ETV Bharat / sports

Maharaja Trophy: ಲವನಿತ್ - ಶ್ರೀಜಿತ್ ಶತಕದ ಜೊತೆಯಾಟ, ಹುಬ್ಬಳ್ಳಿ ಟೈಗರ್ಸ್​ಗೆ 7 ವಿಕೆಟ್​ ಜಯ - Gulbarga Mystics

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್​ ಎದುರಿನ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​ 7 ವಿಕೆಟ್​ಗಳ ಗೆಲುವು ದಾಖಲಿಸಿ, ಟೂರ್ನಿಯಲ್ಲಿ ಸತತ 2ನೇ ಜಯ ಪಡೆಯಿತು.

ಹುಬ್ಬಳ್ಳಿ ಟೈಗರ್ಸ್​ಗೆ 7 ವಿಕೆಟ್​ ಜಯ
ಹುಬ್ಬಳ್ಳಿ ಟೈಗರ್ಸ್​ಗೆ 7 ವಿಕೆಟ್​ ಜಯ
author img

By

Published : Aug 15, 2023, 11:51 AM IST

ಬೆಂಗಳೂರು: ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಲವನಿತ್ ಸಿಸೋಡಿಯಾ ಹಾಗೂ ಕೆ. ಶ್ರಿಜಿತ್ ದಾಖಲಿಸಿದ 106 ರನ್‌ಗಳ ಜೊತೆಯಾಟದ ನೆರವಿನಿಂದ ಗುಲ್ಬರ್ಗಾ ನೀಡಿದ 139 ರನ್‌ಗಳ ಗುರಿಯನ್ನು ಹುಬ್ಬಳ್ಳಿ ತಂಡ ಕೇವಲ 15.2 ಓವರ್‌ಗಳಲ್ಲಿ ತಲುಪಿ ಜಯದ ಕೇಕೆ ಹಾಕಿತು.

ನಗರದ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತ ಗುಲ್ಬರ್ಗಾ ಮಿಸ್ಟಿಕ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭಿಕರಾದ ಚೇತನ್ ಎಲ್. ಆರ್ (10) ಆದರ್ಶ್ ಪ್ರಜ್ವಲ್ (14)ರನ್ ಮಾತ್ರ ಗಳಿಸಿ ಪವರ್ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್ ಸೇರಿದರು. ನಂತರ ಬಂದ ಕೆ. ವಿ. ಅನೀಶ್ (16) ಸ್ಮರಣ್. ಆರ್ (15), ಅಮಿತ್ ವರ್ಮಾ (19) ಹಾಗೂ ಮ್ಯಾಕ್​ನೈಲ್​ ನೊರೊನ್ಹಾ (23) ರನ್ ಗಳಿಸುವ ಮೂಲಕ ತಂಡಕ್ಕೆ ಅಲ್ಪ ಕೊಡುಗೆ ನೀಡಿದರು.

ಬ್ಯಾಟಿಂಗ್​ ವೈಫಲ್ಯಕ್ಕೀಡಾದ ಗುಲ್ಬರ್ಗಾ ತಂಡ 19.3 ಓವರ್‌ಗಳಲ್ಲಿ 138 ರನ್ ಗಳಿಸಿ ಆಲೌಟ್ ಆಯಿತು. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ 21 ರನ್​ಗೆ 3 ವಿಕೆಟ್ ಪಡೆದು ಮಿಂಚಿದರೆ, ವಿದ್ವತ್ ಕಾವೇರಪ್ಪ ಹಾಗೂ ಲವೀಶ್ ಕೌಶಲ್ ತಲಾ 2 ವಿಕೆಟ್ ಪಡೆದು ಗುಲ್ಬರ್ಗಾ ತಂಡವನ್ನು ಕಾಡಿದರು.

ಲವನಿತ್​- ಶ್ರೀಜಿತ್​ ಸೊಗಸಾದ ಜೊತೆಯಾಟ: 139 ರನ್ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡ ಆರಂಭದಲ್ಲೇ ನಿರಾಸೆ ಅನುಭವಿಸಿತು. ಮೊಹಮ್ಮದ್ ತಾಹಾ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ದ್ವಿತೀಯ ವಿಕೆಟ್‌ಗೆ ಜೊತೆಯಾದ ಲವನಿತ್ ಸಿಸೋಡಿಯಾ ಅರ್ಧಶತಕ (61) ಹಾಗೂ ಕೆ. ಶ್ರಿಜಿತ್ (47) ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಗುಲ್ಬರ್ಗಾ ತಂಡದ ಬೌಲರ್​ ಅಭಿಲಾಶ್ ಶೆಟ್ಟಿ ಎಸೆದ 11 ನೇ ಓವರ್‌ನಲ್ಲಿ ಕೆ. ಶ್ರೀಜಿತ್ ಬಲವಾದ ಹೊಡೆತಕ್ಕೆ ಕೈ ಹಾಕಿ ಆದರ್ಶ್ ಪ್ರಜ್ವಲ್ ಕೈಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

ಅವರ ಹಿಂದೆಯೇ ಲವನಿತ್ ಸಿಸೋಡಿಯಾ ಸಹ ವಿಕೆಟ್ ನೀಡಿ ಹೊರನಡೆದರು. ನಂತರ ಜೊತೆಯಾದ ನಾಗ ಭರತ್ ಹಾಗೂ ಮನೀಶ್ ಪಾಂಡೆ ಕೊನೆಯಲ್ಲಿ ಗೆಲುವಿನ ಆಟ ಆಡಿದರು. ತಂಡ 7 ವಿಕೆಟ್ ಹಾಗೂ 28 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು.

ಇದನ್ನೂ ಓದಿ: Maharaja Trophy: ಅಭಿನವ್-ಶ್ರೇಯಸ್ ಅಬ್ಬರ; ಥ್ರಿಲ್ಲರ್ ಓವರ್​ನಲ್ಲಿ ಮಂಗಳೂರು ಮಣಿಸಿದ ಶಿವಮೊಗ್ಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.