ಸಿಡ್ನಿ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬೌಲರ್ ಬ್ರೆಟ್ ಲೀ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಎದುರಿಸಿದ ಇಬ್ಬರು ಗ್ರೇಟೆಸ್ಟ್ ಆಟಗಾರರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ಬ್ರಿಯನ್ ಲಾರಾ ಹಾಗೂ ಕ್ರಿಕೆಟ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಬ್ಬರು ನಾನು ಬೌಲಿಂಗ್ ಮಾಡಿರುವ ಶ್ರೇಷ್ಠ ಬ್ಯಾಟ್ಸ್ಮನ್ಗಳು ಎಂದಿದ್ದಾರೆ.
ಆದರೆ, ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ಲಾರಾ ಅವರ ಹೊಡೆತಗಳನ್ನು ಊಹಿಸುವುದು ಕಷ್ಟಕರವಾಗುತಿತ್ತು ಎಂದಿದ್ದಾರೆ. ನಾನು ಬೌಲಿಂಗ್ ಮಾಡುವ ಸಮಯದಲ್ಲಿ ಸಚಿನ್ ಹಾಗೂ ಲಾರಾ ಸರ್ವ ಶ್ರೇಷ್ಠ ಆಟಗಾರರು, ಅಲ್ಲದೇ ನನಗೆ ಇಬರಿಬ್ಬರು ನೆಚ್ಚಿನ ಆಟಗಾರರಾಗಿದ್ರು, ಲಾರಾ ಸರಳವಾಗಿ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದರು ಎಂದಿದ್ದಾರೆ.
ಐಸಿಸಿ ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ನಾನು ಆಫ್ ಸ್ಟಂಪ್ಸ್ ಮೇಲೆ ಸತತ 6 ಎಸೆತಗಳ ಹಾಕಲು ನಿರ್ಧರಿಸಿದರೆ ಬ್ಯಾಟಿಂಗ್ನಲ್ಲಿ ಬ್ರಿಯನ್ ಲಾರಾ ಇದ್ದರೆ, ಅವರು ಆ ಆರು ಎಸೆತಗಳನ್ನೂ ಒಂದೊಂದು ಕಡೆ ಹೊಡೆಯುತ್ತಾರೆ ಎಂದಿದ್ದಾರೆ.
ಓದಿ: ಆಲಿಯಾ ಭಟ್ ಜೊತೆ ಹೆಜ್ಜೆ ಹಾಕಿದ್ರಾ ಡೇವಿಡ್ ವಾರ್ನರ್? ಕ್ರಿಕೆಟಿಗನ ಕಿತಾಪತಿ ನೀವೇ ನೋಡಿ