶಿವಮೊಗ್ಗ ಸ್ಟ್ರೈಕರ್ಸ್‌

author img

By

Published : Aug 22, 2022, 9:23 PM IST

ಮಹಾರಾಜ ಟ್ರೋಫಿ ಕ್ರಿಕೆಟ್​ ಟೂರ್ನಿಯ ಇಂದಿನ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡವು ಗುಲ್ಬರ್ಗ ಮಿಸ್ಟಿಕ್ಸ್‌ ಭರ್ಜರಿ ಗೆಲುವು ದಾಖಲಿಸಿದೆ.

Etv Bharatmaharaja trophy-shivamogga-strikers-beat-gulbarga-mystics
Etv Bharatಮಹಾರಾಜ​ ಟ್ರೋಫಿ: ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಗೆದ್ದು ಟೂರ್ನಿಯಿಂದ ಹೊರಬಿದ್ದ ಶಿವಮೊಗ್ಗ ಸ್ಟ್ರೈಕರ್ಸ್‌

ಬೆಂಗಳೂರು: ಮಳೆ ಬಾಧಿತ ಕೊನೆಯ ಲೀಗ್‌ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 6 ವಿಕೆಟ್‌ ಅಂತರದ ಜಯದೊಂದಿಗೆ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್​ ಟೂರ್ನಿಯಿಂದ ನಿರ್ಗಮಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮನೀಶ್‌ ಪಾಂಡೆ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್‌ 9 ವಿಕೆಟ್‌ ನಷ್ಟಕ್ಕೆ 118 ರನ್‌ ಗಳಿಸಿತ್ತು. ಗುಲ್ಬರ್ಗ ಪರ ಜಸ್ವಂತ್‌ ಆಚಾರ್ಯ 22 ಮತ್ತು ರಿತೇಶ್‌ ಭಟ್ಕಳ್‌ 38 ರನ್ ಗಳಿಸಿದ್ದೇ ಗರಿಷ್ಠ ಮೊತ್ತವಾಯಿತು. ಶಿವಮೊಗ್ಗ ಸ್ಟ್ರೈಕರ್ಸ್‌ ತಂಡದ ಅವಿನಾಶ್‌ 24 ರನ್‌ಗೆ 3 ವಿಕೆಟ್‌ ಕಬಳಿಸಿ ಯಶಸ್ವಿ ಬೌಲರ್‌ ಎನಿಸಿದರು.

ಅಲ್ಪ ಮೊತ್ತವನ್ನು ಬೆನ್ನಟ್ಟಿದ ಶಿವಮೊಗ್ಗ ತಂಡ 15 ರನ್‌ ಗಳಿಸುವಷ್ಟರಲ್ಲಿಯೇ 2 ವಿಕೆಟ್‌ ಕಳೆದುಕೊಂಡಿತ್ತು. ಅದೇ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ನಂತರ ಶಿವಮೊಗ್ಗಕ್ಕೆ 54 ರನ್‌ ಗುರಿ ನೀಡಲಾಯಿತು. ಶಿವಮೊಗ್ಗ 6.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಸಂಕ್ಷಿಪ್ತ ಸ್ಕೋರ್‌: ಗುಲ್ಬರ್ಗ ಮಿಸ್ಟಿಕ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 118 (ಜಸ್ವಂತ್‌ ಆಚಾರ್ಯ 22, ರಿತೇಶ್‌ ಭಟ್ಕಳ್‌ 38, ಅವಿನಾಶ್‌ 24/3, ಉತ್ತಮ್‌ ಅಯ್ಯಪ್ಪ 23/2, ಕೆ.ಸಿ.ಕಾರಿಯಪ್ಪ 22/2)

ಶಿವಮೊಗ್ಗ ಸ್ಟ್ರೈಕರ್ಸ್‌: 6.3 ಓವರ್‌ಗಳಲ್ಲಿ 4 ವಿಕೆಟ್‌ಗೆ 54 (ಕೆ. ಸಿದ್ಧಾರ್ಥ್‌ 18, ಡಿ.ಅವಿನಾಶ್‌ 11*, ವಿದ್ವತ್‌ ಕಾವೇರಪ್ಪ 22/1).

ಇದನ್ನೂ ಓದಿ: ಮಹಾರಾಜ​ ಟ್ರೋಫಿ ಕ್ರಿಕೆಟ್​ 2022... ಹುಬ್ಬಳ್ಳಿ ಟೈಗರ್ಸ್​ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್​ಗೆ ರೋಚಕ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.