ETV Bharat / sports

ಮಹಾರಾಜ ಟ್ರೋಫಿ: ಮಂಗಳೂರು ಡ್ರ್ಯಾಗನ್ಸ್ ಬೇಟೆಯಾಡಿದ ಹುಬ್ಳಿ ಟೈಗರ್ಸ್; ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಮುಂದುವರೆದ ಮನೀಶ್ ಟೀಂ

author img

By

Published : Aug 17, 2023, 10:59 PM IST

Maharaja Trophy: ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಹುಬ್ಳಿ ಟೈಗರ್ಸ್ ಜಯಭೇರಿ ಬಾರಿಸಿದೆ.

ಹುಬ್ಳಿ ಟೈಗರ್ಸ್
ಹುಬ್ಳಿ ಟೈಗರ್ಸ್

ಬೆಂಗಳೂರು : ಮಂಗಳೂರು ಡ್ರ್ಯಾಗನ್ಸ್ ತಂಡವನ್ನು 63 ರನ್‌ಗಳಿಂದ ಸೋಲಿಸಿದ ಹುಬ್ಳಿ ಟೈಗರ್ಸ್ ಟೂರ್ನಿಯಲ್ಲಿ ಅಜೇಯವಾಗುಳಿಯಿತು. ಬ್ಯಾಟಿಂಗ್‌ನಲ್ಲಿ ನಾಯಕ ಮನೀಶ್ ಪಾಂಡೆ (69), ಕೆ.ಶ್ರೀಜಿತ್ (52), ಮೊಹಮ್ಮದ್ ತಾಹಾ (52) ಅರ್ಧಶತಕ ಹಾಗೂ ಬೌಲಿಂಗ್‌ನಲ್ಲಿ ನಾಥನ್ ಡಿಮೆಲ್ಲೋ (3/23) ಹಾಗೂ ಪ್ರವೀಣ್ ದುಬೆ (2/13) ಅಮೋಘ ಪ್ರದರ್ಶನದ ನೆರವಿನಿಂದ ಮಹಾರಾಜ ಟ್ರೋಫಿಯಲ್ಲಿ ಹುಬ್ಳಿ ಟೈಗರ್ಸ್ ಮತ್ತೊಂದು ವಿಜಯ ಪೂರ್ಣಗೊಳಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಹುಬ್ಳಿ ಟೈಗರ್ಸ್ ಆರಂಭದಲ್ಲೇ ಲವನಿತ್ ಸಿಸೋಡಿಯಾ (1) ವಿಕೆಟ್ ನಷ್ಟದ ಹೊರತಾಗಿಯೂ ಸ್ಫೋಟಕ ಆರಂಭ ಪಡೆಯಿತು. ಮೊಹಮ್ಮದ್ ತಾಹಾ ಮತ್ತು ಕೆ.ಶ್ರೀಜಿತ್ ಪವರ್‌ಪ್ಲೇನಲ್ಲಿ 58 ರನ್ ಗಳಿಸುವ ಮೂಲಕ ಡ್ರ್ಯಾಗನ್ಸ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದರು. ಅರ್ಧಶತಕ ದಾಖಲಿಸಿ ಮುನ್ನುಗ್ಗುತ್ತಿದ್ದ ಮೊಹಮ್ಮದ್ ತಾಹಾ ಈ‌ ಹಂತದಲ್ಲಿ ಎಂ.ಜಿ ನವೀನ್‌ಗೆ ವಿಕೆಟ್ ಒಪ್ಪಿಸಿದರೆ, ಶ್ರೀಜಿತ್ ಕೆ.ಗೌತಮ್ ಬೌಲಿಂಗ್‌ನಲ್ಲಿ ಔಟ್‌ ಆಗಿ ಪೆವಿಲಿಯನ್ ಸೇರಿದರು.

ಇದೇ ಸಂದರ್ಭದಲ್ಲಿ ಅಖಾಡಕ್ಕಿಳಿದ ಹುಬ್ಳಿ ನಾಯಕ ಮನೀಶ್ ಪಾಂಡೆ ಕೇವಲ 26 ಎಸೆತಗಳಲ್ಲಿ 5 ಬೌಂಡರಿ 4 ಸಿಕ್ಸರ್ ಒಳಗೊಂಡ ಅರ್ಧಶತಕ ದಾಖಲಿಸಿದರು. ನಂತರ ಬಂದ ಮನ್ವಂತ್ ಕುಮಾರ್ (1) ನಾಗಾ ಭರತ್ (15) ರನ್ ಗಳಿಸಿದರು.ಅಂತಿಮವಾಗಿ ಮನೀಶ್ ಪಾಂಡೆ (65*) ಹಾಗೂ ಪ್ರವೀಣ್ ದುಬೆ (18*) ರನ್ ಗಳಿಸುವ ಮೂಲಕ ಹುಬ್ಳಿ ತಂಡ 5 ವಿಕೆಟ್ ನಷ್ಟಕ್ಕೆ 215 ರನ್‌ಗಳ ಬೃಹತ್ ಗುರಿ ನಿಗದಿಪಡಿಸಿತು.

