ನವದೆಹಲಿ: ಕ್ಯಾನ್ಸರ್ನಿಂದ ಬಳಲುತ್ತಿದ್ದ ಲೆಜೆಂಡರಿ ಕೋಚ್ ತಾರಕ್ ಸಿನ್ಹಾ ಶನಿವಾರ ತಮ್ಮ 71 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಸುರೀಂದರ್ ಖನ್ನಾ, ಮನೋಜ್ ಪ್ರಭಾಕರ್, ಅಜಯ್ ಶರ್ಮಾ, ಅತುಲ್ ವಸ್ಸಾನ್, ಆಶೀಶ್ ನೆಹ್ರಾ, ಸಂಜೀವ್ ಶರ್ಮಾ, ಆಕಾಶ್ ಚೋಪ್ರಾ, ಶಿಖರ್ ಧವನ್, ಅಂಜುಮ್ ಚೋಪ್ರಾ ಮತ್ತು ರಿಷಭ್ ಪಂತ್ ಅಂತಹ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಮತ್ತು ನೂರಾರು ಪ್ರಥಮ ದರ್ಜೇ ಕ್ರಿಕೆಟಿಗರಿಗೆ ತರಬೇತಿ ನೀಡಿದ್ದರು.
-
Ustaad Ji is no more. Dronacharya Awardee. Coach to over a dozen India Test cricketers. And scores of first-class cricketers. Both men and women. Without any institutional help. Your service to Indian cricket will be remembered, sir. May your soul R.I.P.
— Aakash Chopra (@cricketaakash) November 6, 2021 " class="align-text-top noRightClick twitterSection" data="
Om Shanti 🙌🙏 pic.twitter.com/fDmvdJC8vZ
">Ustaad Ji is no more. Dronacharya Awardee. Coach to over a dozen India Test cricketers. And scores of first-class cricketers. Both men and women. Without any institutional help. Your service to Indian cricket will be remembered, sir. May your soul R.I.P.
— Aakash Chopra (@cricketaakash) November 6, 2021
Om Shanti 🙌🙏 pic.twitter.com/fDmvdJC8vZUstaad Ji is no more. Dronacharya Awardee. Coach to over a dozen India Test cricketers. And scores of first-class cricketers. Both men and women. Without any institutional help. Your service to Indian cricket will be remembered, sir. May your soul R.I.P.
— Aakash Chopra (@cricketaakash) November 6, 2021
Om Shanti 🙌🙏 pic.twitter.com/fDmvdJC8vZ
ಸೊನೆಟ್ ಕ್ರಿಕೆಟ್ ಕ್ಲಬ್ನ ಸಂಸ್ಥಾಪಕರಾದ ತಾರಕ್ ಸಿನ್ಹಾ ನಿಧರಾಗಿರುವ ಸುದ್ದಿಯನ್ನ ಹಂಚಿಕೊಳ್ಳುವುದಕ್ಕೆ ನಮಗೆ ತುಂಬಾ ದುಃಖವಾಗುತ್ತಿದೆ. ಕಳೆದ ಎರಡು ತಿಂಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಸಿನ್ಹಾ ಅವರು ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಭಾರತ ಮತ್ತು ಡೆಲ್ಲಿ ಕ್ರಿಕೆಟ್ಗೆ ಹಲವು ಸ್ಟಾರ್ ಕ್ರಿಕೆಟರ್ಗಳನ್ನು ನೀಡಿದ್ದ ಅವರು ಸೋನೆಟ್ ಕ್ರಿಕೆಟ್ ಕ್ಲಬ್ ಜೀವಾಳವಾಗಿದ್ದರು. ಇಷ್ಟು ದಿನ ಅವರ ಚೇತರಿಕೆಗೆ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ಹೇಳಲು ಬಯಸುತ್ತೇವೆ ಎಂದು ಸೊನೆಟ್ ಕ್ರಿಕೆಟ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಿನ್ಹಾ ಭಾರತ ಸರ್ಕಾರ ನೀಡುವ ದ್ರೋಣಾಚಾರ್ಯ ಪ್ರಶಸ್ತಿ ಪಡೆದ 5ನೇ ಕ್ರಿಕೆಟ್ ಕೋಚ್ ಆಗಿದ್ದರು. ದೇಶ್ ಪ್ರೇಮ್ ಅಜಾದ್, ಗುರುಚರಣ್ ಸಿಂಗ್, ರಮಾಕಾಂತ್ ಅಚ್ರೇಕರ್ ಮತ್ತು ಸುನಿತಾ ಶರ್ಮಾ ಮಾತ್ರ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.
ಇದನ್ನು ಓದಿ:ಒಂದೆರೆಡು ಕೆಟ್ಟ ಪ್ರದರ್ಶನದ ಆಧಾರದ ಮೇಲೆ ನಮ್ಮ ತಂಡದ ಸಾಮರ್ಥ್ಯ ನಿರ್ಧರಿಸಬೇಡಿ: ಜಡೇಜಾ