ETV Bharat / sports

ಟಿ- 20ಯಲ್ಲಿ ಅಲ್ಪ ಮೊತ್ತದ ಗುರಿಯೊಂದಿಗೆ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿದ ತಂಡಗಳು ಇವೇ ನೋಡಿ

ಟಿ- 20 ಪಂದ್ಯಗಳಲ್ಲಿ ಕಡಿಮೆ ಮೊತ್ತದ ಗುರಿಯೊಂದಿಗೆ ಭಾರತದ ವಿರುದ್ಧ ಗೆಲುವು ದಾಖಲಿಸಿದ ತಂಡಗಳ ಬಗ್ಗೆ ಇಲ್ಲಿದೆ ಮಾಹಿತಿ.

ಟೀಂ ಇಂಡಿಯಾ
ಟೀಂ ಇಂಡಿಯಾ
author img

By

Published : Aug 5, 2023, 12:22 PM IST

ಹೈದರಾಬಾದ್​: ಟೀಂ ಇಂಡಿಯಾ​ ಸದ್ಯ ಎಲ್ಲ ಮೂರು ಮಾದರಿಯ ಕ್ರಿಕೆಟ್​ ರ‍್ಯಾಂಕಿಂಗ್​ನಲ್ಲಿಅಗ್ರ 10ರಲ್ಲಿದ್ದು ಬಲಿಷ್ಠ ತಂಡವಾಗಿದೆ. ಅದರಲ್ಲೂ ಟಿ-20 ರ‍್ಯಾಂಕಿಂಗ್​​ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ ಭಾರತ. ಆದರೇ, ಮೊನ್ನೆ ನಡೆದ ವೆಸ್ಟ್​ ಇಂಡೀಸ್​​ ವಿರುದ್ಧದ T-20 ಸರಣಿಯ ಮೊದಲ ಪಂದ್ಯದಲ್ಲಿ ಸಾಧಾರಣ ಗುರಿಯನ್ನು ಚೇಸ್ ಮಾಡುವಲ್ಲಿ ತಂಡ ವಿಫಲವಾಗಿ 4 ರನ್​ಗಳಿಂದ ಸೋಲು ಕಂಡಿತ್ತು. ಹೀಗೆ ಅಲ್ಪ ಮೊತ್ತದ ಗುರಿಯೊಂದಿಗೆ ಬಲಿಷ್ಠ ಭಾರತದ ಎದುರು ಗೆದ್ದಿರುವ ತಂಡಗಳು ಈ ಕೆಳಗಿವೆ.

ಭಾರತ vs ನ್ಯೂಜಿಲ್ಯಾಂಡ್​​​; 2016ರಲ್ಲಿ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತ 47 ರನ್​ಗಳ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲ ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್​ ​ 126 ರನ್​ಗಳ ಸಾಧರಣ ಗುರಿಯನ್ನು ನೀಡಿತ್ತು. ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಭಾರತ 79 ರನ್​ಗಳಿಗೆ ಸರ್ವ ಪತನ ಕಂಡಿತ್ತು. ಈ ಮೂಲಕ ಅಲ್ಪಮೊತ್ತದ ಗುರಿಯೊಂದಿಗೆ ಭಾರತದ ವಿರುದ್ಧ ನ್ಯೂಜಿಲ್ಯಾಂಡ್​​​ ಗೆಲುವು ಸಾಧಿಸಿತ್ತು.

ಭಾರತ vs ದಕ್ಷಿಣ ಆಫ್ರಿಕಾ :2009ರಲ್ಲಿ ನಡೆದ ಟಿ-20 ವಿಶ್ವಕಪ್​ ಟೂರ್ನಿಯ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 12ರನ್​ಗಳ ಜಯಗಳಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಹರಿಣಗಳು 130 ರನ್​ಗಳ ಸಾಧರಣ ಗುರಿಯನ್ನು ನೀಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ 118ರನ್​ಗಳಿಸಿ 12 ರನ್​ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ(29), ಗೌತಮ್​ ಗಂಭೀರ್(21)​, ಯೂವರಾಜ್​ ಸಿಂಗ್(25)​ ಹೈಸ್ಕೋರರ್​ ಆಗಿದ್ದರು.

ಭಾರತ vs ಜಿಂಬಾಬ್ವೆ: 2015ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 10 ರನ್​ಗಳ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಜಿಂಬಾಬ್ವೆ 145ರನ್​ಗಳ ಗುರಿಯನ್ನು ನೀಡಿತ್ತು. ಸಾಧಾರಣ ಗುರಿ ಬೆನ್ನಟ್ಟಿದ ಭಾರತ 135 ರನ್​ಗಳಿಸಲಷ್ಟೇ ಶಕ್ತವಾಗಿತ್ತು. ರಾಬಿನ್​ ಉತ್ತಪ್ಪ(42), ಸ್ಟುವರ್ಟ್​ ಬಿನ್ನಿ(24), ಸಂಜು ಸ್ಯಾಮ್ಸನ್(19)​ ಹೊರತು ಪಡಿಸಿ ಉಳಿದ ಆಟಗಾರರು ರನ್​ ಕಲೆಹಾಕುವಲ್ಲಿ ವಿಫಲರಾಗಿದ್ದರು.

ಭಾರತ vs ವೆಸ್ಟ್​ ಇಂಡೀಸ್ (2023): ಸದ್ಯ ವೆಸ್ಟ್ ಇಂಡೀಸ್​ ಪ್ರವಾಸದಲ್ಲಿರವ ಭಾರತ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಮೊದಲು ಬ್ಯಾಟ್​ ಮಾಡಿದ ವಿಂಡೀಸ್​ 150 ರನ್​ಗಳ ಗುರಿಯನ್ನು ನೀಡಿತ್ತು. ಇದಕ್ಕೆ ಉತ್ತರವಾಗಿ ಭಾರತ 145 ರನ್​ಗಳಿಸಿ 5ರನ್​ಗಳ ಸೋಲನುಭವಿಸಿತು. ಪಂದ್ಯದಲ್ಲಿ ಭಾರತದ ಪರ ತಿಲಕ್​ ವರ್ಮಾ(39) ಹೈಸ್ಕೋರರ್​ ಆಗಿದ್ದರು.

ಇದನ್ನೂ ಓದಿ: ಭಾರತದ ವಿರುದ್ಧದ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್​ನ 'ಬಾಜ್‌ಬಾಲ್' ಆಟ: ಝಾಕ್ ಕ್ರಾಲಿ ಉತ್ಸುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.