ನವದೆಹಲಿ : ಕಿವೀಸ್ ನೆಲದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಈಗಾಗಲೇ ನಡೆದಿರುವ 11 ಟೂರ್ನಮೆಂಟ್ಗಳಲ್ಲಿ ಮೂರು ತಂಡಗಳು ಮಾತ್ರ ಟ್ರೋಫಿಯನ್ನು ಎತ್ತಿ ಹಿಡಿದಿವೆ. ಅದರಲ್ಲೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರಾಬಲ್ಯ ಸಾಧಿಸಿದ್ದು, ಕ್ರಮವಾಗಿ 6 ಮತ್ತು 4 ಬಾರಿ ಚಾಂಪಿಯನ್ ಎನಿಸಿಕೊಂಡಿವೆ.
ಮಹಿಳಾ ವಿಶ್ವಕಪ್ 1973 ರಿಂದ ಆರಂಭವಾಗಿದ್ದು, ಈವರೆಗೆ 11 ಆವೃತ್ತಿಗಳನ್ನು ಪೂರೈಸಿ 12ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಮಹಿಳಾ ಕ್ರಿಕೆಟ್ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಆಸ್ಟ್ರೇಲಿಯಾ ವನಿತಾ ತಂಡ 6 ಬಾರಿ ಚಾಂಪಿಯನ್ ಮತ್ತು 2 ಸಾರಿ ರನ್ನರ್ ಅಪ್ ಆಗಿದೆ. ಇಂಗ್ಲೆಂಡ್ 4 ಬಾರಿ ಚಾಂಪಿಯನ್ ಮತ್ತು 3 ಬಾರಿ ರನ್ನರ್ ಅಪ್ ಆಗಿದೆ.
ಇದನ್ನೂ ಓದಿ:ಮಂಧಾನ, ಬೌಲರ್ಸ್ ಮಿಂಚಿನ ಪ್ರದರ್ಶನ: ವಿಂಡೀಸ್ ವನಿತೆಯರ ವಿರುದ್ಧ ಭಾರತಕ್ಕೆ 81ರನ್ಗಳ ಜಯ
ಪ್ರಬಲ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ತಕ್ಕ ಮಟ್ಟಿನ ಪೈಪೋಟಿ ನೀಡಿರುವ ನ್ಯೂಜಿಲ್ಯಾಂಡ್ ತಂಡ ಒಮ್ಮೆ ಚಾಂಪಿಯನ್ ಆಗಿದ್ದರೆ, 3 ಬಾರಿ ರನ್ನರ್ ಅಪ್ ಆಗಿದೆ.
2000ದಿಂದೀಚೆಗೆ ಮಹಿಳಾ ಕ್ರಿಕೆಟ್ನಲ್ಲಿ ತಕ್ಕಮಟ್ಟಿನ ಸ್ಪರ್ಧೆಯನ್ನು ನೀಡುತ್ತಿರುವ ಭಾರತ ಮಹಿಳಾ ತಂಡ 2005 ಮತ್ತು 2017ರಲ್ಲಿ ಫೈನಲ್ ತಲುಪಿರುವುದೇ ದೊಡ್ಡ ಸಾಧನೆ.
ವೆಸ್ಟ್ ಇಂಡೀಸ್ ಕೂಡ ಒಮ್ಮೆ ಫೈನಲ್ ತಲುಪಿದ ಸಾಧನೆ ಮಾಡಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಉಳಿದ ಯಾವುದೇ ರಾಷ್ಟ್ರ ಈವರೆಗೂ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿವೆ.
ಮಹಿಳಾ ಏಕದಿನ ವಿಶ್ವಕಪ್ ವಿಜೇತರು ಮತ್ತು ರನ್ನರ್ ಅಪ್ ತಂಡ
ವರ್ಷ - ವಿಜೇತ ತಂಡ - ರನ್ನರ್ಸ್ ಅಪ್ -ಆತಿಥ್ಯ
1973 ಇಂಗ್ಲೆಂಡ್ ಆಸ್ಟ್ರೇಲಿಯಾ ಇಂಗ್ಲೆಂಡ್
1978 ಆಸ್ಟ್ರೇಲಿಯಾ ಇಂಗ್ಲೆಂಡ್ ಭಾರತ
1982 ಆಸ್ಟ್ರೇಲಿಯಾ ಇಂಗ್ಲೆಂಡ್ ನ್ಯೂಜಿಲ್ಯಾಂಡ್
1988 ಆಸ್ಟ್ರೇಲಿಯಾ ಇಂಗ್ಲೆಂಡ್ ಆಸ್ಟ್ರೇಲಿಯಾ
1993 ಇಂಗ್ಲೆಂಡ್ ನ್ಯೂಜಿಲೆಂಡ್ ಇಂಗ್ಲೆಂಡ್
1997 ಆಸ್ಟ್ರೇಲಿಯಾ ನ್ಯೂಜಿಲೆಂಡ್ ಇಂಡಿಯಾ
2000 ನ್ಯೂಜಿಲೆಂಡ್ ಆಸ್ಟ್ರೇಲಿಯ ನ್ಯೂಜಿಲೆಂಡ್
2005- ಆಸ್ಟ್ರೇಲಿಯಾ ಭಾರತ ದಕ್ಷಿಣ ಆಫ್ರಿಕಾ
2009 ಇಂಗ್ಲೆಂಡ್ ನ್ಯೂಜಿಲೆಂಡ್ ಆಸ್ಟ್ರೇಲಿಯಾ
2013 ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಇಂಡಿಯಾ
2017 ಇಂಗ್ಲೆಂಡ್ ಭಾರತ ಇಂಗ್ಲೆಂಡ್