ಬೆಂಗಳೂರು: 23 ವರ್ಷದ ಬಳಿಕ ಫೈನಲ್ ತಲುಪಿರುವ ಮಧ್ಯಪ್ರದೇಶ, 42ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಮುಂಬೈ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿ, ಬೃಹತ್ ಮೊತ್ತದತ್ತ ಗುರಿ ನೆಟ್ಟಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪೃಥ್ವಿ ಶಾ ನೇತೃತ್ವದ ಬಲಿಷ್ಠ ಮುಂಬೈ ತಂಡ ಖ್ಯಾತಿಗೆ ತಕ್ಕಂತೆ ಆಟ ಆರಂಭಿಸಿತು. ಆರಂಭಿಕ ಆಟಗಾರ, ನಾಯಕ ಪೃಥ್ವಿ ಶಾ ಮತ್ತು ಈ ಸಾಲಿನ ರಣಜಿಯಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 87 ರನ್ ಕಲೆ ಹಾಕಿದರು.
-
That's Stumps on Day 1 of the @Paytm #RanjiTrophy #Final. #MPvMUM
— BCCI Domestic (@BCCIdomestic) June 22, 2022 " class="align-text-top noRightClick twitterSection" data="
Madhya Pradesh scalped 5⃣ wickets on the opening Day as Mumbai scored 248 runs.
We will be back for Day 2 action from Bengaluru tomorrow.
Scorecard ▶️ https://t.co/xwAZ13D0nP pic.twitter.com/134DA1o2vy
">That's Stumps on Day 1 of the @Paytm #RanjiTrophy #Final. #MPvMUM
— BCCI Domestic (@BCCIdomestic) June 22, 2022
Madhya Pradesh scalped 5⃣ wickets on the opening Day as Mumbai scored 248 runs.
We will be back for Day 2 action from Bengaluru tomorrow.
Scorecard ▶️ https://t.co/xwAZ13D0nP pic.twitter.com/134DA1o2vyThat's Stumps on Day 1 of the @Paytm #RanjiTrophy #Final. #MPvMUM
— BCCI Domestic (@BCCIdomestic) June 22, 2022
Madhya Pradesh scalped 5⃣ wickets on the opening Day as Mumbai scored 248 runs.
We will be back for Day 2 action from Bengaluru tomorrow.
Scorecard ▶️ https://t.co/xwAZ13D0nP pic.twitter.com/134DA1o2vy
ಫೃಥ್ವಿ ಶಾ 47 ರನ್ ಗಳಿಸಿ ಅರ್ಧಶತಕದಿಂದ ವಂಚಿತರಾದರೆ, ಜೈಸ್ವಾಲ್ 78 ರನ್ ಗಳಿಸಿ ಶತಕದ ಸಮೀಪದಲ್ಲಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಆಟಗಾರರಾದ ಅರ್ಮಾನ್ ಜಾಫರ್ 26, ಸುವೀದ್ ಪಾರ್ಕರ್ 18, ಹಾರ್ದಿಕ್ ತಮೋರೆ 24 ರನ್ಗಳ ಅಲ್ಪ ಮೊತ್ತಕ್ಕೆ ಔಟಾದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿರುವ ಸರ್ಫರಾಜ್ ಖಾನ್ 40 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದರೆ, ಶಾಮ್ಸ್ ಮುಲಾನಿ 12 ರನ್ಗಳಿಂದ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮಧ್ಯಪ್ರದೇಶದ ಪರವಾಗಿ ಬಿರುಸಿನ ಬೌಲಿಂಗ್ ದಾಳಿ ಮಾಡಿದ ಅನುಭವ್ ಅಗರ್ವಾಲ್, ಸರನ್ಶಾ ಜೈನ್ ತಲಾ 2 ವಿಕೆಟ್ ಪಡೆದರೆ, ಕುಮಾರ್ ಕಾರ್ತಿಕೇಯ್ 1 ವಿಕೆಟ್ ಪಡೆದರು. ಇನ್ನೂ ಮೂರು ದಿನ ಆಟ ಬಾಕಿ ಉಳಿದಿದೆ.
ಇದನ್ನೂ ಓದಿ: ಭಾರತ ಮಹಿಳಾ ತಂಡದ ಮಾಜಿ ನಾಯಕಿ ರುಮೇಲಿ ಧಾರ್ ಕ್ರಿಕೆಟ್ಗೆ ಗುಡ್ಬೈ