ಇದಕ್ಕೆ ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿದ ಮಂಗಳೂರು ಡ್ರ್ಯಾಗನ್ಸ್ ಆರಂಭದಲ್ಲಿಯೇ ವಿದ್ವತ್ ಕಾವೇರಪ್ಪ ಬೌಲಿಂಗ್‌ನಲ್ಲಿ ರೋಹನ್ ಪಾಟೀಲ್ (7) ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದ ಶತಕವೀರ ಬಿ.ಯು.ಶಿವಕುಮಾರ್ (23) ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಹುಬ್ಳಿ ತಂಡದ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡುವ ಯತ್ನ ಮಾಡಿದ ಶರತ್ ಬಿ.ಆರ್ (38) ರನ್ ಗಳಿಸಿ ಕೆ.ಸಿ ಕಾರಿಯಪ್ಪಗೆ ಮೊದಲ ಬಲಿಯಾದರು. 9ನೇ ಓವರ್‌ನಲ್ಲಿ ಬಿ.ಯು ಶಿವಕುಮಾರ್ ನಾಥನ್ ಡಿ'ಮೆಲ್ಲೋಗೆ ವಿಕೆಟ್ ಒಪ್ಪಿಸುವ ಮೂಲಕ ಡ್ರ್ಯಾಗನ್ಸ್ ಪತನ ಆರಂಭವಾಯಿತು.

ಬಳಿಕ ಬಂದ ಅನೀಶ್ವರ್ ಗೌತಮ್ ಹಾಗೂ ಅನಿರುದ್ಧ ಜೋಶಿ ತಲಾ 4 ರನ್‌ಗಳಿಗಷ್ಟೇ ಸೀಮಿತವಾದರೆ, ನಾಯಕ ಕೆ.ಗೌತಮ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಕೆಳ ಕ್ರಮಾಂಕದಲ್ಲಿ ಬಂದ ನವೀನ್ ಎಂ.ಜಿ (2) ಧೀರಜ್ ಗೌಡ (16), ಆದಿತ್ಯ ಗೋಯಲ್ (2*) ರನ್ ಗಳಿಸಿದರೆ ಮತ್ತೊಂದೆಡೆ ಕೆ.ವಿ.ಸಿದ್ಧಾರ್ಥ್ (47*) ರನ್ ಗಳಿಸುವ ಮೂಲಕ ಹುಬ್ಳಿ ಬೌಲರ್‌ಗಳನ್ನ ಕಾಡಿದರು.

ನಿಗದಿತ 20 ಓವರ್‌ಗಳಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡ 8 ವಿಕೆಟ್‌ಗಳನ್ನ ಕಳೆದುಕೊಂಡು 152 ರನ್ ಗಳಿಸುವುದರೊಂದಿಗೆ 63 ರನ್‌ಗಳ ಅಂತರದಿಂದ ಸೋಲಿಗೆ ಶರಣಾಯಿತು. ಹುಬ್ಳಿ ಪರ ಚೊಚ್ಚಲ ಪಂದ್ಯವನ್ನಾಡಿದ ನಾಥನ್ ಡಿಮೆಲ್ಲೋ (3/23) ಪ್ರವೀಣ್ ದುಬೆ (2/13) ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್ :

ಹುಬ್ಳಿ ಟೈಗರ್ಸ್ - 215/5 (20)
ಮನೀಷ್ ಪಾಂಡೆ - 69* (34)
ಮೊಹಮ್ಮದ್ ತಾಹಾ - 52 (28)
ಕೆ.ಶ್ರೀಜಿತ್ - 52 (29)
ಪ್ರತೀಕ್ ಜೈನ್ - 1/6
ಪಾರಸ್ ಗುರ್ಬೌಕ್ಸ್ ಆರ್ಯ - 1/27

ಮಂಗಳೂರು ಡ್ರಾಗನ್ಸ್ - 152/8 (20)
ಕೆ.ಸಿದ್ಧಾರ್ಥ್ - 47* (37)
ಶರತ್ ಬಿ.ಆರ್ - 38 (18)
ನಾಥನ್ ಡಿಮೆಲ್ಲೋ - 3/23
ಪ್ರವೀಣ್ ದುಬೆ - 2/13

ಇದನ್ನೂ ಓದಿ : ಮಹಾರಾಜ ಟ್ರೋಫಿ: ಗುಲ್ಬರ್ಗಾ ಮಿಸ್ಟಿಕ್ಸ್​ ಮಣಿಸಿ ಮೊದಲ ಗೆಲುವು ಕಂಡ ಮೈಸೂರು ವಾರಿಯರ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.