ಮುಂಬೈ: ನಾಯಕ ಫಾಫ್ ಡು ಪ್ಲೆಸಿಸ್ ಅವರ 96 ರನ್ಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಕಳೆದುಕೊಂಡು 181 ರನ್ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಆರ್ಸಿಬಿ ಇಂದೂ ಕೂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಯುವ ಆರಂಭಿಕ ಬ್ಯಾಟರ್ ಅನುಜ್ ರಾವತ್(4) ಮತ್ತು ವಿರಾಟ್ ಕೊಹ್ಲಿ(0) ಮೊದಲ ಓವರ್ನಲ್ಲೇ ದುಷ್ಮಂತ ಚಮೀರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಆದರೆ 3ನೇ ವಿಕೆಟ್ಗೆ ಮ್ಯಾಕ್ಸ್‌ವೆಲ್ ಜೊತೆಗೂಡಿ 37 ರನ್ಗಳ ಜೊತೆಯಾಟ ನಡೆಸಿದರು. ಚಮೀರ ಬೌಲಿಂಗ್ನಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ಅಬ್ಬರದ ಮುನ್ಸೂಚನೆ ನೀಡಿದರಾದರೂ, ಕೃನಾಲ್ ಪಾಂಡ್ಯ ಸ್ಪಿನ್ ಮೋಡಿಗೆ ಬಲಿಯಾದರು. ನಂತರ ಬಂದಂತಹ ಪ್ರಭುದೇಸಾಯಿ(10) ಕೂಡ ಹೆಚ್ಚು ಹೊತ್ತು ನಿಲ್ಲಿಲ್ಲ.
62ಕ್ಕೆ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಆರ್ಸಿಬಿ ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯಬಹುದೆಂದು ನಿರೀಕ್ಷಿಸಲಾಗಿತ್ತು, ಆದರೆ ಪ್ಲೆಸಿಸ್ ಯುವ ಆಲ್ರೌಂಡರ್ ಶಹಬಾಜ್(26) ಜೊತೆಗೂಡಿ 70 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಶಹಬಾಜ್ ರನ್ಔಟ್ಗೆ ಬಲಿಯಾದರು.
ನಂತರ ದಿನೇಶ್ ಕಾರ್ತಿಕ್ ಜೊತೆಗೂಡಿದ ನಾಯಕ 49 ರನ್ಗಳ ಜೊತೆಯಾಟ ನೀಡಿದರು. 64 ಎಸೆತಗಳನ್ನೆದುರಿಸಿದ ಡುಪ್ಲೆಸಿಸ್ 11 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 96 ರನ್ಗಳಿಸಿ ಕೊನೆಯ ಓವರ್ನ 5ನೇ ಎಸೆತದಲ್ಲಿ ಔಟಾಗಿ 4 ರನ್ಗಳಿಂದ ಶತಕವಂಚಿತರಾದರು. ಕಾರ್ತಿಕ್ ಅಜೇಯ 13 ರನ್ಗಳಿಸಿದರು. ಲಖನೌ ಪರ ಜೇಸನ್ ಹೋಲ್ಡರ್ 25ಕ್ಕೆ2, ಕೃನಾಲ್ ಪಾಂಡ್ಯ 29ಕ್ಕೆ1, ಚಮೀರ 31ಕ್ಕೆ2 ವಿಕೆಟ್ ಪಡೆದರು.
ಎರಡೂ ತಂಡಗಳು ಟೂರ್ನಿಯಲ್ಲಿ ಸಮಾನ ಪ್ರದರ್ಶನ ತೋರಿವೆ. 6 ಪಂದ್ಯಗಳಲ್ಲಿ 4 ಗೆಲುವು 2 ಸೋಲು ಕಂಡಿದ್ದು ಲಖನೌ 3 ಮತ್ತು ಆರ್ಸಿಬಿ 4ನೇ ಸ್ಥಾನದಲ್ಲಿದೆ. ಈ ಹೈವೊಲ್ಟೇಜ್ ಪಂದ್ಯದಲ್ಲಿ ಗೆದ್ದ ತಂಡ ಇಂದು ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೀ), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್(ವಿಕೀ), ಮನೀಶ್ ಪಾಂಡೆ, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್