ETV Bharat / sports

ಮಹಾರಾಜ ಟ್ರೋಫಿ: ಮನೀಶ್‌ ಪಾಂಡೆ ಜವಾಬ್ದಾರಿಯುತ ಆಟ, ಗುಲ್ಬರ್ಗ ಮಿಸ್ಟಿಕ್ಸ್‌ಗೆ ಗೆಲುವು - ಗುಲ್ಬರ್ಗ ಮೈಸ್ಟಿಕ್ಸ್‌

ನಾಯಕ ಮನೀಶ್‌ ಪಾಂಡೆ ಆಕರ್ಷಕ ಅರ್ಧಶತಕದಾಟದ ಫಲವಾಗಿ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಶಿವಮೊಗ್ಗ ಸ್ಟ್ರೈಕರ್ಸ್‌ ಎದುರು ಜಯ ಸಾಧಿಸಿತು.

maharaja trophy
ಗುಲ್ಬರ್ಗ ಮೈಸ್ಟಿಕ್ಸ್‌ಗೆ ಜಯ
author img

By

Published : Aug 9, 2022, 10:35 PM IST

ಮೈಸೂರು: ಮನೀಶ್‌ ಪಾಂಡೆ ಆಕರ್ಷಕ ಅರ್ಧಶತಕ ಮತ್ತು ಕೋದಂಡ ಅಜಿತ್‌ ಕಾರ್ತಿಕ್‌ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ಮಹಾರಾಜ ಟ್ರೋಫಿಯ ತನ್ನ ಎರಡನೇ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 3 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಶಿವಮೊಗ್ಗ 8 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿತ್ತು.

176 ರನ್‌ಗಳ ಬೃಹತ್‌ ಮೊತ್ತ ಬೆಂಬತ್ತಿದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಡಿ.ಅವಿನಾಶ್‌ ಬೌಲಿಂಗ್‌ ದಾಳಿಗೆ ಸಿಲುಕಿ ಬೇಗನೆ ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಸ್ವತ್‌ ಆಚಾರ್ಯ (30) ಹಾಗೂ ರೋಹನ್‌ ಪಾಟೀಲ್‌ (28) ಉತ್ತಮ ಆರಂಭ ಒದಗಿಸಿದರು. ಆದರೆ ಭರವಸೆಯ ಆಟಗಾರ ದೇವದತ್ತ ಪಡಿಕ್ಕಲ್‌ 9 ರನ್‌ ಗಳಿಸಿ ನಿರ್ಗಮಿಸಿದಾಗ ಗುಲ್ಬರ್ಗ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದ ಮನೀಶ್‌ ಪಾಂಡೆ 36 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿ 50 ರನ್‌ ಗಳಿಸಿ ಜಯದ ಹಾದಿ ತೋರಿಸಿದರು.

ಅಂತಿಮ ಕ್ಷಣದಲ್ಲಿ ಕೋದಂಡ ಅಜಿತ್‌ ಕಾರ್ತಿಕ್‌ ಕೇವಲ 9 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ ಮೂಲಕ ಅಜೇಯ 22 ರನ್‌ ಕಲೆ ಹಾಕಿ ಇನ್ನೂ 5 ಎಸೆತ ಬಾಕಿ ಇರುವಾಗಲೇ ಜಯ ತಂದಿಟ್ಟರು. ಶಿವಮೊಗ್ಗ ಪರ ಡಿ.ಅವಿನಾಶ್‌ 40 ರನ್‌ಗೆ 5 ವಿಕೆಟ್‌ ಗಳಿಸಿದ್ದು ಪ್ರಯೋಜವಾಗಲಿಲ್ಲ.

ರೋಹನ್‌, ಸಿದ್ಧಾರ್ಥ್‌ ಶತಕದ ಜೊತೆಯಾಟ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಶಿವಮೊಗ್ಗ ಸ್ಟ್ರೈಕರ್ಸ್‌ ಪರ ರೋಹನ್ ಕದಮ್‌ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್‌ 108 ರನ್‌ ಜೊತೆಯಾಟ ಮೂಲಕ ಶಿವಮೊಗ್ಗ ತನ್ನ ಎರಡನೇ ಪಂದ್ಯದಲ್ಲಿ 8 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿತು.

ಆರಂಭಿಕ ಆಟಗಾರ ಸ್ಟಾಲಿನ್‌ ಹೂವರ್‌ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಆದರೆ ರೋಹನ್‌ ಹಾಗೂ ಸಿದ್ಧಾರ್ಥ್‌ ಅವರ ಜೊತೆಯಾಟ ಗುಲ್ಬರ್ಗ ಮಿಸ್ಟಿಕ್ಸ್‌ ತಂಡದ ತಾಳ್ಮೆ ಕೆಡಿಸುವಂತೆ ಮಾಡಿತು. ರೋಹನ್‌ 41 ಎಸೆತಗಳನ್ನೆದುರಿಸಿ 3 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 53 ರನ್‌ ಸಿಡಿಸಿ ಅರ್ಧಶತಕ ಪೂರ್ಣಗೊಳಿಸಿದರು. ಸಿದ್ಧಾರ್ಥ್‌, ತಾಳ್ಮೆಯಲ್ಲಿ 51 ಎಸೆತಗಳನ್ನೆದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 53 ರನ್‌ ಗಳಿಸಿ ಟೂರ್ನಿ ಮೊದಲ ಅರ್ಧ ಶತಕ ಪೂರ್ಣಗೊಳಿಸಿದರು.

ಶಿವಮೊಗ್ಗದ ಇನ್ನಿಂಗ್ಸ್‌ಗೆ ಅಂತಿಮ ಹಂತದಲ್ಲಿ ಮಿಂಚಿನ ಸ್ಪರ್ಷ ನೀಡಿದ್ದು ನಾಯಕ ಕೆ. ಗೌತಮ್‌ ಹಾಗೂ ಡಿ. ಅವಿನಾಶ್‌. ಕೇವಲ ಆರು ಎಸೆತಗಳನ್ನೆದುರಿಸಿದ ಗೌತಮ್‌ 3 ಸಿಕ್ಸರ್‌ ಮತ್ತು 1 ಬೌಂಡರಿ ಸಿಡಿಸಿ ಸವಾಲಿನ ಮೊತ್ತಕ್ಕೆ ನೆರವಾದರು. ಅವಿನಾಶ್‌ ಕೇವಲ 9 ಎಸೆತಗಳನ್ನೆದುರಿಸಿ ಮಿಂಚಿನ ವೇಗದಲ್ಲಿ 19 ರನ್‌ ಗಳಿಸಿದರು.

ಗುಲ್ಬರ್ಗ ಮಿಸ್ಟಿಕ್ಸ್‌ ಪರ ವಿದ್ವತ್‌ ಕಾವೇರಪ್ಪ 2 ವಿಕೆಟ್‌ ಗಳಿಸಿದರೂ 48 ರನ್‌ ನೀಡಿ ದುಬಾರಿ ಬೌಲರ್‌ ಎನಿಸಿದರು. ಕೋದಂಡ ಅಜಿತ್‌ ಕಾರ್ತಿಕ್‌ 29ರನ್‌ಗೆ 3 ವಿಕೆಟ್‌ ಗಳಿಸಿ ತಂಡದ ಪರ ಯಶಸ್ವಿ ಬೌಲರ್‌ ಆದರು. ಮನೋಜ್‌ ಭಾಂಡಗೆ ಮತ್ತು ರಿತೇಶ್‌ ಶ್ರೀಜಿತ್‌ ತಲಾ 1 ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಶಿವಮೊಗ್ಗ ಸ್ಟ್ರೈಕರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175 (ರೋಹನ್‌ ಕದಮ್‌ 53, ಕೃಷ್ಣಮೂರ್ತಿ ಸಿದ್ಧಾರ್ಥ್‌ 53, ಕೆ. ಗೌತಮ್‌ 23, ಡಿ.ಅವಿನಾಶ್‌ 19, ವಿದ್ವತ್‌ ಕಾವೇರಪ್ಪ 48ಕ್ಕೆ2, ಕೋದಂಡ ಅಜಿತ್‌ ಕಾರ್ತಿಕ್‌ 29ಕ್ಕೆ 3).

ಗುಲ್ಬರ್ಗ ಮಿಸ್ಟಿಕ್ಸ್‌: 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ 177 (ಜಸ್ವತ್‌ ಆಚಾರ್ಯ 30, ರೋಹನ್‌ ಪಾಟೀಲ್‌ 28, ಮನೀಶ್‌ ಪಾಂಡೆ 50, ಕೋದಂಡ ಅಜಿತ್‌ ಕಾರ್ತಿಕ್‌ 22*, ರಿತೇಶ್‌ ಭಟ್ಕಳ್‌ 9*, ಡಿ. ಅವಿನಾಶ್‌ 40ಕ್ಕೆ 5)

ಇದನ್ನೂ ಓದಿ : ಮಂಗಳೂರು ಯುನೈಟೆಡ್‌ ತಂಡಕ್ಕೆ ವರುಣ ಕೃಪೆ.. ಮೈಸೂರು ವಾರಿಯರ್ಸ್‌ ವಿರುದ್ಧ 8 ರನ್​ಗಳ ರೋಚಕ ಜಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.